ದೊಡ್ಡಪಾಲನಹಳ್ಳಿ ಇತಿಹಾಸ ಮತ್ತು ಐತಿಹ್ಯ: ಸಂಬಂಧಗಳ ಅಧ್ಯಯನ

Main Article Content

ಸತೀಶ್ ಎ.ಎಂ.

Abstract

ಇತಿಹಾಸ ಮತ್ತು ಐತಿಹ್ಯಗಳ ನಡುವಿನ ಸಂಬಂಧವನ್ನು ದೊಡ್ಡಪಾಲನಹಳ್ಳಿಯ ಸಾಂಸ್ಕೃತಿಕ ಹಾಗೂ ಭೌತಿಕ ಕುರುಹುಗಳ ಹಿನ್ನೆಲೆಯಲ್ಲಿ ವಿಶ್ಲೇಷಿಸುವ ಪ್ರಯತ್ನವಿದು. ವಿಜಯನಗರ ಸಾಮ್ರಾಜ್ಯದ ಪೂರ್ವದ ಐತಿಹಾಸಿಕ ವ್ಯಕ್ತಿ ‘ಗಂಡುಗಲಿ ಕುಮಾರರಾಮ’ ದೂರದ ಹಳ್ಳಿಯಲ್ಲಿ ಜಾನಪದ ದೈವವಾಗಿ ನೆಲೆಸಿರುವ ವಿಸ್ಮಯ, ಆತನ ದೇವಾಲಯದ ಸ್ಥಾಪನೆಯ ಹಿಂದಿರುವ ಮೌಖಿಕ ಕಥನಗಳು ಹಾಗೂ ನಂಬಿಕೆಗಳನ್ನು ಇಲ್ಲಿ ಕಟ್ಟಿಕೊಡಲಾಗಿದೆ. ಅಲ್ಲದೆ, ಗ್ರಾಮದ ‘ತೋಳಗೈಯಮ್ಮನ ಗುಡಿ’ಯ (ಮಾಸ್ತಿಕಲ್ಲು) ಹಿನ್ನೆಲೆಯಲ್ಲಿ ಪಾಲನಾಯಕ ಹಾಗೂ ವಲಸೆ ಬಂದ ಕುಟುಂಬದ ಜಕ್ಕನಾಯಕನ ನಡುವೆ ನಡೆದ ಕದನದ ರೋಚಕ ಐತಿಹ್ಯವನ್ನು ತೆರೆದಿಡಲಾಗಿದೆ. ಗ್ರಾಮದಲ್ಲಿ ದೊರೆತಿರುವ, ಬುಕ್ಕರಾಯನ ಉಲ್ಲೇಖವಿರುವ ಕ್ರಿ.ಶ. 1343ರ ವೀರಗಲ್ಲು ಶಾಸನದಲ್ಲಿನ ಅಂಶಗಳನ್ನು ಸ್ಥಳೀಯ ಐತಿಹ್ಯಗಳೊಂದಿಗೆ ಮುಖಾಮುಖಿಯಾಗಿಸಿ, ಇತಿಹಾಸದ ಪುಟಗಳಲ್ಲಿ ಮರೆಯಾಗಿರುವ ಸತ್ಯಗಳನ್ನು ಶೋಧಿಸುವ ತಾತ್ವಿಕ ಚಿಂತನೆಯನ್ನು ಮಂಡಿಸಲಾಗಿದೆ. ಶಾಸನಗಳು ಹಾಗೂ ಮೌಖಿಕ ಪರಂಪರೆಯ ಕೊಂಡಿಗಳನ್ನು ಬೆಸೆಯುವ ಮೂಲಕ ಸ್ಥಳೀಯ ಚರಿತ್ರೆಯ ಮರುನಿರ್ಮಾಣಕ್ಕೆ ಇಲ್ಲಿ ಒತ್ತು ನೀಡಲಾಗಿದೆ.

Article Details

Section

Research Articles

Author Biography

ಸತೀಶ್ ಎ.ಎಂ.

ಸಹಾಯಕ ಪ್ರಾಧ್ಯಾಪಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬುಕ್ಕಾಪಟ್ಟಣ, ಶಿರಾ ತಾಲ್ಲೂಕು.

How to Cite

ಸತೀಶ್ ಎ.ಎಂ. (2026). ದೊಡ್ಡಪಾಲನಹಳ್ಳಿ ಇತಿಹಾಸ ಮತ್ತು ಐತಿಹ್ಯ: ಸಂಬಂಧಗಳ ಅಧ್ಯಯನ. ಅಕ್ಷರಸೂರ್ಯ (AKSHARASURYA), 16(03), 29 to 34. https://aksharasurya.com/index.php/latest/article/view/2155

References

ಪುರುಷೋತ್ತಮ ಬಿಳಿಮಲೆ, ಐತಿಹ್ಯಗಳು (ಸುವರ್ಣಜಾನಪದ ಲೇಖನಗಳು - ಸಂ: ಡಾ. ವೀರಣ್ಣ ಮತ್ತು ಡಾ. ಶ್ರೀಪಾದಶೆಟ್ಟಿ), ಪು.ಸಂ. 44

ಕೃಷ್ಣಮೂರ್ತಿ, (2008), ದೊಡ್ಡಪಾಲನಹಳ್ಳಿ ವೀರಗಲ್ಲು ಶಾಸನ ಮತ್ತು ಶಿಲ್ಪ (ಇತಿಹಾಸ ದರ್ಶನ ಸಂಪುಟ 23), ಬೆಂಗಳೂರು: ಕರ್ನಾಟಕ ಇತಿಹಾಸ ಅಕಾಡೆಮಿ, ಪು.ಸಂ. 90

ಕೃಷ್ಣಮೂರ್ತಿ, (2008), ದೊಡ್ಡಪಾಲನಹಳ್ಳಿ ವೀರಗಲ್ಲು ಶಾಸನ ಮತ್ತು ಶಿಲ್ಪ (ಇತಿಹಾಸ ದರ್ಶನ ಸಂಪುಟ 23), ಬೆಂಗಳೂರು: ಕರ್ನಾಟಕ ಇತಿಹಾಸ ಅಕಾಡೆಮಿ, ಪು.ಸಂ. 92

ಪರಮಶಿವಮೂರ್ತಿ ಡಿ.ವಿ., (1996), ಸಂಶೋಧನ ಸಿರಿ, ಬೆಂಗಳೂರು: ಗುರುನಿಧಿ ಪ್ರಕಾಶನ, ಪು.ಸಂ. 2

ಹುಲ್ಲೂರು ಶ್ರೀನಿವಾಸ ಜೋಯಿಸರು, (1955), ಗಂಡುಗಲಿ ಕುಮಾರರಾಮ, ಅರಸೀಕೆರೆ: ರಸಿಕ ರಂಜನಿ ಪ್ರಕಾಶನ, ಪು.ಸಂ. 13, 27, 63 & 102

ನಾಗಸಂಗಯ್ಯ, ಗಂಡುಗಲಿ ಕುಮಾರ ರಾಮ (ಉತ್ತರಾರ್ಧಭಾಗ), ಧಾರವಾಡ: ಮಿಂಚಿನ ಬಳ್ಳಿ ಕಾರ್ಯಾಲಯ, ಪು.ಸಂ. 42

ಹುಲ್ಲೂರು ಶ್ರೀನಿವಾಸ ಜೋಯಿಸರು, (1955), ಗಂಡುಗಲಿ ಕುಮಾರರಾಮ, ಅರಸೀಕೆರೆ: ರಸಿಕ ರಂಜನಿ ಪ್ರಕಾಶನ, ಪು.ಸಂ. 63