ನವೋದಯ ಕಾವ್ಯದ ಮೇಲೆ ವಚನಗಳ ಪ್ರಭಾವ
Main Article Content
Abstract
12ನೇ ಶತಮಾನದ ಬಸವಾದಿ ಶರಣರ ವಚನ ಸಾಹಿತ್ಯವು ಆಧುನಿಕ ಕನ್ನಡದ ನವೋದಯ ಕಾವ್ಯದ ಮೇಲೆ ಬೀರಿದ ಅಗಾಧ ಪ್ರಭಾವವನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಕುವೆಂಪು ಅವರ ‘ಕಿಂಕಿಣಿ’, ದ.ರಾ. ಬೇಂದ್ರೆಯವರ ‘ಕರುಳಿನ ವಚನಗಳು’ ಹಾಗೂ ‘ನಾಕುತಂತಿ’, ಮಧುರಚೆನ್ನರ ‘ನನ್ನನಲ್ಲ’, ವಿ.ಕೃ. ಗೋಕಾಕರ ಮುಕ್ತಛಂದಸ್ಸಿನ ಪ್ರಯೋಗಗಳ ಮೇಲೆ ವಚನಗಳ ತಾತ್ವಿಕತೆ, ಭಾಷೆ, ಲಯ ಮತ್ತು ಅನುಭಾವ ಹೇಗೆ ಗಾಢವಾಗಿ ಕೆಲಸ ಮಾಡಿದೆ ಎಂಬುದನ್ನು ಸೋದಾಹರಣವಾಗಿ ಚರ್ಚಿಸಲಾಗಿದೆ. ಕೇವಲ ಇಂಗ್ಲಿಷ್ ರೋಮ್ಯಾಂಟಿಕ್ ಕಾವ್ಯದ ಪ್ರೇರಣೆಯಲ್ಲದೆ, ಅಪ್ಪಟ ದೇಶೀಯ ನೆಲೆಯ ವಚನ ಪರಂಪರೆಯು ನವೋದಯದ ಪ್ರಮುಖ ಕವಿಗಳ ಅಭಿವ್ಯಕ್ತಿ ಮಾಧ್ಯಮವಾಗಿ, ಹೊಸ ಕಾವ್ಯಮಾರ್ಗ ಮತ್ತು ಮುಕ್ತಛಂದಸ್ಸಿನ ಆವಿಷ್ಕಾರಕ್ಕೆ ಹೇಗೆ ಮೂಲ ಪ್ರೇರಕಶಕ್ತಿಯಾಯಿತು ಎನ್ನುವುದನ್ನು ಸಾಹಿತ್ಯಿಕ ವಿಮರ್ಶೆಗಳ ಹಿನ್ನೆಲೆಯಲ್ಲಿ ನಿರೂಪಿಸಲಾಗಿದೆ. ವಚನಗಳ ಸಾಮಾಜಿಕ ಕಳಕಳಿ ಹಾಗೂ ಅಧ್ಯಾತ್ಮಿಕ ನಿಲುವುಗಳು ಆಧುನಿಕ ಕವಿಗಳ ಸೃಜನಶೀಲತೆಗೆ ದಾರಿದೀಪವಾದ ಬಗೆಯನ್ನು ಇದು ಸ್ಪಷ್ಟಪಡಿಸುತ್ತದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಕುವೆಂಪು, (2007), ಸಮಗ್ರ ಗದ್ಯ ಸಂಪುಟ-1 (ವಚನಕಾರ ಬಸವೇಶ್ವರ), ಮೈಸೂರು: ಉದಯರವಿ ಪ್ರಕಾಶನ, ಪು.ಸಂ. 298.
ಅದೇ, ಪು.ಸಂ. 299.
ಶಿವರುದ್ರಪ್ಪ ಜಿ.ಎಸ್., (1990), ಕುವೆಂಪು ಪುನರಾಲೋಕನ, ಬೆಂಗಳೂರು: ಪ್ರಸಾರಾಂಗ (ಬೆಂಗಳೂರು ವಿಶ್ವವಿದ್ಯಾಲಯ), ಪು.ಸಂ. 29.
ಅದೇ, ಪು.ಸಂ. 29.
ನಾಯಕ ಹಾ.ಮಾ., (1988), ಸಂಚಯ, ಮೈಸೂರು: ಗೀತಾ ಬುಕ್ ಹೌಸ್, ಪು.ಸಂ. 108.
ಕುವೆಂಪು, (1946), ಕಿಂಕಿಣಿ, ಮೈಸೂರು: ಉದಯರವಿ ಪ್ರಕಾಶನ, ಪು.ಸಂ. (ವಚನ. 7).
ಅದೇ, ಪು.ಸಂ. (ವಚನ. 11).
