ಡಿಜಿಟಲ್ ಪುನರುತ್ಥಾನ: ಮಿಡಿಗೇಶಿಯ ಸೂಕ್ಷ್ಮ ಇತಿಹಾಸದ ಸಂರಕ್ಷಣೆ ಮತ್ತು ಪ್ರಸಾರದಲ್ಲಿ ಕೃತಕ ಬುದ್ಧಿಮತ್ತೆಯ (AI) ಅನ್ವಯಗಳು
Main Article Content
Abstract
ಕರ್ನಾಟಕದ ತುಮಕೂರು ಜಿಲ್ಲೆಯ ಮಿಡಿಗೇಶಿಯ ಶ್ರೀಮಂತ ಐತಿಹಾಸಿಕ ಪರಂಪರೆ, ಶಾಸನಗಳು ಮತ್ತು ಮ್ಯಾಕೆಂಜಿ ಸಂಗ್ರಹದ ಹಸ್ತಪ್ರತಿಗಳು ಕಾಲಕ್ರಮೇಣ ನಶಿಸುತ್ತಿವೆ. ಇವುಗಳನ್ನು ಸಂರಕ್ಷಿಸಿ ಡಿಜಿಟಲ್ ಪೀಳಿಗೆಗೆ ತಲುಪಿಸಲು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಬಳಕೆಯ ಸಾಧ್ಯತೆಗಳನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಇಮೇಜ್ ಎನ್‌ಹಾನ್ಸ್‌ಮೆಂಟ್, ಜನರೇಟಿವ್ ಎಐ ಮತ್ತು 3D ಮಾಡೆಲಿಂಗ್ ತಂತ್ರಗಳ ಮೂಲಕ ಸವೆದ ಶಾಸನಗಳ ಡಿಜಿಟಲ್ ಪುನರುಜ್ಜೀವನ, ಐತಿಹಾಸಿಕ ಸನ್ನಿವೇಶಗಳ ದೃಶ್ಯೀಕರಣ ಮತ್ತು ವರ್ಚುವಲ್ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ವಿಧಾನಗಳನ್ನು ಚರ್ಚಿಸಲಾಗಿದೆ. ಶಾಲಾ ಶಿಕ್ಷಣದಲ್ಲಿ ಇತಿಹಾಸವನ್ನು ಕೇವಲ ಪಠ್ಯವಾಗಿಸದೆ ಸಜೀವ ಅನುಭವವಾಗಿಸಲು ಎಐ ಸಾಧನಗಳ ಅಳವಡಿಕೆ ಹಾಗೂ ಭವಿಷ್ಯದಲ್ಲಿ ʼಮಿಡಿಗೇಶಿ ಹಿಸ್ಟರಿ ಆಪ್’ ರೂಪಿಸುವ ಯೋಜನೆಗಳನ್ನು ಮಂಡಿಸಲಾಗಿದೆ. ಕೃತಕ ಬುದ್ಧಿಮತ್ತೆಯು ಕೇವಲ ಆಧುನಿಕ ಸಾಧನವಲ್ಲ, ಅದು ನಮ್ಮ ಗತಕಾಲದ ವೈಭವವನ್ನು ಮುಂದಿನ ಜನಾಂಗಕ್ಕೆ ಹಸ್ತಾಂತರಿಸುವ ಮತ್ತು ಪರಂಪರೆಯ ಸಂರಕ್ಷಣೆಯಲ್ಲಿ ಸಂಸ್ಕೃತಿ ಸಂವರ್ಧಕವಾಗಿ ಕಾರ್ಯನಿರ್ವಹಿಸುವ ಸಮರ್ಥ ಸೇತುವೆಯಾಗಿದೆ ಎಂಬುದನ್ನು ಬರಹವು ಸ್ಪಷ್ಟಪಡಿಸುತ್ತದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ವಿಲ್ಸನ್ ಎಚ್.ಎಚ್., (1828), ಮ್ಯಾಕೆಂಜಿ ಸಂಗ್ರಹ (The Mackenzie Collection): A Descriptive Catalogue Of The Oriental Manuscripts, ಕಲಕತ್ತಾ: ದಿ ಏಷಿಯಾಟಿಕ್ ಪ್ರೆಸ್.
ರೈಸ್ ಬಿ.ಎಲ್. (ಸಂ.), (1904), ಎಪಿಗ್ರಾಫಿಯಾ ಕರ್ನಾಟಕ (Epigraphia Carnatica): ಸಂಪುಟ 12, ತುಮಕೂರು ಜಿಲ್ಲೆ, ಬೆಂಗಳೂರು: ಮೈಸೂರು ಸರ್ಕಾರಿ ಕೇಂದ್ರ ಮುದ್ರಣಾಲಯ.
ಪುಟ್ಟಣ್ಣ ಎಂ.ಎಸ್., ಪಾಳೆಯಗಾರರು (ಮಿಡಿಗೇಶಿ ಪಾಳೆಯಗಾರರ ಕುರಿತಾದ ಮೌಖಿಕ ಇತಿಹಾಸ).
Applications Of AI In Cultural Heritage Preservation (IEEE ಸಂಶೋಧನಾ ಲೇಖನ), IEEE.
ಟೈಲರ್ ವಿಲಿಯಂ, (1857), A Catalogue Raisonnee Of Oriental Manuscripts In The Government Library, ಮದ್ರಾಸ್: ಯುನೈಟೆಡ್ ಸ್ಕಾಟಿಷ್ ಪ್ರೆಸ್ (ಮದ್ರಾಸ್ ಸರ್ಕಾರ).