ಕುಮಟಗಿ ಜಲಮಹಲ್: ಆದಿಲ್‌ಶಾಹಿ ವಂಶದ ಜಲಸಂಸ್ಕೃತಿಯ ಶಿಲಾ ಅದ್ಭುತ

Main Article Content

ಶಿವಪುತ್ರ ಜಾಲವಾದಿ

Abstract

ಕುಮಟಗಿ ಜಲಮಹಲ್ ವಿಜಯಪುರ ಜಿಲ್ಲೆಯ ಆದಿಲ್‌ಶಾಹಿ ಕಾಲದಲ್ಲಿ ನಿರ್ಮಾಣವಾದ ಪ್ರಮುಖ ಜಲವಾಸ್ತು ಸ್ಮಾರಕವಾಗಿದೆ. ಮಧ್ಯಯುಗೀನ ಭಾರತದಲ್ಲಿ ಅಭಿವೃದ್ಧಿಪಡಿಸಲಾದ ವೈಜ್ಞಾನಿಕ ಜಲ ನಿರ್ವಹಣಾ ತಂತ್ರಜ್ಞಾನ ಮತ್ತು ಶಿಲ್ಪಕಲೆಯ ಸಮನ್ವಯವನ್ನು ಈ ಸ್ಮಾರಕ ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ. ಮಹಮ್ಮದ್ ಆದಿಲ್‌ಶಾ (1627-1656)ನ ಆಳ್ವಿಕೆಯ ಅವಧಿಯಲ್ಲಿ ನಿರ್ಮಿಸಲಾದ ಈ ಜಲಮಹಲ್ ಸ್ಥಳೀಯ ಭೌಗೋಳಿಕ ಪರಿಸ್ಥಿತಿಗೆ ಹೊಂದಿಕೊಂಡು ರೂಪುಗೊಂಡ ಸುಧಾರಿತ ನೀರಿನ ಸಂಗ್ರಹಣೆ ಹಾಗೂ ವಿತರಣಾ ವ್ಯವಸ್ಥೆಯನ್ನು ಹೊಂದಿದೆ. ಬಲಿಷ್ಠ ಕಲ್ಲಿನ ನಿರ್ಮಾಣ, ಭೂಗತ ನೀರಿನ ಹರಿವು, ಮಳೆನೀರು ಸಂಗ್ರಹಣೆ ಮತ್ತು ಸಹಜ ತಾಪಮಾನ ನಿಯಂತ್ರಣದ ವಿನ್ಯಾಸಗಳು ಆದಿಲ್‌ಶಾಹಿ ಯುಗದ ತಾಂತ್ರಿಕ ಜ್ಞಾನವನ್ನು ಪ್ರದರ್ಶಿಸುತ್ತವೆ. ಈ ಲೇಖನವು ಜಲಮಹಲ್‌ನ ಇತಿಹಾಸ, ವಾಸ್ತುಶಿಲ್ಪ, ಜಲತಂತ್ರಜ್ಞಾನ, ಸಾಂಸ್ಕೃತಿಕ ಮಹತ್ವ ಮತ್ತು ಸಂರಕ್ಷಣಾ ಸಮಸ್ಯೆಗಳ ಕುರಿತು ವಿಶ್ಲೇಷಿಸುತ್ತದೆ.

Article Details

Section

Research Articles

Author Biography

ಶಿವಪುತ್ರ ಜಾಲವಾದಿ

ಸಹಾಯಕ ಪ್ರಾಧ್ಯಾಪಕರು, ಇತಿಹಾಸ ವಿಭಾಗ, ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ, ದೇವರಹಿಪ್ಪರಗಿ.

How to Cite

ಶಿವಪುತ್ರ ಜಾಲವಾದಿ. (2026). ಕುಮಟಗಿ ಜಲಮಹಲ್: ಆದಿಲ್‌ಶಾಹಿ ವಂಶದ ಜಲಸಂಸ್ಕೃತಿಯ ಶಿಲಾ ಅದ್ಭುತ. ಅಕ್ಷರಸೂರ್ಯ (AKSHARASURYA), 11(06), 182 to 187. https://aksharasurya.com/index.php/latest/article/view/1970

References

ಶಾಹು ಕಾಳೇ : ವಿಜಯಪುರದ ಜಲವ್ಯವಸ್ಥೆಗಳು, ವಿಜಯಪುರ ವಿಶ್ವವಿದ್ಯಾಲಯ ಪ್ರಕಾಶನ.

ಡಾ. ವಿ. ಎಸ್. ಕುಲಕರ್ಣಿ : ಆದಿಲ್‌ಶಾಹಿಗಳ ವಾಸ್ತುಶಿಲ್ಪ, ಕರ್ನಾಟಕ ಇತಿಹಾಸ ಅಕಾಡೆಮಿ.

ಸ್ಥಳೀಯ ಜನಪದ ಮಾಹಿತಿ ಮತ್ತು ಕ್ಷೇತ್ರ ಅಧ್ಯಯನ.

ವಿಜಯಪುರ ಪುರಾತತ್ವ ಇಲಾಖೆ ವರದಿಗಳು.

ಕಾಶಿನಾಥರಾವ್ ಎಸ್. : ಬೀದರ್–ಬಿಜಾಪುರ ಆದಿಲ್‌ಶಾಹಿ ರಾಜ್ಯದ ವಾಸ್ತು ಪರಂಪರೆ. ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು: 2012.

ಹನಮಂತಪ್ಪ ಎಂ. : ಡಕ್ಕನ್ ಪ್ರದೇಶದ ನೀರು ಸಂರಚನಾ ವ್ಯವಸ್ಥೆಗಳು – ಐತಿಹಾಸಿಕ ಅಧ್ಯಯನ. ಪ್ರಸಾರಾಂಗ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ 2015.