ನಿಂಬಾಳದಲ್ಲಿ ಪುರಾತತ್ವ ಶೋಧನೆ: ಒಂದು ಅವಲೋಕನ

Main Article Content

ಡಾ. ರವೀಂದ್ರ ಚವ್ಹಾಣ

Abstract

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ನಿಂಬಾಳ ಗ್ರಾಮವು ಅಪಾರ ಐತಿಹಾಸಿಕ ಮತ್ತು ಪುರಾತತ್ವ ಮಹತ್ವವನ್ನು ಹೊಂದಿದೆ. ಇಲ್ಲಿನ ಪ್ರಮುಖ ಆಕರ್ಷಣೆಯಾದ ಕೋಟಿ ಶಂಕರ (ಶಂಕರಲಿಂಗೇಶ್ವರ) ದೇವಾಲಯವು ಕಲ್ಯಾಣ ಚಾಲುಕ್ಯರ ವಾಸ್ತುಶೈಲಿಗೆ ಅತ್ಯುತ್ತಮ ನಿದರ್ಶನವಾಗಿದೆ. ಈ ದೇವಾಲಯದ ಆವರಣದಲ್ಲಿ ದೊರೆತಿರುವ ೧೧ ರಿಂದ ೧೩ನೇ ಶತಮಾನದ ಕಳಚುರಿ, ಚಾಲುಕ್ಯ ಮತ್ತು ಯಾದವರ ಕಾಲದ ಶಿಲಾ ಹಾಗೂ ತಾಮ್ರ ಶಾಸನಗಳು ಅಂದಿನ ಕಾಲದ ಭೂದಾನ, ವ್ಯಾಪಾರ, ತೆರಿಗೆ ವಿನಾಯಿತಿ ಮತ್ತು ‘ಅಯ್ಯಾಹೊಳೆ ೫೦೦’ ವಾಣಿಜ್ಯ ಸಂಘಗಳ ಕೊಡುಗೆಗಳ ಬಗ್ಗೆ ಅಮೂಲ್ಯವಾದ ಮಾಹಿತಿಯನ್ನು ಒದಗಿಸುತ್ತವೆ. ಗರ್ಭಗೃಹ, ವಿಶಾಲ ನವರಂಗ ಮತ್ತು ಸುಂದರವಾದ ಉಬ್ಬುಶಿಲ್ಪಗಳನ್ನು ಒಳಗೊಂಡ ಈ ದೇವಾಲಯದ ವಾಸ್ತುಶಿಲ್ಪ ಹಾಗೂ ಶಾಸನಗಳ ಸಮಗ್ರ ಅಧ್ಯಯನವು ಪ್ರಾಚೀನ ಕರ್ನಾಟಕದ ಸಾಮಾಜಿಕ, ಧಾರ್ಮಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಮೇಲೆ ಸ್ಪಷ್ಟ ಬೆಳಕು ಚೆಲ್ಲುತ್ತದೆ.

Article Details

Section

Research Articles

Author Biography

ಡಾ. ರವೀಂದ್ರ ಚವ್ಹಾಣ

ಟೀಚಿಂಗ್ ಅಸಿಸ್ಟೆಂಟ್, ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ. ಪಿ. ಜಿ. ಹಳಕಟ್ಟಿ ಸ್ನಾತಕೋತ್ತರ ಕೇಂದ್ರ, ತೊರವಿ, ವಿಜಯಪುರ.

How to Cite

ರವೀಂದ್ರ ಚವ್ಹಾಣ. (2026). ನಿಂಬಾಳದಲ್ಲಿ ಪುರಾತತ್ವ ಶೋಧನೆ: ಒಂದು ಅವಲೋಕನ . ಅಕ್ಷರಸೂರ್ಯ (AKSHARASURYA), 16(04), 26 to 30. https://aksharasurya.com/index.php/latest/article/view/2177

References

ರಾಬರ್ಟ್ ಬ್ರೂಸ್ ಫೂಟ್, (1873), ಪುರಾತತ್ವ ನೆಲೆ ಶೋಧನೆ, ಕಲ್ಕತ್ತಾ: ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆ (Geological Survey of India).

ವೀರೇಂದ್ರ ಶಿಂಪಿ, (1987), ಇಂಡಿ ತಾಲೂಕು ದರ್ಶನ, ಬೆಂಗಳೂರು: ಐಬಿಎಚ್ ಪ್ರಕಾಶನ.

ಕಲಬುರ್ಗಿ ಎಂ.ಎಂ., (1976), ವಿಜಯಪುರ ಜಿಲ್ಲೆಯ ಶಾಸನ ಸೂಚಿ, ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯ.

ಸುಂದರ ಅ., (1971), ಇತಿಹಾಸ ಪೂರ್ವ ಕರ್ನಾಟಕದ ಪ್ರಾಗಿತಿಹಾಸ, ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯ.

Padmanabha P., (1973), Bijapura District Hand Book, Bangalore: Govt. of Karnataka.

Satya B. N., (1966), Mysore State Gazetteer: Bijapura District, Bangalore: Govt. Press.