ದಾಸೋಹ ತತ್ವ ಮತ್ತು ಉಚಿತ ಪ್ರಸಾದ ನಿಲಯಗಳು

Main Article Content

ಎಫ್.ಎನ್. ಹುಡೇದ

Abstract

ಭಾರತೀಯ ಸಂಸ್ಕೃತಿಯಲ್ಲಿ 12ನೇ ಶತಮಾನದ ಶರಣರು ಪ್ರತಿಪಾದಿಸಿದ ‘ದಾಸೋಹ ತತ್ವ’ವು ಅತ್ಯಂತ ಶ್ರೇಷ್ಠ ಮಾನವೀಯ ಮೌಲ್ಯವಾಗಿದೆ. ಕೇವಲ ವೈಯಕ್ತಿಕ ಮುಕ್ತಿಯನ್ನು ಗುರಿಯಾಗಿಸದೆ, ಸಮಾಜದ ಕಲ್ಯಾಣವನ್ನು ಸಾಧಿಸುವ ಈ ತತ್ವವು, ಸಂಪತ್ತಿನ ಸಮಾನ ಹಂಚಿಕೆ ಮತ್ತು ನಿಸ್ವಾರ್ಥ ಸೇವೆಯನ್ನು ಪ್ರತಿಪಾದಿಸುತ್ತದೆ. ಶರಣರ ಈ ಆಶಯವನ್ನು ಸಾಕಾರಗೊಳಿಸುವಲ್ಲಿ ಕರ್ನಾಟಕದ ವೀರಶೈವ-ಲಿಂಗಾಯತ ಮಠಗಳು, ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕದ ಹಾಲಕೆರೆ ಶ್ರೀ ಅನ್ನದಾನೇಶ್ವರ ಮಠವು ಪ್ರಮುಖ ಪಾತ್ರ ವಹಿಸಿದೆ. ಜಾತಿ, ಧರ್ಮ, ವರ್ಗಗಳ ಭೇದವಿಲ್ಲದೆ ಲಕ್ಷಾಂತರ ಗ್ರಾಮೀಣ ವಿದ್ಯಾರ್ಥಿಗಳಿಗೆ ಅನ್ನ ಮತ್ತು ಅಕ್ಷರ ದಾಸೋಹವನ್ನು ನೀಡುವ ಮೂಲಕ ಉಚಿತ ಪ್ರಸಾದ ನಿಲಯಗಳು ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಕ್ರಾಂತಿಯನ್ನು ಮಾಡಿವೆ. ವಿದ್ಯಾರ್ಥಿಗಳಲ್ಲಿ ಸಮಾನತೆ, ಸಹಕಾರ ಮತ್ತು ಮೌಲ್ಯಾಧಾರಿತ ಬದುಕನ್ನು ರೂಪಿಸುವ ಈ ಪ್ರಸಾದ ನಿಲಯಗಳು ಕೇವಲ ಹಸಿವು ನೀಗಿಸುವ ಕೇಂದ್ರಗಳಾಗಿರದೆ, ಮಾನವ ಸಂಪನ್ಮೂಲ ಅಭಿವೃದ್ಧಿಯ ಕೇಂದ್ರಗಳಾಗಿ ರೂಪುಗೊಂಡಿರುವ ಬಗೆಯನ್ನು ಈ ಲೇಖನವು ವಿಶ್ಲೇಷಿಸುತ್ತದೆ.

Article Details

Section

Research Articles

Author Biography

ಎಫ್.ಎನ್. ಹುಡೇದ

ಸಂಶೋಧನಾರ್ಥಿ, ಡಾ. ಎಂ.ಎಂ. ಕಲಬುರ್ಗಿ ಸಂಶೋಧನಾ ಅಧ್ಯಯನ ಕೇಂದ್ರ, ಗದಗ.

How to Cite

ಎಫ್.ಎನ್. ಹುಡೇದ. (2026). ದಾಸೋಹ ತತ್ವ ಮತ್ತು ಉಚಿತ ಪ್ರಸಾದ ನಿಲಯಗಳು. ಅಕ್ಷರಸೂರ್ಯ (AKSHARASURYA), 16(06), 52 to 59. https://aksharasurya.com/index.php/latest/article/view/2222

References

ಹಿರೇವಡೆಯರ ಎಂ.ಎ. (ಸಂ.), (1994), ಸುವರ್ಣಝರಿ.

ನಾಗಭೂಷಣ ಶಾಸ್ತ್ರಿಗಳು ಮತ್ತು ಶಿರೂರ ಬಿ.ವಿ. (ಸಂ.), (1989), ಹಾಲಕೆರೆ ಶ್ರೀಗುರು ಅನ್ನದಾನ ಸ್ವಾಮಿಗಳು.

ಮೃತ್ಯುಂಜಯ ರುಮಾಲೆ (ಸಂ.), (2017), ಅನ್ನ-ಅಕ್ಷರ-ಅಮೃತ.

ಕಲಬುರ್ಗಿ ಎಂ.ಎಂ., (2010), ಮಾರ್ಗ ಸಂಪುಟ 4, ಬೆಂಗಳೂರು: ಸಪ್ನ ಬುಕ್ ಹೌಸ್.