ಗಣೇಶಯ್ಯನವರ ಕಥನ ಸಾಹಿತ್ಯ - ಸ್ತ್ರೀ ಸಂವೇದನೆಯ ರೂಪ (ಕಥನ ಸಾಹಿತ್ಯವನ್ನು ಅನುಲಕ್ಷಿಸಿ)

Main Article Content

ಡಾ. ಸಂಜಯಕುಮಾರ ಶಿ. ಹಾರೋಬಿಡಿ

Abstract

ಕೆ.ಎನ್. ಗಣೇಶಯ್ಯನವರ ಕಥನ ಸಾಹಿತ್ಯವು ಇತಿಹಾಸ, ಕಲೆ ಮತ್ತು ಮಾನವೀಯ ಅಂತಃಕರಣದ ಅಪೂರ್ವ ಸಂಗಮವಾಗಿದ್ದು, ಅದರಲ್ಲಿ ಸ್ತ್ರೀ ಸಂವೇದನೆಯ ವಿಶಿಷ್ಟ ಅಭಿವ್ಯಕ್ತಿಯನ್ನು ಕಾಣಬಹುದಾಗಿದೆ. ‘ಶಾಲಭಂಜಿಕೆ’, ‘ಕಲೆಯ ಬಲೆಯಲ್ಲಿ’ ಮುಂತಾದ ಕಥೆಗಳ ಮೂಲಕ ನಿರ್ಜೀವ ಶಿಲ್ಪಕಲೆಗಳ ಹಿಂದಿರುವ ಮಹಿಳೆಯರ ನೈಜ ವೇದನೆ, ಸ್ವಾತಂತ್ರ್ಯದ ಹಂಬಲ ಹಾಗೂ ಬಂಡಾಯದ ಮನೋಭಾವವನ್ನು ಅವರು ಅತ್ಯಂತ ಮಾರ್ಮಿಕವಾಗಿ ಚಿತ್ರಿಸಿದ್ದಾರೆ. ಪುರುಷ ಪ್ರಧಾನ ಸಮಾಜದ ಕಟ್ಟುಪಾಡುಗಳನ್ನು ಮೀರಿ, ಕಲೆಯ ಮೂಲಕವೇ ತಮ್ಮ ಅಸ್ತಿತ್ವವನ್ನು ಕಂಡುಕೊಳ್ಳುವ ಮತ್ತು ತಮಗಾದ ಅನ್ಯಾಯದ ವಿರುದ್ಧ ಸೂಕ್ಷ್ಮವಾಗಿ ಪ್ರತಿಕಾರ ತೀರಿಸಿಕೊಳ್ಳುವ ಮಹಿಳಾ ಪಾತ್ರಗಳ ವಿಶ್ಲೇಷಣೆಯನ್ನು ಇಲ್ಲಿ ಮಂಡಿಸಲಾಗಿದೆ. ಐತಿಹಾಸಿಕ ಪಳೆಯುಳಿಕೆಗಳಿಗೆ ಜೀವ ತುಂಬುವ ಮೂಲಕ, ಕೇವಲ ಶಿಲ್ಪಿಗಷ್ಟೇ ಸಲ್ಲುವ ಕೀರ್ತಿಯ ಹಿಂದಿರುವ ಪ್ರೇರಕ ಶಕ್ತಿಯಾದ ಹೆಣ್ಣಿನ ತ್ಯಾಗ, ಅವಳ ನೋವು-ನಲಿವುಗಳನ್ನು ಈ ಅಧ್ಯಯನವು ಬಿಚ್ಚಿಡುತ್ತದೆ. ಆಧುನಿಕೋತ್ತರ ಕನ್ನಡ ಸಾಹಿತ್ಯದಲ್ಲಿ ಮಹಿಳಾ ಸಂವೇದನೆಯ ಭಿನ್ನ ಆಯಾಮಗಳನ್ನು ಗ್ರಹಿಸಲು ಇದು ಅತ್ಯಂತ ಸಹಕಾರಿಯಾಗಿದೆ.

Article Details

Section

Research Articles

Author Biography

ಡಾ. ಸಂಜಯಕುಮಾರ ಶಿ. ಹಾರೋಬಿಡಿ

ಕನ್ನಡ ಅಧ್ಯಾಪಕರು, ಎಂ.ಜಿ.ಆರ್.ಡಿ.ಪಿ.ಆರ್. ವಿಶ್ವವಿದ್ಯಾಲಯ, ಗದಗ.

How to Cite

ಸಂಜಯಕುಮಾರ ಶಿ. ಹಾರೋಬಿಡಿ. (2026). ಗಣೇಶಯ್ಯನವರ ಕಥನ ಸಾಹಿತ್ಯ - ಸ್ತ್ರೀ ಸಂವೇದನೆಯ ರೂಪ (ಕಥನ ಸಾಹಿತ್ಯವನ್ನು ಅನುಲಕ್ಷಿಸಿ). ಅಕ್ಷರಸೂರ್ಯ (AKSHARASURYA), 16(06), 01 to 05. https://aksharasurya.com/index.php/latest/article/view/2217

References

ಗಣೇಶಯ್ಯ ಕೆ.ಎನ್., (2007), ಶಾಲಭಂಜಿಕೆ, ಬೆಂಗಳೂರು: ಅಂಕಿತ ಪುಸ್ತಕ ಪ್ರಕಾಶನ.

ಗಣೇಶಯ್ಯ ಕೆ.ಎನ್., (2009), ಪದ್ಮ ಪಾಣಿ, ಬೆಂಗಳೂರು: ಅಂಕಿತ ಪುಸ್ತಕ ಪ್ರಕಾಶನ.

ಗಣೇಶಯ್ಯ ಕೆ.ಎನ್., (2013), ಕಲ್ದವಸಿ, ಬೆಂಗಳೂರು: ಅಂಕಿತ ಪುಸ್ತಕ ಪ್ರಕಾಶನ.