ಶರಣರು ಮತ್ತು ಕುಲಕಸುಬುಗಳು
Main Article Content
Abstract
12ನೇ ಶತಮಾನದ ವಚನ ಸಾಹಿತ್ಯವು ಕಾಯಕದ ಮಹತ್ವವನ್ನು ಸಾರಿ, ಶ್ರಮಗೌರವವನ್ನು ಎತ್ತಿಹಿಡಿದ ಅಪೂರ್ವ ಕಾಲಘಟ್ಟವಾಗಿದೆ. ‘ಅನುಭವ ಮಂಟಪ’ದ ಮೂಲಕ ಪ್ರಜಾಪ್ರಭುತ್ವ ಮತ್ತು ಗ್ರಾಮ ಸ್ವರಾಜ್ಯದ ಕಲ್ಪನೆಗಳಿಗೆ ಶರಣರು ಭದ್ರ ಬುನಾದಿ ಹಾಕಿದರು. ಐತಿಹಾಸಿಕವಾಗಿ ವೃತ್ತಿಗಳ ಆಧಾರದ ಮೇಲೆ ಸೃಷ್ಟಿಯಾಗಿದ್ದ ಜಾತೀಯತೆ ಮತ್ತು ಮೇಲು-ಕೀಳುಗಳ ತಾರತಮ್ಯವನ್ನು ತೊಡೆದುಹಾಕುವಲ್ಲಿ ಅವರ ಸಾಮಾಜಿಕ ಕ್ರಾಂತಿ ಮಹತ್ವದ್ದಾಗಿದೆ. ಯಾವುದೇ ಕುಲಕಸುಬಾಗಿದ್ದರೂ, ಅದನ್ನು ನಿಷ್ಠೆ, ಪ್ರಾಮಾಣಿಕತೆ ಮತ್ತು ಸತ್ಯಶುದ್ಧತೆಯಿಂದ ನಿರ್ವಹಿಸಿದರೆ ಅದು ‘ಕಾಯಕ’ವಾಗಿ ಪರಿಣಮಿಸಿ ಆಧ್ಯಾತ್ಮಿಕ ಉನ್ನತಿಗೆ ದಾರಿಯಾಗುತ್ತದೆ ಎಂಬುದನ್ನು ಬಸವಾದಿ ಪ್ರಮಥರು ಸಾಬೀತುಪಡಿಸಿದರು. ಅಂಬಿಗ, ಮಡಿವಾಳ, ಸಮಗಾರ, ನೇಕಾರ ಸೇರಿದಂತೆ ವಿವಿಧ ಶ್ರಮಿಕ ವೃತ್ತಿಗಳನ್ನು ಅವಲಂಬಿಸಿದ ಶರಣರು ತಮ್ಮ ಕಾಯಕದ ಮೂಲಕವೇ ಮುಕ್ತಿ ಕಂಡುಕೊಂಡ ಬಗೆ ಹಾಗೂ ವಚನ ಸಾಹಿತ್ಯದಲ್ಲಿನ ಕಸುಬುಗಳ ವರ್ಗೀಕರಣವನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಶರಣರ ಕಾಯಕ ಮೀಮಾಂಸೆಯು ಇಂದಿಗೂ ಸಾರ್ವಕಾಲಿಕ ಪ್ರಸ್ತುತತೆಯನ್ನು ಹೊಂದಿದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಕಲಬುರ್ಗಿ ಎಂ.ಎಂ., (1978), ಶಾಸನಗಳಲ್ಲಿ ಶಿವಶರಣರು, ಗದಗ: ವೀ.ಶೈ.ಅ.ಸಂ. ತೋಂಟದಾರ್ಯ ಮಠ.
ಹಿರೇಮಠ ಬಿ.ಆರ್., (1986), ಶಾಸನಗಳಲ್ಲಿ ಕರ್ನಾಟಕದ ವರ್ತಕರು, ಧಾರವಾಡ: ಪ್ರಸಾರಾಂಗ, ಕರ್ನಾಟಕ ವಿಶ್ವವಿದ್ಯಾಲಯ.
ನಾರಾಯಣ ಪಿ.ವಿ., (1983), ವಚನ ಸಾಹಿತ್ಯ: ಒಂದು ಸಾಂಸ್ಕೃತಿಕ ಅಧ್ಯಯನ, ಗದಗ: ತೋಂಟದಾರ್ಯ ಮಠ.
ಬಸವರಾಜು ಎಲ್. (ಸಂ.), (2021), ಸರ್ವಜ್ಞನ ವಚನಗಳು, ಮೈಸೂರು: ಗೀತಾ ಬುಕ್ ಹೌಸ್.
