ಸಾಂಸ್ಕೃತಿಕ ಕ್ಷೇತ್ರಕ್ಕೆ ಕನ್ನಡಿಗರ ಕೊಡುಗೆಗಳು
Main Article Content
Abstract
ಭಾರತೀಯ ಸಂಸ್ಕೃತಿಯ ವಿಕಸನದಲ್ಲಿ ಕನ್ನಡ ನಾಡಿನ ಕೊಡುಗೆ ಅನನ್ಯವಾಗಿದೆ. ಪ್ರಾಚೀನ ಕಾಲದಿಂದಲೂ ಕರ್ನಾಟಕವು ಸಾಹಿತ್ಯ, ಕಲೆ, ಸಂಗೀತ, ಮತ್ತು ರಂಗಭೂಮಿ ಕ್ಷೇತ್ರಗಳಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ದೇಶದಲ್ಲೇ ಅತಿ ಹೆಚ್ಚು (ಎಂಟು) ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ಸಾಹಿತ್ಯದ ಹಿರಿಮೆಯಿಂದ ಹಿಡಿದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದ ನಾಟಕ ಮತ್ತು ಚಲನಚಿತ್ರಗಳವರೆಗೆ ಕನ್ನಡಿಗರ ಸಾಧನೆ ಅಪಾರ. ಕರ್ನಾಟಕ ಮತ್ತು ಹಿಂದುಸ್ತಾನಿ ಸಂಗೀತ ಪರಂಪರೆಗಳೆರಡಕ್ಕೂ ಶ್ರೇಷ್ಠ ದಿಗ್ಗಜರನ್ನು ನೀಡಿದ ಕೀರ್ತಿ ನಮ್ಮದು. ಜನಪದ ಸಾಹಿತ್ಯ, ವಾಸ್ತುಶಿಲ್ಪದ ಭವ್ಯತೆ, ಚಿತ್ರಕಲೆ ಹಾಗೂ ನೃತ್ಯ ಪ್ರಕಾರಗಳಲ್ಲಿನ ಕನ್ನಡಿಗರ ಪರಿಣತಿಯು ನಾಡಿನ ಕಲಾಶ್ರೀಮಂತಿಕೆಯನ್ನು ಬಿಂಬಿಸುತ್ತವೆ. ಒಟ್ಟಾರೆಯಾಗಿ, ಸಾಹಿತ್ಯದಿಂದ ಹಿಡಿದು ಸಿನೆಮಾವರೆಗಿನ ವಿವಿಧ ಆಯಾಮಗಳಲ್ಲಿ ಕನ್ನಡಿಗರು ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೀರಿದ ಪ್ರಭಾವ, ಪಡೆದ ಮನ್ನಣೆ ಮತ್ತು ನಿರ್ಮಿಸಿದ ಸಾಂಸ್ಕೃತಿಕ ಮೈಲಿಗಲ್ಲುಗಳ ಸಮಗ್ರ ದರ್ಶನ ಇಲ್ಲಿದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಸೂರ್ಯನಾಥ ಕಾಮತ, (2018), Concise History of Karnataka, ಬೆಂಗಳೂರು: ಅರ್ಚನಾ ಪ್ರಕಾಶನ.
ಸೂರ್ಯನಾಥ ಕಾಮತ, (2021), ಕರ್ನಾಟಕದ ಸಂಕ್ಷಿಪ್ತ ಇತಿಹಾಸ, ಬೆಂಗಳೂರು: ಎಂ.ಸಿ.ಸಿ. ಪಬ್ಲಿಕೇಷನ್ಸ್.
ರಮೇಶ್ ಬಿ.ಜಿ., (2014), ಕನ್ನಡ ನಾಡಿನ ಪ್ರಸಿದ್ಧ ಕವಿಗಳು, ಬೆಂಗಳೂರು: ಸಪ್ನ ಬುಕ್ ಹೌಸ್.
ಪುರುಷೋತ್ತಮ್ ಬಿಳಿಮಲೆ ಮತ್ತು ಮಹಮ್ಮದ್ ರಫಿಪಾಶ, (2015), ವರ್ತಮಾನ ಕರ್ನಾಟಕ, ಬೆಂಗಳೂರು: ಅಭಿನವ.