ವೃತ್ತಿರಂಗಭೂಮಿ ಪರಂಪರೆ ಮತ್ತು ಗದಗ ಪರಿಸರದ ವೃತ್ತಿರಂಗಭೂಮಿ ಕಲಾವಿದೆಯರು
Main Article Content
Abstract
ಭಾರತೀಯ ರಂಗಭೂಮಿಯು ಸುಮಾರು 2500 ವರ್ಷಗಳ ಪ್ರಾಚೀನ ಇತಿಹಾಸವನ್ನು ಹೊಂದಿದ್ದು, ಗ್ರೀಕ್ ರಂಗಭೂಮಿಯಂತೆಯೇ ಧಾರ್ಮಿಕ ಆಚರಣೆಗಳಿಂದ ಬೆಳೆದು, ಇಂದು ವೃತ್ತಿಪರ ಹಾಗೂ ಮನರಂಜನಾ ಕಲೆಯಾಗಿ ವಿಕಸನಗೊಂಡಿದೆ. ಕನ್ನಡ ರಂಗಭೂಮಿಯು ಯಕ್ಷಗಾನ, ಬಯಲಾಟ, ಹಾಗೂ ಕಂಪನಿ ನಾಟಕಗಳ ಮೂಲಕ ತನ್ನದೇ ಆದ ವಿಶಿಷ್ಟ ಪರಂಪರೆಯನ್ನು ನಿರ್ಮಿಸಿದೆ. ಶಾಂತಕವಿಯವರ ಪ್ರಭಾವದಿಂದ ಉತ್ತರ ಕರ್ನಾಟಕದಲ್ಲಿ ವೃತ್ತಿರಂಗಭೂಮಿಯು ಹೊಸ ದಿಕ್ಕನ್ನು ಪಡೆದುಕೊಂಡಿತು. ಪುರುಷಪ್ರಧಾನ ಸಮಾಜದಲ್ಲಿ ಅನೇಕ ಅಡೆತಡೆಗಳು, ಕಟ್ಟುಪಾಡುಗಳು ಮತ್ತು ಕಡುಬಡತನವನ್ನು ಎದುರಿಸಿಯೂ ಮಹಿಳೆಯರು ರಂಗಭೂಮಿಗೆ ಪ್ರವೇಶಿಸಿ ದಿಟ್ಟ ಹೆಜ್ಜೆಗಳನ್ನಿಟ್ಟರು. ವಿಶೇಷವಾಗಿ ಗದಗ ಪರಿಸರದ ಶಹಪೂರಪೇಟೆಯ ಕಲಾವಿದೆಯರಾದ ಸುಶೀಲಾ ಹಿರೇಮಠ, ಉಮಾದೇವಿ ಹಿರೇಮಠ, ಗಾಯತ್ರಿ ಹಿರೇಮಠ ಮತ್ತು ಮಂಜುಳಾ ಹಿರೇಮಠ ಮುಂತಾದವರು ಅನೇಕ ಪಾತ್ರಗಳಿಗೆ ಜೀವ ತುಂಬುವ ಮೂಲಕ ರಂಗಭೂಮಿಗೆ ನೀಡಿದ ಅದ್ವಿತೀಯ ಕೊಡುಗೆ ಮತ್ತು ಅವರ ಬದುಕಿನ ವಾಸ್ತವಿಕ ಚಿತ್ರಣವನ್ನು ಈ ಲೇಖನವು ಕಟ್ಟಿಕೊಡುತ್ತದೆ. ರಂಗಭೂಮಿಯ ಏಳಿಗೆ ಹಾಗೂ ಕಲಾವಿದರ ಸಂಕಷ್ಟಗಳ ನಿವಾರಣೆಗೆ ಪ್ರೇಕ್ಷಕರ ಪ್ರೋತ್ಸಾಹದ ಅಗತ್ಯವನ್ನು ಇದು ಒತ್ತಿಹೇಳುತ್ತದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ರವೀಂದ್ರ ಆರ್. ಕೊಪ್ಪರ್, ಗದಗ ಜಿಲ್ಲಾ ರಂಗಮಾಹಿತಿ.
ರಂಗನಾಥ ಎಚ್. ಕೆ., (1978), ಕರ್ನಾಟಕ ರಂಗಭೂಮಿ, ಬೆಂಗಳೂರು: ಹೇಮಂತ ಸಾಹಿತ್ಯ ಪ್ರಕಾಶನ.
ಕಲಬುರ್ಗಿ ಎಂ. ಎಂ. (ಸಂ.), ಏಣಗಿ ಬಾಳಪ್ಪನವರ ಜೀವನ ಮತ್ತು ಸಾಧನೆ ಭಾಗ-1 ಮತ್ತು ಭಾಗ-2,
ಶೇಷಗಿರಿರಾವ್ ಎಲ್. ಎಸ್., (2013), ಗ್ರೀಕ್ ರಂಗಭೂಮಿ (ಮತ್ತು ನಾಟಕ), ಬೆಂಗಳೂರು: ಸಪ್ನ ಬುಕ್ ಹೌಸ್.
ಅಶೋಕ ಟಿ. ಪಿ. (ಸಂ.), ಶ್ರೀರಂಗ ಸಂಪುಟ-1, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.
ಮರುಳಸಿದ್ದಪ್ಪ, ಆಧುನಿಕ ಕನ್ನಡ ರಂಗಭೂಮಿ.
ಪ್ರಕಾಶ ಗರುಡ, ಕಂಪನಿ ನಾಟಕ ಅರ್ಥಾತ್ ವೃತ್ತಿರಂಗಭೂಮಿ, ಯಾಜಿ ಪ್ರಕಾಶನ.
ವೈಕುಂಠರಾಜು ಬಿ. ವಿ., (1997), ಕನ್ನಡ ರಂಗಭೂಮಿ, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.
ಶಿವಮೂರ್ತೆಪ್ಪ ಕುರೇರ್ (ಸಂ.), ಸಮೂಹ ಮಾಧ್ಯಮಗಳು ಮತ್ತು ರಂಗಭೂಮಿ.