ಹಳಕಟ್ಟಿ ಫ.ಗು., (1931), ನೈತಿಕ ಮತ್ತು ಭಕ್ತಿಯ ವಚನಗಳು, ಬಿಜಾಪುರ: ಶಿವಾನುಭವ ಗ್ರಂಥಮಾಲಾ.
ಸಂಪಾದಕ ಮಂಡಳಿ (ವಿವಿಧ), (2021), ಸಮಗ್ರ ವಚನ ಸಾಹಿತ್ಯ ಸಂಪುಟಗಳು 1-15, ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರ.
ಎಂ. ಚಿದಾನಂದಮೂರ್ತಿ, (2015), ವಚನ ಸಾಹಿತ್ಯ: ಸಾಮಾನ್ಯನಿಗೆ ಸಾಹಿತ್ಯ ಚರಿತ್ರೆ, ಬೆಂಗಳೂರು: ಸಪ್ನ ಪ್ರಕಾಶನ.
ವಿಜಯಶ್ರೀ ಸಬರದ, (2022), ಶಿವಶರಣೆಯರ ಸಾಹಿತ್ಯ ಚರಿತ್ರೆ, ಬೆಂಗಳೂರು: ಕ್ರಿಯಾ ಪ್ರಕಾಶನ.
ಬಿ.ವಿ. ವಸಂತಕುಮಾರ, ಕಾಯಕ ಮೀಮಾಂಸೆ, ಮೈಸೂರು.
ವೀರಣ್ಣ ಸಿ., ಕನ್ನಡ ಸಾಹಿತ್ಯ ಚಾರಿತ್ರಿಕ ಬೆಳವಣಿಗೆ ಸಂಪುಟ-1 ಮತ್ತು 2, ಬೆಂಗಳೂರು: ನವಕರ್ನಾಟಕ ಪ್ರಕಾಶನ.
ಸಿದ್ದಯ್ಯ ಪುರಾಣಿಕ, (1964), ಶರಣ ಚರಿತಾಮೃತ, ಮೈಸೂರು: ಸಂಸ್ಥಾನದ ವಯಸ್ಕರ ಶಿಕ್ಷಣ ಸಮಿತಿ.
ದೇವೇಂದ್ರಕುಮಾರ ಹಕಾರಿ ಮತ್ತು ಕೆ.ಆರ್. ಸಂಧ್ಯಾರೆಡ್ಡಿ, (2000), ಗ್ರಾಮೀಣ ವೃತ್ತಿಗಳು, ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರ.
ಅಶೋಕ ನರೋಡೆ ಮತ್ತು ಡಾ. ಎಸ್.ಆರ್. ಸಂಧ್ಯಾರೆಡ್ಡಿ (ಸಂ.), ವಚನ ಚಳುವಳಿ ಕೆಲವು ಅಧ್ಯಯನಗಳು, ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು.
ವೀರೇಶ ಬಡಿಗೇರ, (2020), ಕರ್ನಾಟಕ ಆಯಗಾರರ ಸಂಸ್ಕೃತಿ, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.
ಗಂಟಾಳ ಎಸ್.ಆರ್., ವಚನ ಸಾಹಿತ್ಯದ ಉಗಮ ಮತ್ತು ವಿಕಾಸ.
ದಂಡೆ ನಂದೀಶ್ವರ, (2019), ವೃತ್ತಿ ನಿರತ ವಚನಕಾರರು: ವಚನಗಳ ಅಭಿವ್ಯಕ್ತಿ ಸ್ವರೂಪ ಮತ್ತು ತಾತ್ವಿಕತೆ (ಮಹಾಪ್ರಬಂಧ), ಹಂಪಿ: ಕನ್ನಡ ವಿಶ್ವವಿದ್ಯಾಲಯ.
ಮಹೇಶ ಕಿಳ್ಳಿಕ್ಯಾತರ, ಸ್ಥಳೀಯ ಕುಲಕಸುಬುಗಳು ಮತ್ತು ಜನಬದುಕು, ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರ.
ರಘುಶಂಖ ಭಾತಂಬ್ರಾ, (2010), ವಚನಕಾರರ ವೃತ್ತಿ ಮೌಲ್ಯಗಳು ಒಂದು ಅಧ್ಯಯನ (ಪುಸ್ತಕ ರೂಪ), ಕಲಬುರ್ಗಿ: ಗುಲ್ಬರ್ಗಾ ವಿಶ್ವವಿದ್ಯಾಲಯ.
ಬಿ.ಜಿ. ಸಿದ್ಧಲಿಂಗಮ್ಮ, (2017), ಮಧ್ಯಕಾಲೀನ ಕರ್ನಾಟಕದಲ್ಲಿ ಕುಶಲಕರ್ಮಿಗಳು.