ಇಂಚಗೇರಿ ಸಂಪ್ರದಾಯದ ಚಿಂತನೆಗಳು ಮತ್ತು ಮೌಲ್ಯಗಳು
Main Article Content
Abstract
ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿಭಾಗದ ಇಂಚಗೇರಿ ಸಂಪ್ರದಾಯವು ಕೇವಲ ಭಕ್ತಿ, ಧ್ಯಾನ ಹಾಗೂ ಆಧ್ಯಾತ್ಮಿಕ ಬೋಧನೆಗೆ ಸೀಮಿತವಾಗದೆ, ಸಾಮಾಜಿಕ ಸುಧಾರಣೆ ಮತ್ತು ರಾಷ್ಟ್ರೀಯ ಜಾಗೃತಿಯಲ್ಲಿ ಐತಿಹಾಸಿಕ ಪಾತ್ರವನ್ನು ನಿರ್ವಹಿಸಿದೆ. ಶ್ರೀ ಮಾಧವಾನಂದ ಪ್ರಭುಗಳ ನೇತೃತ್ವದಲ್ಲಿ ಈ ಮಠವು ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಜನರಲ್ಲಿ ದೇಶಭಕ್ತಿಯನ್ನು ಜಾಗೃತಗೊಳಿಸಿತು. ಜಾತೀಯತೆ ನಿರ್ಮೂಲನೆ, ಸರ್ವಧರ್ಮ ಸಮನ್ವಯ, ಸ್ತ್ರೀ-ಪುರುಷ ಸಮಾನತೆ ಮತ್ತು ಮಹಿಳಾ ಸಬಲೀಕರಣದಂತಹ ಪ್ರಗತಿಪರ ಚಿಂತನೆಗಳ ಪ್ರಾಯೋಗಿಕ ಅನುಷ್ಠಾನವು ಈ ಪರಂಪರೆಯ ಬಹುದೊಡ್ಡ ಹೆಗ್ಗಳಿಕೆಯಾಗಿದೆ. ‘ಕಾಯಕ ದಾಸೋಹ’ ಸಿದ್ಧಾಂತವನ್ನು ಮೈಗೂಡಿಸಿಕೊಂಡು, ಸಾಮಾಜಿಕ ಮೌಢ್ಯಗಳನ್ನು ಪ್ರಬಲವಾಗಿ ವಿರೋಧಿಸಿ, ಅಂತರ್ಜಾತಿ ವಿವಾಹ ಹಾಗೂ ಸಾಮೂಹಿಕ ಕೃಷಿಯಂತಹ ಕ್ರಾಂತಿಕಾರಿ ಹೆಜ್ಜೆಗಳನ್ನು ಈ ಮಠ ಇಟ್ಟಿದೆ. ಮಾನವ ಧರ್ಮವನ್ನೇ ಪರಮೋಚ್ಚ ಎಂದು ಸಾರುವ ಈ ವಿಶಿಷ್ಟ ಸಂಪ್ರದಾಯವು, ಸರ್ವೋದಯದ ಮರುಸ್ಥಾಪನೆ ಮತ್ತು ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸಿದ ಬಗೆಯ ಸಮಗ್ರ ವಿಶ್ಲೇಷಣೆಯನ್ನು ಇಲ್ಲಿ ಮಂಡಿಸಲಾಗಿದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಮಹಾಲಿಂಗ ಮಂಗಿ, (2010), ಇಂಚಗೇರಿ ಸದ್ಗುರು ಸಂಪ್ರದಾಯ ಸಮಗ್ರ ಅಧ್ಯಯನ, ಬೆಂಗಳೂರು: ಕಕ್ಕೇರಿ ಪಬ್ಲಿಕೇಷನ್ಸ್.
ರಂಜಾನ ದರ್ಗಾ, (2016), ಕ್ರಾಂತಿಯೋಗಿ ಮಹಾದೇವರು, ಹುಬ್ಬಳ್ಳಿ: ಸ. ಸ. ಮಾಧವಾನಂದ ಪ್ರಭುಜಿ ಜನ್ಮಶತಮಾನೋತ್ಸವ ಸಮಿತಿ.
ಕರ್ನಾಟಕ ರಾಜ್ಯ ಸರಕಾರ, (1999), ವಿಜಾಪುರ ಜಿಲ್ಲೆ ಗ್ಯಾಸೆಟಿಯರ್, ಬೆಂಗಳೂರು: ಕರ್ನಾಟಕ ಗ್ಯಾಸೆಟಿಯರ್ ಇಲಾಖೆ.
ಕಡಕೋಳ ಎಚ್.ಎಮ್. (ಸಂ.), (2010), ವಿಜಾಪೂರ ಜಿಲ್ಲಾ ಸಾಂಸ್ಕೃತಿಕ ಪರಂಪರೆ, ವಿಜಾಪೂರ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು.
ವಾಲಿ ಎ. ಸಿ., (2014), ಸರ್ವೋದಯ ಪಾದಯಾತ್ರೆ, ಹುಬ್ಬಳ್ಳಿ: ಶ್ರೀ ಆಧ್ಯಾತ್ಮ ಟ್ರಸ್ಟ್ ಕಮೀಟಿ, ಭಂಡಿವಾಡ.
ವಾಯ್. ಕೆ. ಬಂಡ್ರೊಳ್ಳಿ, (1999), ಶೂರ ಸಂನ್ಯಾಸಿ, ಗೋಕಾಕ: ರಾಮಣ್ಣ ಅ. ಮುತ್ತಾಳ, ರಾಜಾಪೂರ.