ಭಾರತದಲ್ಲಿ ಎಐ ಆಧಾರಿತ ಗವರ್ನನ್ಸ್: ಅವಕಾಶಗಳು ಮತ್ತು ಸವಾಲುಗಳು

Main Article Content

ಮಹೇಶ ಎನ್.

Abstract

ಪ್ರಸ್ತುತ ಜಾಗತಿಕ ಸಂದರ್ಭದಲ್ಲಿ ಕೃತಕ ಬುದ್ಧಿಮತ್ತೆಯು (Artificial Intelligence - AI) ಕೇವಲ ಒಂದು ತಾಂತ್ರಿಕ ಆವಿಷ್ಕಾರವಾಗಿ ಉಳಿಯದೆ, ಸಾರ್ವಜನಿಕ ಆಡಳಿತವನ್ನು ಮರುರೂಪಿಸುವ ಪ್ರಬಲ ಸಾಧನವಾಗಿ ಹೊರಹೊಮ್ಮಿದೆ. ಕೃತಕ ಬುದ್ಧಿಮತ್ತೆ ಎನ್ನುವುದು ಮಾನವ ಬುದ್ಧಿಶಕ್ತಿಯನ್ನು ಅನುಕರಿಸುವ ಯಂತ್ರಗಳ ಸಾಮರ್ಥ್ಯವಾಗಿದ್ದು, ಇದು ಡೇಟಾ ವಿಶ್ಲೇಷಣೆ, ಭವಿಷ್ಯದ ಬಗ್ಗೆ ಮುನ್ನೋಟ ಮತ್ತು ಸ್ವಯಂಚಾಲಿತ ನಿರ್ಧಾರ ತೆಗೆದುಕೊಳ್ಳುವಿಕೆಯಲ್ಲಿ ಕ್ರಾಂತಿಯನ್ನುಂಟು ಮಾಡಿದೆ. ಭಾರತವು ʼಡಿಜಿಟಲ್ ಇಂಡಿಯಾ’ ಅಭಿಯಾನದ ಮೂಲಕ ಆಡಳಿತವನ್ನು ಜನರ ಮನೆಬಾಗಿಲಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ. ಇದರ ಮುಂದಿನ ಹಂತವೇ ʼಎಐ ಆಧಾರಿತ ಗವರ್ನನ್ಸ್’. ಭಾರತದಂತಹ ಬೃಹತ್ ಮತ್ತು ವೈವಿಧ್ಯಮಯ ರಾಷ್ಟ್ರದಲ್ಲಿ ಸಾರ್ವಜನಿಕ ಸೇವೆಗಳ ವಿತರಣೆ, ಪಾರದರ್ಶಕತೆ ಮತ್ತು ಆಡಳಿತಾತ್ಮಕ ದಕ್ಷತೆಯನ್ನು ವೃದ್ಧಿಸುವಲ್ಲಿ ಇದು ಮಹತ್ವದ ಪಾತ್ರ ವಹಿಸಬಹುದು.
ಈ ಲೇಖನವು ಭಾರತದ ಆಡಳಿತ ವ್ಯವಸ್ಥೆಯಲ್ಲಿ ಎಐ ಬಳಕೆಗೆ ಅಗತ್ಯವಾದ ಡಿಜಿಟಲ್‌ ಸಾಧನಗಳು ಮತ್ತು ಇಂಟರ್ನೆಟ್‌ ಬಳಕೆಯಲ್ಲಿನ ಸ್ಥಿತಿಗತಿಗಳು ಮತ್ತು ಬೆಳವಣಿಗೆ, ಆಡಳಿತದಲ್ಲಿ ಇದರ ಬಳಕೆಗೆ ಸವಾಲಾಗಿರುವ ಡಿಜಿಟಲ್‌ ಡಿವೈಡ್‌ ಗಳ ವಸ್ತು ಸ್ಥಿತಿಯ ಬಗ್ಗೆ ವಿಶ್ಲೇಷಿಸುತ್ತದೆ. ಮುಂದುವರೆದು ಆಡಳಿತದ ದಕ್ಷತೆಗೆ ಇದರ ಪಾತ್ರವೇನು ಮತ್ತು ನೌಕರರಲ್ಲಿ ಇದರ ಬಳಕೆಯನ್ನು ಪ್ರೋತ್ಸಾಹಿಸಲು ಕೈಗೊಂಡಿರುವ ಕ್ರಮಗಳೇನು ಎಂಬುದನ್ನು ವಿಶ್ಲೇಷಿಸುತ್ತಾ ಇದರ ಬಳಕೆಗೆ ನೌಕರರ ಮುಂದಿರುವ ಸವಾಲುಗಳ ಬಗ್ಗೆಯೂ ಬೆಳಕು ಚೆಲ್ಲುತ್ತದೆ. ದೇಶದ ಆಡಳಿತ ವ್ಯವಸ್ಥೆಗೆ ಕೃತಕ ಬುದ್ಧಿಮತ್ತೆಯ ಸ್ಪರ್ಶ ನೀಡಲು ಇಂಡಿಯಾ ಎಐ ಮಿಷನ್‌ 1.0 ಮತ್ತು 2.0 ಪ್ರಯತ್ನಗಳ ಬಗ್ಗೆಯೂ ಬೆಳಕು ಚೆಲ್ಲುತ್ತದೆ. ಇದರ ಕುರಿತು ಜಾಗತಿಕ ಪ್ರಯತ್ನಗಳಲ್ಲಿ ಒಂದಾದ ಎಐ ಇಂಪ್ಯಾಕ್ಟ್‌ ಸಮ್ಮೇಳನ ಮತ್ತು ʼನವದೆಹಲಿ ಘೋಷಣೆ’ಯ ಅಂಶಗಳನ್ನೂ ವಿವರಿಸುತ್ತದೆ. ಮೇಲೆ ಪರಿಚಯಿಸಿದ ಎಲ್ಲಾ ಅಂಶಗಳ ಬೆಳಕಿನಲ್ಲಿ ಹಾಗೂ ವಿಕಸಿತ ಭಾರತವನ್ನು ಹಿನ್ನೆಲೆಯಲ್ಲಿ ಇಟ್ಟುಕೊಂಡು ಭಾರತದಲ್ಲಿ ಎಐ ಆಧಾರಿತ ಗವರ್ನೆನ್ಸ್‌ಗೆ ಇರುವ ಅವಕಾಶಗಳೇನು? ಮತ್ತು ಸವಾಲುಗಳೇನು? ಎಂದು ಚರ್ಚಿಸಲಾಗಿದೆ.
ನೀತಿ ಆಯೋಗದ ʼAI For All’ ಕಾರ್ಯತಂತ್ರ ಮತ್ತು 2026ರ ʼನವದೆಹಲಿ ಘೋಷಣೆ’ಯ ʼMANAV’ ತತ್ವಗಳು ಈ ಅಧ್ಯಯನದ ಸೈದ್ಧಾಂತಿಕ ಹಿನ್ನೆಲೆಯಾಗಿವೆ. ಈ ಲೇಖನವು ಗುಣಾತ್ಮಕ, ವಿವರಣಾತ್ಮಕ, ವಿಶ್ಲೇಷಣಾತ್ಮಕ ಸ್ವರೂಪದ್ದಾಗಿದೆ. ಅಧ್ಯಯನಕ್ಕೆ ಅಗತ್ಯವಾದ ಮಾಹಿತಿಯನ್ನು ಸರ್ಕಾರದ ವಾರ್ಷಿಕ ವರದಿಗಳು, PIB, ಟ್ರಾಯ್ ಅಂಕಿಅಂಶಗಳು ಮತ್ತು ಅಂತಾರಾಷ್ಟ್ರೀಯ ವರದಿಗಳಂತಹ ದ್ವಿತೀಯಕ ಮೂಲಗಳಿಂದ ಸಂಗ್ರಹಿಸಲಾಗಿದೆ. ಕರ್ನಾಟಕ ಆಧುನಿಕ ಹಾಜರಾತಿ ನಿರ್ವಹಣಾ ವ್ಯವಸ್ಥೆ (KAASM) ಮತ್ತು iGOT ಕರ್ಮಯೋಗಿ ಪೋರ್ಟಲನ್ನು ಪ್ರಕರಣ ಅಧ್ಯಯನವಾಗಿ ಬಳಸಲಾಗಿದೆ.
ಒಟ್ಟಾರೆಯಾಗಿ, ಎಐ ತಂತ್ರಜ್ಞಾನವು ʼಮಾನವ ಕೇಂದ್ರಿತ’ವಾದಾಗ ಮಾತ್ರ 2047ರ ವಿಕಸಿತ ಭಾರತಕ್ಕೆ ಬೇಕಾದ ಗುಡ್‌ ಗವರ್ನೆನ್ಸ್‌ಗೆ ವಾಹಕ ಶಕ್ತಿಯಾಗಿ ಕೆಲಸ ಮಾಡುತ್ತದೆ ಎಂಬುದು ಈ ಲೇಖನದ ಮುಖ್ಯಾಂಶವಾಗಿದೆ.

