ರಾಘವೇಂದ್ರ ಪಾಟೀಲ್‌ರವರ ತೇರು ಕಾದಂಬರಿಯಲ್ಲಿನ ವಾಸ್ತವಿಕತೆಯ ಹೊಳಹುಗಳು

Main Article Content

ಅಯ್ಯಪ್ಪ

Abstract

ರಾಘವೇಂದ್ರ ಪಾಟೀಲರ 'ತೇರು' ಕಾದಂಬರಿಯು ಧರಮನಟ್ಟಿ ದೇಸಗತಿಯ ಸ್ಥಾಪನೆ ಹಾಗೂ ವಿಠಲ ದೇವರ ಬೃಹತ್ ತೇರಿನ ನಿರ್ಮಾಣದ ಹಿನ್ನೆಲೆಯನ್ನು ಅನಾವರಣಗೊಳಿಸುತ್ತದೆ. ಉಳಿಗಮಾನ್ಯ ವ್ಯವಸ್ಥೆ ಮತ್ತು ಪ್ರತಿಷ್ಠೆಗಾಗಿ ನಡೆಯುವ ನರಬಲಿಯಂತಹ ಕ್ರೂರ ಆಚರಣೆಗಳನ್ನು ವಾಸ್ತವಿಕ ನೆಲೆಯಲ್ಲಿ ನಿರೂಪಿಸಲಾಗಿದೆ. ತೇರು ಚಲಿಸದಿದ್ದಾಗ ಕೆಳವರ್ಗದ ಬಡ ದ್ಯಾವಪ್ಪನ ಮಗನನ್ನು ಬಲಿಕೊಡುವುದು ಮತ್ತು ಆತನ ವಂಶಸ್ಥರು ರಕ್ತತಿಲಕ ಸೇವೆ ಮಾಡಬೇಕೆಂಬ ಕಡ್ಡಾಯದ ಆಚರಣೆಗಳು ಇಲ್ಲಿನ ಪ್ರಧಾನ ವಸ್ತುವಾಗಿವೆ. ಕಾಲಕ್ರಮೇಣ ಜನರ ಧಾರ್ಮಿಕ ನಂಬಿಕೆಗಳು ಕಡಿಮೆಯಾಗುವುದು ಹಾಗೂ ಮುಗ್ಧ ಜನರ ಶೋಷಣೆಯನ್ನು ಎಳೆಎಳೆಯಾಗಿ ಬಿಡಿಸಿಡಲಾಗಿದೆ. ದೈವತ್ವದ ಪ್ರಭಾವ ಮತ್ತು ಶೋಷಿತ ವರ್ಗದ ನೈಜ ಸ್ಥಿತಿಗತಿಗಳನ್ನು ಕಾದಂಬರಿ ಪ್ರಶ್ನಿಸುತ್ತದೆ.

Article Details

Section

Research Articles

Author Biography

ಅಯ್ಯಪ್ಪ

ಸಹಾಯಕ ಪ್ರಾಧ್ಯಾಪಕರು, ಸಿ.ಜಿ. ಬೆಲ್ಲದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಅಕ್ಕಿ ಆಲೂರು, ಹಾನಗಲ್, ಹಾವೇರಿ.

How to Cite

ಅಯ್ಯಪ್ಪ. (2023). ರಾಘವೇಂದ್ರ ಪಾಟೀಲ್‌ರವರ ತೇರು ಕಾದಂಬರಿಯಲ್ಲಿನ ವಾಸ್ತವಿಕತೆಯ ಹೊಳಹುಗಳು. ಅಕ್ಷರಸೂರ್ಯ (AKSHARASURYA), 2(08), 121 to 127. https://aksharasurya.com/index.php/latest/article/view/206

References

ತೇರು (ಕಾದಂಬರಿ), ರಾಘವೇಂದ್ರ ಪಾಟೀಲ, ಆನಂದಕಂದ ಗ್ರಂಥಮಾಲೆ, ಮಲ್ಲಾಡಹಳ್ಳಿ, 2003.

ದೇಸಗತಿ ಮಾಯಿಯ ಮುಖಗಳು, ರಾಘವೇಂದ್ರ ಪಾಟೀಲ, ಆನಂದಕಂದ ಗ್ರಂಥಮಾಲೆ, ಮಲ್ಲಾಡಹಳ್ಳಿ, 2000.