ಕರ್ನಾಟಕದ ಏಕೀಕರಣಕ್ಕೆ ಸ್ಫೂರ್ತಿಯಾದ ವಿಜಯನಗರ ಸಾಮ್ರಾಜ್ಯ

Main Article Content

ವಿಜಯಲಕ್ಷ್ಮಿ

Abstract

19 ಮತ್ತು 20ನೇ ಶತಮಾನದ ಆದಿಭಾಗದಲ್ಲಿನ ವಸಾಹತುಶಾಹಿ ಆಡಳಿತದಿಂದ ಹರಿದು ಹಂಚಿಹೋಗಿರುವ ಕನ್ನಡ ನಾಡನ್ನು ಒಂದಾಗಿಸುವ ಉದ್ದೇಶದಿಂದ ವಸಾಹತುಶಾಹಿಗಳ ವಿರುದ್ಧವಾಗಿ ಕನ್ನಡಿಗರಲ್ಲಿ ಜಾಗೃತಿಯನ್ನು ಉಂಟು ಮಾಡುವುದು. ಮತ್ತು 14ನೇ ಶತಮಾನದಲ್ಲಿ ಉದಯವಾದ ವಿಜಯನಗರ ಸಾಮ್ರಾಜ್ಯದ ವೈಭವ ಮತ್ತು ಚಾರಿತ್ರಿಕ ನೆನಪುಗಳ ಮೂಲಕ ಕನ್ನಡಿಗರು ತಮ್ಮ ಅಸ್ಮಿತೆಯನ್ನು ಕಟ್ಟಿಕೊಳ್ಳಲು ಆ ಅವಧಿಯಲ್ಲಿ ರಚನೆಯಾದ ಸಾಹಿತ್ಯವು ಹೇಗೆ ಪ್ರೇರೇಪಿಸಿತು ಎಂಬುದನ್ನು ತಿಳಿಸುವ ಉದ್ದೇಶ ಹೊಂದಿದೆ. ‘ಕೇಳುತಿದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ ಕಾಣುತಿದೆ ಹೊನ್ನಚರಿತೆಯಲಿ ಹಂಪೆಯ ಗುಡಿ ವೈಭವದ ತವರು ಕೂಗಿದೆ ಪ್ರೀತಿಸುವ ಹೃದಯ ಬೇಡಿದೆ ಕೇಳು ನೀನು’ ಎಂದು ವಿಜಯನಗರ ಸಾಮ್ರಾಜ್ಯವನ್ನು ಕುರಿತು ಸಾಹಿತಿ ಡಾ.ದೊಡ್ಡರಂಗೆಗೌಡರು ಬರೆದ ಕವಿತೆಯ ಸಾಲುಗಳು ಹಂಪೆಯ ಶಿಲ್ಪಗಳಲ್ಲಿ ಕನ್ನಡದ ಅಸ್ಮಿತೆಯನ್ನು ಕಾಣುವ ಮತ್ತು ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ಈ ಸಾಮ್ರಾಜ್ಯದ ಜೊತೆಗೆ ತೋರುವಂತೆ ತಮ್ಮ ಕವಿತೆಯ ಮೂಲಕ ಕನ್ನಡ ಸಾಹಿತ್ಯಕ್ಕೆ ಜೀವ ತುಂಬಿದ್ದಾರೆ. ಇಂತಹ ಕನ್ನಡ ಕವಿಗಳ ಜಾಗೃತಿ ಸಂದೇಶವನ್ನು ಪರಿಚಯಿಸುವುದೇ ಈ ಲೇಖನದ ಮೂಲ ಉದ್ದೇಶ.

Article Details

Section

Research Articles

Author Biography

ವಿಜಯಲಕ್ಷ್ಮಿ

ಸಹಾಯಕ ಪ್ರಾಧ್ಯಾಪಕರು, ಇತಿಹಾಸ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೊಪ್ಪಳ.

How to Cite

ವಿಜಯಲಕ್ಷ್ಮಿ. (2026). ಕರ್ನಾಟಕದ ಏಕೀಕರಣಕ್ಕೆ ಸ್ಫೂರ್ತಿಯಾದ ವಿಜಯನಗರ ಸಾಮ್ರಾಜ್ಯ. ಅಕ್ಷರಸೂರ್ಯ (AKSHARASURYA), 11(06), 176 to 181. https://aksharasurya.com/index.php/latest/article/view/1969

References

ಗರುಡ ಸದಾಶಿವರಾಯ., (1929), ಎಚ್ಚಮನಾಯಕ, ಮಲ್ಲಪ್ಪ ವಿರೂಪಾಕ್ಷಪ್ಪ ಅರಳಿ, ಗದಗ.

ಶ್ರೀನಾಗೇಶ., (1936), ಎಚ್ಚಮ್ಮ ನಾಯಕ, ಆನಂದವನ, ಅಗಡಿ

ಗಳಗನಾಥ., (1913), ಕುಮುದಿನಿ (ಗಳಗನಾಥರ ಕಾದಂಬರಿಗಳು ಸಂ-1) ಪ್ರಸಾರಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

ಗಳಗನಾಥ., (1999), ಮಾಧವ ಕರುಣಾ ವಿಲಾಸ (ಗಳಗನಾಥರ ಕಾದಂಬರಿಗಳು ಸಂ-1) ಪ್ರಸಾರಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

ಗಳಗನಾಥ., (1999), ಕನ್ನಡಿಗರ ಕರ್ಮಕಥೆ, (ಗಳಗನಾಥರ ಕಾದಂಬರಿಗಳು ಸಂ-2) ಪ್ರಸಾರಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

ಆಲೂರು ವೆಂಕಟರಾಯ., (2009), ಕರ್ನಾಟಕತ್ವದ ವಿಕಾಸ ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು.

ಆನಂದಕಂದ., (1934), ರಾಜಯೋಗಿ, ಮನೋಹರ ಗ್ರಂಥಮಾಲಾ, ಧಾರವಾಡ.

ರಂ.ಶ್ರೀ. ಮುಗಳಿ., (1948), ವಿಜಯ ಸಾಮ್ರಾಜ್ಯ, ವಿಜಯ ಗ್ರಂಥಮಾಲೆ, ಬೆಳಗಾವಿ.

ಕುವೆಂಪು, ಹಂಪೆಯ ಭೀಮ., (2000), ಶಿವಾರೆಡ್ಡಿ ಕೆ.ಸಿ.(ಸಂ) ಕುವೆಂಪು ಸಮಗ್ರ ಕಾವ್ಯ ಸಂ-1, ಪ್ರಸಾರಂಗ ಕನ್ನಡ ವಿಶ್ವವಿದ್ಯಾಲಯ, ಹಂಪಿ.