ಸುಕುಮಾರಸ್ವಾಮಿಯ ಕಥೆ: ಋಣಪ್ರಜ್ಞೆಯ ಒಂದು ಅವಲೋಕನ
Main Article Content
Abstract
ಶಿವಕೋಟ್ಯಾಚಾರ್ಯರ ‘ವಡ್ಡಾರಾಧನೆ’ಯ ಸುಕುಮಾರಸ್ವಾಮಿಯ ಕಥೆಯ ಹಿನ್ನೆಲೆಯಲ್ಲಿ ‘ಋಣಪ್ರಜ್ಞೆ’ಯ ತಾತ್ವಿಕ ಮತ್ತು ವ್ಯಾವಹಾರಿಕ ಆಯಾಮಗಳನ್ನು ವಿಶ್ಲೇಷಿಸಲಾಗಿದೆ. ಲೌಕಿಕ ಸಾಲ ಹಾಗೂ ಅಲೌಕಿಕ ಕೃತಜ್ಞತೆ ಎಂಬ ಋಣದ ಎರಡು ಮುಖಗಳನ್ನು ಪರಿಚಯಿಸುತ್ತಾ, ವಿಶೇಷವಾಗಿ ‘ಗುರುಋಣ’ದ ಮಹತ್ವವನ್ನು ಮುನ್ನೆಲೆಗೆ ತರಲಾಗಿದೆ. ಗುರು ಸೂರ್ಯಮಿತ್ರ, ಶಿಷ್ಯರಾದ ಅಗ್ನಿಭೂತಿ ಮತ್ತು ವಾಯುಭೂತಿಯ ಪಾತ್ರಗಳ ಮೂಲಕ ವಿಧೇಯತೆ ಹಾಗೂ ಅವಿಧೇಯತೆಯ ಪರಿಣಾಮಗಳನ್ನು ಮಾರ್ಮಿಕವಾಗಿ ಕಟ್ಟಿಕೊಡಲಾಗಿದೆ. ಗುರುವಿನಲ್ಲಿ ಕೃತಜ್ಞತೆ ತೋರಿದ ಅಗ್ನಿಭೂತಿ ಜೈನದೀಕ್ಷೆ ಪಡೆದು ಉದ್ಧಾರವಾದರೆ, ಅಹಂಕಾರದಿಂದ ಗುರುನಿಂದನೆ ಮಾಡಿದ ವಾಯುಭೂತಿ ಅನೇಕ ಕೀಳು ಜನ್ಮಗಳನ್ನೆತ್ತಿ ತೀವ್ರ ಯಾತನೆ ಅನುಭವಿಸುತ್ತಾನೆ. ಅಂತಿಮವಾಗಿ ಸಹೋದರನ ಮೇಲಿನ ಋಣಾನುಬಂಧದಿಂದ ಅಗ್ನಿಭೂತಿಯೇ ವಾಯುಭೂತಿಗೆ ಧರ್ಮಬೋಧೆ ಮಾಡಿ ಸನ್ಮಾರ್ಗಕ್ಕೆ ತರುತ್ತಾನೆ. ಮಾನವ ಸಂಬಂಧಗಳಲ್ಲಿ, ವಿಶೇಷವಾಗಿ ಗುರು-ಶಿಷ್ಯ ಪರಂಪರೆಯಲ್ಲಿ ಋಣಪ್ರಜ್ಞೆಯು ಹೇಗೆ ವ್ಯಕ್ತಿತ್ವ ವಿಕಸನಕ್ಕೆ ಹಾಗೂ ಆತ್ಮೋದ್ಧಾರಕ್ಕೆ ಕಾರಣವಾಗುತ್ತದೆ ಎಂಬ ಮೌಲ್ಯಯುತ ಸಂದೇಶವನ್ನು ಕಥೆಯ ಆಂತರ್ಯದಿಂದ ಮಾರ್ಮಿಕವಾಗಿ ಶೋಧಿಸಲಾಗಿದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಕೇಶವ ಭಟ್ಟ ಟಿ., (2017), ಶಿವಕೋಟ್ಯಾಚಾರ್ಯರ ವಡ್ಡಾರಾಧನೆ, ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು.
ಪುಟ್ಟಯ್ಯ ಬಿ. ಎಂ., (2015), ವಡ್ಡಾರಾಧನೆ ಸಾಂಸ್ಕೃತಿಕ ಮುಖಾಮುಖಿ, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾನಿಲಯ.
ಸೀತಾರಾಮಯ್ಯ ವಿ., (2012), ವಡ್ಡಾರಾಧನೆ, ಬೆಂಗಳೂರು: ಸಪ್ನ ಬುಕ್ ಹೌಸ್.
ಹಂಪ ನಾಗರಾಜಯ್ಯ, (1997), ಚಂದ್ರಕೊಡೆ, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾನಿಲಯ.