ಕಲ್ಯಾಣ ಚಾಲುಕ್ಯ ಕಾಲದ ಕೃಷಿ ಪದ್ಧತಿ ಮತ್ತು ತಂತ್ರಜ್ಞಾನ

Main Article Content

ಡಾ. ಗಿರೀಶ ಹಣಮರೆಡ್ಡಿ

Abstract

ಭಾರತೀಯ ನಾಗರಿಕತೆಯ ಬೆನ್ನೆಲುಬಾದ ಕೃಷಿ ಮತ್ತು ನೀರಾವರಿ ಕ್ಷೇತ್ರಗಳಲ್ಲಿ ಕಲ್ಯಾಣ ಚಾಲುಕ್ಯರ ಕಾಲದ ಸಾಧನೆಗಳು ಅದ್ವಿತೀಯವಾಗಿವೆ. ಮೂರನೇ ಸೋಮೇಶ್ವರನ ‘ಮಾನಸೋಲ್ಲಾಸ’ ಸೇರಿದಂತೆ ಹಲವು ಐತಿಹಾಸಿಕ ಗ್ರಂಥಗಳು ಅಂದಿನ ವೈಜ್ಞಾನಿಕ ಕೃಷಿ ಪದ್ಧತಿ, ಮಣ್ಣಿನ ವರ್ಗೀಕರಣ ಮತ್ತು ಬೀಜೋಪಚಾರ ತಂತ್ರಜ್ಞಾನವನ್ನು ಸಾಬೀತುಪಡಿಸುತ್ತವೆ. ದೇವಮಾತೃಕ ಹಾಗೂ ನದಿಮಾತೃಕ ಭೂಮಿಗಳಲ್ಲಿ ಭತ್ತ, ಸಿರಿಧಾನ್ಯ, ಸಾಂಬಾರ ಪದಾರ್ಥಗಳು ಮತ್ತು ವಾಣಿಜ್ಯ ಬೆಳೆಗಳನ್ನು ವ್ಯವಸ್ಥಿತವಾಗಿ ಬೆಳೆಯಲಾಗುತ್ತಿತ್ತು. ಕೇವಲ ಕೃಷಿಯಷ್ಟೇ ಅಲ್ಲದೆ, ಕೆರೆಗಳ ನಿರ್ಮಾಣ, ಕಲ್ಲಿನ ತೂಬುಗಳ ಅಳವಡಿಕೆ, ಹೂಳು ಗುಂಡಿಗಳ ನಿರ್ವಹಣೆ ಹಾಗೂ ಅರಘಟ್ಟ, ಕಪಿಲೆಯಂತಹ ಯಾಂತ್ರಿಕ ನೀರೆತ್ತುವ ಸಾಧನಗಳ ಬಳಕೆಯು ಅಂದಿನ ಸುಧಾರಿತ ಜಲ ಇಂಜಿನಿಯರಿಂಗ್‌ಗೆ ಸಾಕ್ಷಿಯಾಗಿದೆ. ವಾಸ್ತುಜ್ಞರು ಹಾಗೂ ಜಲಸೂತ್ರದ ತಜ್ಞರ ಮಾರ್ಗದರ್ಶನದಲ್ಲಿ ನಿರ್ಮಿತವಾದ ಕೆರೆಗಳ ಜಾಲ ಮತ್ತು ತಾಂತ್ರಿಕ ನೀರಾವರಿ ವ್ಯವಸ್ಥೆಯು ನಾಡಿನ ಆರ್ಥಿಕತೆಯನ್ನು ಹೇಗೆ ಶ್ರೀಮಂತಗೊಳಿಸಿತು ಎಂಬುದರ ಸಮಗ್ರ ವಿಶ್ಲೇಷಣೆಯನ್ನು ಇಲ್ಲಿ ಮಂಡಿಸಲಾಗಿದೆ.

Article Details

Section

Research Articles

Author Biography

ಡಾ. ಗಿರೀಶ ಹಣಮರೆಡ್ಡಿ

ಸಹಾಯಕ ಪ್ರಾಧ್ಯಾಪಕರು, ಇತಿಹಾಸ ವಿಭಾಗ, ಬಿ.ಎಲ್.ಡಿ.ಇ. ಸಂಸ್ಥೆಯ ಎಸ್.ಬಿ. ಕಲಾ ಮತ್ತು ಕೆ.ಸಿ.ಪಿ. ವಿಜ್ಞಾನ ಮಹಾವಿದ್ಯಾಲಯ, ವಿಜಯಪುರ.

How to Cite

ಗಿರೀಶ ಹಣಮರೆಡ್ಡಿ. (2026). ಕಲ್ಯಾಣ ಚಾಲುಕ್ಯ ಕಾಲದ ಕೃಷಿ ಪದ್ಧತಿ ಮತ್ತು ತಂತ್ರಜ್ಞಾನ. ಅಕ್ಷರಸೂರ್ಯ (AKSHARASURYA), 16(04), 31 to 38. https://aksharasurya.com/index.php/latest/article/view/2178

References

ಕಲಬುರಗಿ ಎಂ.ಎಂ., (1994), ಕಲ್ಯಾಣ ಚಾಲುಕ್ಯರ ಶಾಸನಗಳ ಸಾಂಸ್ಕೃತಿಕ ಅಧ್ಯಯನ, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.

ತಿಪ್ಪೇರುದ್ರಸ್ವಾಮಿ ಹೆಚ್., (1968), ಕರ್ಣಾಟಕ ಸಂಸ್ಕೃತಿ ಸಮೀಕ್ಷೆ, ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯ.

ಚಿದಾನಂದಮೂರ್ತಿ ಎಂ., (1966), ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ, ಬೆಂಗಳೂರು: ಸ್ವಪ್ನ ಪ್ರಕಾಶನ.

ದೀಕ್ಷಿತ್ ಜಿ.ಎಸ್. (ಸಂ.), (2000), ಕರ್ನಾಟಕದಲ್ಲಿ ಕೆರೆ ನೀರಾವರಿ, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.

ಶೇಷಗಿರಿರಾವ್ (ಸಂ.), (2006), ಲೋಕೋಪಕಾರ (ಪ್ರಾಚೀನ ಕೃಷಿ ವಿಜ್ಞಾನದ ಆಕರ), ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ.

ಬಸವರಾಜ ಚವಡಿ, (2021), ಮಧ್ಯಕಾಲೀನ ಕರ್ನಾಟಕದ ಕೃಷಿ ನೀರಾವರಿ, ಗದಗ: ವೈಭವ ಪ್ರಕಾಶನ.

ಗೋಪಾಲ್ ಬಿ.ಆರ್., (1981), ಕಲ್ಯಾಣದ ಚಾಲುಕ್ಯರು, ಮೈಸೂರು: ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾಲಯ.

ಗೋಪಾಲರಾವ್ ಹೆಚ್. ಎಸ್., (2004), ಕರ್ನಾಟಕದ ಆರ್ಥಿಕ ಇತಿಹಾಸ, ಬೆಂಗಳೂರು: ನವಕರ್ನಾಟಕ ಪ್ರಕಾಶನ.

ದೇವರಕೊಂಡಾರೆಡ್ಡಿ, (2006), ಬಿಜಾಪುರ ಜಿಲ್ಲೆಯ ಶಾಸನ ಸಂಪುಟ-10, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.

Shrinivas Ritti, (1973), The Seunas: The Yadavas of Devagiri, Dharwad: Karnatak University.

Jyotsna Kamat, (1980), Social Life in Medieval Karnataka, New Delhi: Abhinav Publications.