ಗುಳೇದಗುಡ್ಡ ತಾಲೂಕಿನ ಸಾಹಿತ್ಯ ಚರಿತೆ
Main Article Content
Abstract
ಗುಳೇದಗುಡ್ಡ ತಾಲೂಕು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಸಾಹಿತ್ಯಿಕವಾಗಿ ಮತ್ತು ಸಾಂಸ್ಕೃತಿಕವಾಗಿ ತನ್ನದೇಯಾದ ಅನನ್ಯತೆಯಿಂದ ಸಮ್ಮಿಳಿತವಾದ ಶ್ರೀಮಂತ ಪರಂಪರೆಯನ್ನು ಹೊಂದಿದೆ. ಈ ಸಾಹಿತ್ಯ ಪರಂಪರೆಯು 16 ನೇ ಶತಮಾನದಲ್ಲಿ ಗುಳೇದಗುಡ್ಡದ ಮುರಿಗೆ ದೇಶೀಕೇಂದ್ರರು ರಚಿಸಿದ ಹಮ್ಮೀರ ಕಾವ್ಯದಿಂದ ಆರಂಭವಾಗಿ ಇತ್ತೀಚಿನ ನವಯುಗದ ಪ್ರಯೋಗಶೀಲ ಕವಿ ಕಾವ್ಯಗಳವರೆಗೂ ಅವ್ಯಾಹತವಾಗಿ ಮುಂದುವರೆಯುತ್ತಿದೆ. ಹಮ್ಮೀರ ಕಾವ್ಯದ ನಂತರ ಈ ಅಧ್ಯಯನವು ಬೇಂದ್ರೆಯವರ ಶಿಷ್ಯರೆಂದೇ ಖ್ಯಾತನಾಮರಾದ ಡಾ. ಎಸ್. ಎಸ್. ಬಸುಪಟ್ಟದರವರಿಂದ ಆರಂಭವಾಗಿ ಅವರ ಶಿಷ್ಯೋತ್ತಮರಾದ ಡಾ. ಮಹಾದೇವ ಕಣವಿ, ಶ್ರೀ ಮಲ್ಲಿಕಾರ್ಜುನ ಬನ್ನಿ, ಡಾ. ಭೀಮನಗೌಡ ಪಾಟೀಲ, ಶ್ರೀ ಅಶೋಕ ಸಮಗಂಡಿ, ಶ್ರೀ ಕೆ. ಎನ್. ಯರಗಾ ಇವರು ರಚಿಸಿರುವ ಮೌಲಿಕ ಕೃತಿಗಳ ಒಳನೋಟಗಳಿಂದ ಮುಂದುವರೆದು, ಡಾ. ರಾಜಶೇಖರ ಬಸುಪಟ್ಟದ, ಡಾ. ವಿ. ಎ. ಬೆನಕನಾಳ, ಶ್ರೀ ಸಿದ್ಧಲಿಂಗಪ್ಪ ಬರಗುಂಡಿ, ಶ್ರೀ ಎಂ.ಪಿ. ನೀಲಕಂಠಮಠ, ಡಾ. ಸಿ. ಎಂ. ಜೋಶಿ ಇವರ ಕೃತಿರತ್ನಗಳ ಒಳಪೊಕ್ಕು ಶೋಧಿಸುವ ಕ್ರಮವನ್ನೊಳಗೊಂಡಿದೆ. ಮುಂದುವರೆದು ಇತ್ತೀಚಿನ ಪ್ರಯೋಗಶೀಲ ಯುಗದ ಕವಿ ಕಾವ್ಯಗಳವರೆಗೂ ಶೋಧನಾ ಕಾರ್ಯ ಆವರಿಸಿಕೊಂಡು ಇಡೀ ಗುಳೇದಗುಡ್ಡ ತಾಲೂಕಿನ ಸಾಹಿತ್ಯಿಕ ಚರಿತ್ರೆ ಹಾಗೂ ಪರಂಪರೆಯನ್ನು ಕಟ್ಟಿಕೊಡುವ ಉದ್ದೇಶವನ್ನು ಹೊಂದಿದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಗುಳೇದಗುಡ್ಡ ಪರಿಸರದ ಮಠಗಳು – ಡಾ. ರಾಜಶೇಖರ ಬಸುಪಟ್ಟದ
ನೆಲದೊಡಲ ಸಿರಿ – ಡಾ. ರಾಜಶೇಖರ ಬಸುಪಟ್ಟದ
ಗುಳೆ - ಸ್ಮರಣ ಸಂಚಿಕೆ - ಪ್ರ.ಸಂಪಾದಕರು- ಸಿ.ಎಂ. ಜೋಶಿ
ಎಸ್. ಎಸ್. ಬಸುಪಟ್ಟದ – ಶ್ರೀ ಅಬ್ಬಾಸ್ ಮೇಲಿನಮನಿ
ಗುಳೇದಗುಡ್ಡದ ಒಪ್ಪತ್ತೇಶ್ವರ ಮಠದ ಪರಂಪರೆ - ಶ್ರೀ ಹನಮಂತಪ್ಪ ರಂಗಾಪೂರ
ಅಭಿನವ ಒಪ್ಪತ್ತೇಶ್ವರ ಶ್ರೀಗಳ ಜೀವನ ಮತ್ತು ಸಾಧನೆ – ಶ್ರೀ ಹನಮಂತಪ್ಪ ರಂಗಾಪೂರ
ಕ್ಯಾದಗಿ – ಡಾ. ಮಹಾದೇವ ಕಣವಿಯವರ ಅಭಿನಂದನಾ ಗ್ರಂಥ - ಸಂ. ಶ್ರೀರಾಮ ಇಟ್ಟಣ್ಣವರ
ಹಮ್ಮೀರ ಕಾವ್ಯ - ಡಾ. ಎಂ. ಎಸ್. ಸುಂಕಾಪುರ