ವಿಜಯಪುರ ಜಿಲ್ಲೆಯ ಪ್ರಾಚೀನ ಕಾಲದ ಶೈಕ್ಷಣಿಕ ಕೇಂದ್ರಗಳು
Main Article Content
Abstract
ವಿಜಯಪುರ ಜಿಲ್ಲೆಯು ಪ್ರಾಚೀನ ಕಾಲದಿಂದಲೂ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಭವ್ಯ ಬೀಡಾಗಿದೆ. ವೇದಗಳ ಕಾಲದಿಂದ ಹಿಡಿದು ರಾಷ್ಟ್ರಕೂಟರು, ಕಲ್ಯಾಣ ಚಾಲುಕ್ಯರು ಹಾಗೂ ಯಾದವರ ಆಳ್ವಿಕೆಯವರೆಗೆ ಇಲ್ಲಿನ ಶಿಕ್ಷಣ ವ್ಯವಸ್ಥೆಯು ಅಗ್ರಹಾರಗಳು, ಬ್ರಹ್ಮಪುರಿಗಳು ಮತ್ತು ಘಟಿಕಾಸ್ಥಾನಗಳ ಮುಖಾಂತರ ಅತ್ಯುನ್ನತ ಮಟ್ಟದಲ್ಲಿತ್ತು. ಅಂದಿನ ಗುರುಕುಲ ಪದ್ಧತಿಯಲ್ಲಿ ವಿದ್ಯಾದಾನವನ್ನು ಅತಿ ಶ್ರೇಷ್ಠ ದಾನವೆಂದು ಪರಿಗಣಿಸಲಾಗುತ್ತಿತ್ತು ಎಂಬುದನ್ನು ಶಾಸನಗಳು ದೃಢಪಡಿಸುತ್ತವೆ. ಅಗರಖೇಡ, ಇಂಗಳೇಶ್ವರ, ಕಡ್ಲೇವಾಡ, ಕೋಲಾರ, ಮುತ್ತಗಿ, ಮನಗೂಳಿ ಹಾಗೂ ಸಾಲೋಟಗಿಯಂತಹ ಪ್ರಮುಖ ವಿದ್ಯಾಕೇಂದ್ರಗಳ ಐತಿಹಾಸಿಕ ಹಿನ್ನೆಲೆಯನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ದೇಶದ ನಾನಾ ಭಾಗಗಳಿಂದ ಮಾತ್ರವಲ್ಲದೆ, ಕಾಶ್ಮೀರದಿಂದಲೂ ಪಂಡಿತರು ಈ ಕೇಂದ್ರಗಳಿಗೆ ಆಗಮಿಸುತ್ತಿದ್ದ ವಿವರಗಳು ಈ ಪ್ರದೇಶದ ಶೈಕ್ಷಣಿಕ ಹಿರಿಮೆಯನ್ನು ಸಾರುತ್ತವೆ. ನಾಡಿನ ಪ್ರಾಚೀನ ಶಿಕ್ಷಣ ಪದ್ಧತಿ, ಗುರು-ಶಿಷ್ಯ ಪರಂಪರೆ ಮತ್ತು ಸಾಂಸ್ಕೃತಿಕ ಇತಿಹಾಸವನ್ನು ಅರಿಯಲು ಈ ಶಾಸನಬದ್ಧ ದಾಖಲೆಗಳು ಅತ್ಯಮೂಲ್ಯವಾಗಿವೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಮುನಿಸ್ವಾಮಿ ಆರ್., (1999), ವಿಜಯಪುರ ಜಿಲ್ಲೆಯ ಗೆಜೆಟಿಯರ್ (ಬಾಗಲಕೋಟೆ ಜಿಲ್ಲೆಯೂ ಸೇರಿದಂತೆ), ಬೆಂಗಳೂರು: ಕರ್ನಾಟಕ ಗೆಜೆಟಿಯರ್ ಇಲಾಖೆ (ಕರ್ನಾಟಕ ಸರ್ಕಾರ).
ದೇವರಕೊಂಡಾರೆಡ್ಡಿ, (2011), ಬಿಜಾಪುರ ಜಿಲ್ಲೆಯ ಶಾಸನಸೂಚಿ, ವಿದ್ಯಾರಣ್ಯ (ಹಂಪಿ): ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.
ಕೊಪ್ಪಾ ಎಸ್. ಕೆ., (1990), ತರ್ದವಾಡಿ ನಾಡು: ಒಂದು ಅಧ್ಯಯನ, ಧಾರವಾಡ: ಪ್ರಸಾರಾಂಗ, ಕರ್ನಾಟಕ ವಿಶ್ವವಿದ್ಯಾಲಯ.
ಷೇಖ್ ಅಲಿ ಬಿ., (2018), ಕರ್ನಾಟಕ ಚರಿತ್ರೆ ಸಂಪುಟ-4, ವಿದ್ಯಾರಣ್ಯ (ಹಂಪಿ): ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.
ಬಡಿಗೇರ ವಿ. ಎಸ್., (1994), ಬಸವನ ಬಾಗೇವಾಡಿ ತಾಲೂಕಿನ ಪುರಾತತ್ವ ಅವಶೇಷಗಳು- ಒಂದು ವರದಿ (ಇತಿಹಾಸ ದರ್ಶನ ಸಂಪುಟ-9), ಬೆಂಗಳೂರು: ಕರ್ನಾಟಕ ಇತಿಹಾಸ ಅಕಾಡೆಮಿ.
ಕಡಕೋಳ ಹೆಚ್.ಎಂ., (2010), ಬಿಜಾಪುರ ಜಿಲ್ಲಾ ಸಾಂಸ್ಕೃತಿಕ ಪರಂಪರೆ, ವಿಜಯಪುರ (ಬಿಜಾಪುರ): ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು.