‘ನರೆಯಂಗಲ್ ಪನ್ನೆರಡು’ ಪ್ರದೇಶ - ಪದ ನಿಷ್ಪತ್ತಿ, ಸ್ಥಳನಾಮ ವಿವೇಚನೆ

Main Article Content

ಸಿದ್ದಲಿಂಗೇಶ ಉ. ಸಜ್ಜನಶೆಟ್ಟರ

Abstract

ಉತ್ತರ ಕರ್ನಾಟಕದ ಪ್ರಾಚೀನ ಆಡಳಿತ ವಿಭಾಗವಾದ ‘ಬೆಳವಲ-300’ರ ಪ್ರಮುಖ ಉಪವಿಭಾಗವಾಗಿದ್ದ ‘ನರೆಯಂಗಲ್ ಪನ್ನೆರಡು’ (12 ಹಳ್ಳಿಗಳ ಸಮೂಹ) ಪ್ರದೇಶದ ಐತಿಹಾಸಿಕ, ಭೌಗೋಳಿಕ ಹಾಗೂ ಸಾಂಸ್ಕೃತಿಕ ಮಹತ್ವವನ್ನು ಶಾಸನಗಳ ಆಧಾರದ ಮೇಲೆ ಇಲ್ಲಿ ವಿಶ್ಲೇಷಿಸಲಾಗಿದೆ. ರಾಷ್ಟ್ರಕೂಟ ಮತ್ತು ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಪ್ರವರ್ಧಮಾನಕ್ಕೆ ಬಂದಿದ್ದ ಈ ಆಡಳಿತ ಕೇಂದ್ರದ ಗ್ರಾಮಗಳಾದ ನರೇಗಲ್, ಕೋಟುಮುಚಗಿ, ಅಬ್ಬಿಗೇರಿ, ಜಕ್ಕಲಿ, ಹಾಲಕೇರಿ ಮುಂತಾದವುಗಳ ಸ್ಥಳನಾಮಗಳ ಉಗಮ, ವಿಕಾಸ ಹಾಗೂ ಪದನಿಷ್ಪತ್ತಿಯನ್ನು ವಸ್ತುನಿಷ್ಠವಾಗಿ ಚರ್ಚಿಸಲಾಗಿದೆ. ಕಾಲಾನಂತರದಲ್ಲಿ ಆಯಾ ಗ್ರಾಮಗಳ ಪ್ರಾಚೀನ ಹೆಸರುಗಳು ಇಂದಿನ ರೂಢಿಗತ ಹೆಸರುಗಳಾಗಿ ಹೇಗೆ ಮಾರ್ಪಾಡು ಹೊಂದಿದವು ಎಂಬುದನ್ನು ಭೌಗೋಳಿಕ ಹಾಗೂ ಸಾಮಾಜಿಕ ಹಿನ್ನೆಲೆಯೊಂದಿಗೆ ವಿವರಿಸಲಾಗಿದೆ. ಈ ಮೂಲಕ ಸ್ಥಳನಾಮಗಳ ಅಧ್ಯಯನವು ನಮ್ಮ ಪೂರ್ವಜರ ಇತಿಹಾಸ ಮತ್ತು ಸಂಸ್ಕೃತಿಯನ್ನು ಹೇಗೆ ಮರುಸೃಷ್ಟಿಸುತ್ತದೆ ಎಂಬ ಅಂಶವನ್ನು ದೃಢಪಡಿಸಲಾಗಿದೆ.

Article Details

Section

Research Articles

Author Biography

ಸಿದ್ದಲಿಂಗೇಶ ಉ. ಸಜ್ಜನಶೆಟ್ಟರ

ಸಂಶೋಧನಾ ವಿದ್ಯಾರ್ಥಿ, ಎಂ.ಎಂ. ಕಲಬುರ್ಗಿ ಸಂಶೋಧನಾ ಕೇಂದ್ರ, ಜಗದ್ಗುರು ತೋಂಟದಾರ್ಯ ಮಠ, ಗದಗ.

How to Cite

ಸಿದ್ದಲಿಂಗೇಶ ಉ. ಸಜ್ಜನಶೆಟ್ಟರ. (2026). ‘ನರೆಯಂಗಲ್ ಪನ್ನೆರಡು’ ಪ್ರದೇಶ - ಪದ ನಿಷ್ಪತ್ತಿ, ಸ್ಥಳನಾಮ ವಿವೇಚನೆ. ಅಕ್ಷರಸೂರ್ಯ (AKSHARASURYA), 16(06), 74 to 82. https://aksharasurya.com/index.php/latest/article/view/2225

References

ಸುರೇಶ ಕೆ. ಎಂ. ಮತ್ತು ವಾಸುದೇವ ಬಡಿಗೇರ, (2000), ಕರ್ನಾಟಕ ದೇವಾಲಯ ಕೋಶ, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.

ಬಾಲಸುಬ್ರಮಣ್ಯ, (2011), ಕರ್ನಾಟಕ ದೇವಾಲಯ ಕೋಶ ಗದಗ ಜಿಲ್ಲೆ, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.

ಸುಜಾತಾ ಬರದೂರ, (2008), ಗದಗ ಜಿಲ್ಲೆಯ ಸ್ಥಳನಾಮಗಳು, ಗದಗ.

ನರೇಗಲ್ ಎಂ. ಎಸ್., (2009), ಉತ್ತರ ಗದಗ ಜಿಲ್ಲೆಯ ಶಾಸನಗಳು ಒಂದು ಅಧ್ಯಯನ, ಗದಗ: ರವಿರಶ್ಮಿ ಪ್ರಕಾಶನ.

ಚನ್ನಬಸವಯ್ಯ ಹಿರೇಮಠ, (2014), ಪ್ರಾಚೀನ ಕರ್ನಾಟಕದ ರಾಜಕೀಯ ವಿಭಾಗಗಳು, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.