ಅದೇ, ಪು.ಸಂ. (ವಚನ. 36).
ನಾಯಕ ಹಾ.ಮಾ., (1988), ಸಂಚಯ, ಮೈಸೂರು: ಗೀತಾ ಬುಕ್ ಹೌಸ್, ಪು.ಸಂ. 116.
ಗುರುಲಿಂಗ ಕಾಪಸೆ, (1980), ಮಧುರಚೆನ್ನ: ಜೀವನ ಹಾಗೂ ಕೃತಿಗಳ ಸಮೀಕ್ಷೆ, ಧಾರವಾಡ: ಪ್ರಸಾರಾಂಗ (ಕರ್ನಾಟಕ ವಿಶ್ವವಿದ್ಯಾಲಯ), ಪು.ಸಂ. 231.
ಅದೇ, ಪು.ಸಂ. 231.
ಮಧುರಚೆನ್ನ, (1933), ನನ್ನನಲ್ಲ, ಧಾರವಾಡ: ಸಮಾಜ ಪುಸ್ತಕಾಲಯ, ಪು.ಸಂ. 8.
ಗುರುಲಿಂಗ ಕಾಪಸೆ, (1980), ಮಧುರಚೆನ್ನ: ಜೀವನ ಹಾಗೂ ಕೃತಿಗಳ ಸಮೀಕ್ಷೆ, ಧಾರವಾಡ: ಪ್ರಸಾರಾಂಗ (ಕರ್ನಾಟಕ ವಿಶ್ವವಿದ್ಯಾಲಯ), ಪು.ಸಂ. 226.
ಬೇಂದ್ರೆ ದ.ರಾ., (1969), ಸಾಹಿತ್ಯದ ವಿರಾಟ ಸ್ವರೂಪ, ಧಾರವಾಡ: ಸಮಾಜ ಪುಸ್ತಕಾಲಯ, ಪು.ಸಂ. 196.
ಆಮೂರ ಜಿ.ಎಸ್., (1992), ಭುವನದ ಭಾಗ್ಯ, ಬೆಂಗಳೂರು: ಸಿ.ವಿ.ಜಿ. ಪಬ್ಲಿಕೇಷನ್ಸ್, ಪು.ಸಂ. 260.
ಗಿರಡ್ಡಿ ಗೋವಿಂದರಾಜ, (1989), ಕಾವ್ಯವನ್ನು ಕುರಿತು, ಧಾರವಾಡ: ಸೃಷ್ಟಿ ಪ್ರಕಾಶನ, ಪು.ಸಂ. 318.
ಬೇಂದ್ರೆ ದ.ರಾ., (1969), ಸಾಹಿತ್ಯದ ವಿರಾಟ ಸ್ವರೂಪ, ಧಾರವಾಡ: ಸಮಾಜ ಪುಸ್ತಕಾಲಯ, ಪು.ಸಂ. 198.
ಬೇಂದ್ರೆ ದ.ರಾ., (1938), ಉಯ್ಯಾಲೆ, ಧಾರವಾಡ: ಸಮಾಜ ಪುಸ್ತಕಾಲಯ, ಪು.ಸಂ. ಮುನ್ನುಡಿ.
ಗಿರಡ್ಡಿ ಗೋವಿಂದರಾಜ, (2007), ಕನ್ನಡ ಕಾವ್ಯ ಪರಂಪರೆ ಮತ್ತು ಬೇಂದ್ರೆಯವರ ಕಾವ್ಯ, ಧಾರವಾಡ: ಸೃಷ್ಟಿ ಪ್ರಕಾಶನ, ಪು.ಸಂ. 35.
ಗಿರಡ್ಡಿ ಗೋವಿಂದರಾಜ, (1989), ಕಾವ್ಯವನ್ನು ಕುರಿತು, ಧಾರವಾಡ: ಸೃಷ್ಟಿ ಪ್ರಕಾಶನ, ಪು.ಸಂ. 257.
ರಂಗಣ್ಣ ಎಸ್.ವಿ., (1963), ರಂಗಬಿನ್ನಪ, ಮೈಸೂರು: ಶಾರದಾ ಮಂದಿರ, ಪು.ಸಂ. 4-5.
ಶಿವರುದ್ರಪ್ಪ ಜಿ.ಎಸ್., (2007), ಸಮಗ್ರ ಗದ್ಯ-2, ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರ, ಪು.ಸಂ. 434-435.
ಗುರುಲಿಂಗ ಕಾಪಸೆ, (2001), ವಚನಸಾಹಿತ್ಯ ಮತ್ತು ಆಧುನಿಕ ಕನ್ನಡ ಸಾಹಿತ್ಯ ಮುಖಾಮುಖಿ, ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು, ಪು.ಸಂ. 2-3.