Article Details

Section

Research Articles

Author Biography

ಮಹೇಶ ಎನ್.

ಸಹಾಯಕ ಪ್ರಾಧ್ಯಾಪಕರು, ರಾಜ್ಯಶಾಸ್ತ್ರ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬುಕ್ಕಾಪಟ್ಟಣ, ತುಮಕೂರು ಜಿಲ್ಲೆ.

How to Cite

ಮಹೇಶ ಎನ್. (2026). ಭಾರತದಲ್ಲಿ ಎಐ ಆಧಾರಿತ ಗವರ್ನನ್ಸ್: ಅವಕಾಶಗಳು ಮತ್ತು ಸವಾಲುಗಳು. ಅಕ್ಷರಸೂರ್ಯ (AKSHARASURYA), 16(03), 91 to 99. https://aksharasurya.com/index.php/latest/article/view/2165

References

NITI Aayog. (2018). National Strategy For Artificial Intelligence (#AIforAll). https://www.niti.gov.in/sites/default/files/2023-03/National-Strategy-for-Artificial-Intelligence.pdf

Ministry of Electronics and Information Technology. (2024). Annual Report 2023–24. https://www.meity.gov.in/static/uploads/2024/12/10fcadec462c330211502fed3d24ea83.pdf

Government of India. (2026). Delhi Declaration On Responsible AI.

ಪ್ರಜಾವಾಣಿ. (2026, ಫೆಬ್ರವರಿ 24). ಎಐ ಗೆ ಪ್ರಜಾಪ್ರಭುತ್ವದ ಆಯಾಮ ಭಾರತದ ಆಶಯ ಅನುಸರಣೀಯ (ಸಂ).

PIB. (2026 march 08). Bridging Digital Divide. https://www.pib.gov.in/PressReleasePage.aspx?PRID=2236529®=3&lang=2

PIB Delhi. (2024 august 02). Report. https://www.pib.gov.in/PressReleasePage.aspx?PRID=2040566®=3&lang=2#:~:text=As%20of%20March%202024%2C%20out,7696

India Inequality Report 2022: Digital Divide. https://www.oxfamindia.org/knowledgehub/workingpaper/india-inequality-report-2022-digital-divide

Government of Karnataka. (2026). Economic Survey 2025–26. https://des.karnataka.gov.in/uploads/Economic_Survey_2025-26_Kannada_FinalM_1772796457.pdf

World Bank. (2023). GovTech Maturity Index. ಡಿಜಿಟಲ್ ಮತ್ತು ಎಐ ಆಧಾರಿತ ಆಡಳಿತ ವ್ಯವಸ್ಥೆಗಳು ಆಡಳಿತಾತ್ಮಕ ದಕ್ಷತೆಯನ್ನು ಗಮನಾರ್ಹವಾಗಿ ಹೆಚ್ಚಿಸುವ ಬಗ್ಗೆ World Bank (2023, pp. 20–28) ವರದಿ ಸೂಚಿಸುತ್ತದೆ. https://documents1.worldbank.org/curated/en/099040723102586165/pdf/P1694820e047c901008b7e04cb6ee11fa9f.pdf