ಜ್ಞಾನಬೋಧೆಯ ವಿನೂತನ ಪ್ರಯೋಗ - ಪಂಚತಂತ್ರ

Main Article Content

ಪ್ರೊ. ಸಾಯಿಲತಾ ಇ. ಮಡಿವಾಳರ

Abstract

ಭಾರತೀಯ ಕಥಾಸಾಹಿತ್ಯದಲ್ಲಿ ‘ಪಂಚತಂತ್ರ’ವು ಜ್ಞಾನಬೋಧೆಯ ಅತ್ಯಂತ ವಿಶಿಷ್ಟ ಹಾಗೂ ವಿನೂತನ ಪ್ರಯೋಗವಾಗಿದೆ. ಪ್ರಾಚೀನ ಕಾಲದ ಮೌಖಿಕ ಕಥನ ಪರಂಪರೆಯಿಂದ ಬೆಳೆದುಬಂದ ಈ ಕೃತಿಯು, ನೀತಿಶಾಸ್ತ್ರ ಮತ್ತು ಬದುಕಿನ ಮೌಲ್ಯಗಳನ್ನು ಪ್ರಾಣಿ-ಪಕ್ಷಿಗಳ ಪಾತ್ರಗಳ ಮೂಲಕ ಅತ್ಯಂತ ಕಲಾತ್ಮಕವಾಗಿ ಕಟ್ಟಿಕೊಡುತ್ತದೆ. ವಿಷ್ಣುಶರ್ಮ ಹಾಗೂ ವಸುಭಾಗಭಟ್ಟರ ಮೂಲ ಪ್ರೇರಣೆಯಿಂದ ಮೂಡಿಬಂದ ಈ ಕಥಾಗುಚ್ಛವನ್ನು ದುರ್ಗಸಿಂಹನು ಕನ್ನಡಕ್ಕೆ ತರುವ ಮೂಲಕ ಅದರ ಜಾಗತಿಕ ಮತ್ತು ಪ್ರಾದೇಶಿಕ ಮಹತ್ವವನ್ನು ವಿಸ್ತರಿಸಿದ್ದಾನೆ.
ಕಥೆಯೊಳಗೊಂದು ಕಥೆ ಎಂಬ ವಿಶಿಷ್ಟ ನಿರೂಪಣಾ ತಂತ್ರವನ್ನು ಹೊಂದಿರುವ ಪಂಚತಂತ್ರವು ಕೇವಲ ಮನರಂಜನೆಯಲ್ಲದೆ, ಮಾನವನ ಸ್ವಭಾವ, ವರ್ತನೆ, ಧರ್ಮಮಾರ್ಗ ಮತ್ತು ಸಮಸ್ಯೆಗಳಿಗೆ ಪರಿಹಾರಗಳನ್ನು ಒದಗಿಸುವ ಮಾರ್ಗದರ್ಶಿಯಾಗಿದೆ. ಆದರ್ಶ ಜೀವನದ ಮೌಲ್ಯಗಳನ್ನು ಜನಸಾಮಾನ್ಯರಿಗೆ ಮತ್ತು ರಾಜಕುಮಾರರಿಗೆ ತಿಳಿಹಾಸ್ಯ ಹಾಗೂ ಸೂಕ್ಷ್ಮ ವ್ಯಂಗ್ಯದ ಮೂಲಕ ತಲುಪಿಸುವಲ್ಲಿ ಈ ನೀತಿಕಥೆಗಳ ಪಾತ್ರ ಅನನ್ಯವಾಗಿದೆ.

Article Details

Section

Research Articles

Author Biography

ಪ್ರೊ. ಸಾಯಿಲತಾ ಇ. ಮಡಿವಾಳರ

ಕನ್ನಡ ವಿಭಾಗ, ಕೆ.ಎಲ್.ಇ. ಸಂಸ್ಥೆಯ, ರಾಜರಾಜೇಶ್ವರಿ ಕಲಾ ಹಾಗೂ ವಾಣಿಜ್ಯ ಮಹಿಳಾ ಮಹಾವಿದ್ಯಾಲಯ, ರಾಣೇಬೆನ್ನೂರು.

How to Cite

ಸಾಯಿಲತಾ ಇ. ಮಡಿವಾಳರ. (2026). ಜ್ಞಾನಬೋಧೆಯ ವಿನೂತನ ಪ್ರಯೋಗ - ಪಂಚತಂತ್ರ. ಅಕ್ಷರಸೂರ್ಯ (AKSHARASURYA), 16(06), 69 to 73. https://aksharasurya.com/index.php/latest/article/view/2224

References

ವರದರಾಜ ಹುಯಿಲಗೋಳ, (1972), ದುರ್ಗಸಿಂಹನ ಪಂಚತಂತ್ರ ಸಮೀಕ್ಷೆ, ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯ ಪ್ರಸಾರಾಂಗ.

ಹೆಗಡೆ ಎಲ್. ಆರ್., (1976), ಜಾನಪದ ಕಥೆಗಳು, ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು.

ದೇವುಡು, (1957), ಹೊಸಗನ್ನಡ ಪಂಚತಂತ್ರ, ಬೆಂಗಳೂರು: ಸಾಹಿತ್ಯ ಭಂಡಾರ.

ರಂಗಾಚಾರ್ಯ ಎಸ್., (1971), ನೀತಿಶಾಸ್ತ್ರ, ಮೈಸೂರು: ಡಿ. ವಿ. ಕೆ. ಮೂರ್ತಿ ಪ್ರಕಾಶನ.