ಬಿಜಾಪುರ ಆದಿಲ್‌ಶಾಹಿಗಳ ಕಾಲದ ಕನ್ನಡ ಸಾಹಿತ್ಯ

Main Article Content

ಮುಸ್ತಾಕ ಅಹ್ಮದ

Abstract

ಬಿಜಾಪುರವನ್ನು ಕೇಂದ್ರವಾಗಿ ಹೊಂದಿದ್ದ ಆದಿಲ್‌ಶಾಹಿ ವಂಶದ ಆಳ್ವಿಕೆಯಲ್ಲಿ ಕನ್ನಡ ಸಾಹಿತ್ಯಕ್ಕೆ ವಿಶಿಷ್ಟವಾದ ಪ್ರೋತ್ಸಾಹ ದೊರಕಿತು. ದಕ್ಷಿಣ ಭಾರತದಲ್ಲಿ ರಾಜಕೀಯವಾಗಿ ಮುಸ್ಲಿಂ ಆಡಳಿತವಿದ್ದರೂ ಸ್ಥಳೀಯ ಭಾಷೆ ಮತ್ತು ಸಂಸ್ಕೃತಿಗೆ ಗೌರವ ನೀಡಿದ ಕಾರಣದಿಂದ ಕನ್ನಡ ಸಾಹಿತ್ಯ ಸಮೃದ್ಧಿಯಾಗಿ ಬೆಳೆದಿತ್ತು. ಈ ಕಾಲಾವಧಿಯಲ್ಲಿ ವೀರಶೈವ ಮತ್ತು ಜೈನ ಪರಂಪರೆಗಳ ಪ್ರಭಾವ ಸಹ ಮುಂದುವರೆದಿತ್ತು. ರಾಜಾಶ್ರಯ ಹಾಗೂ ಸಾಮಂತ ದೊರೆಗಳ ಆಶ್ರಯದಿಂದ ಕವಿಗಳು ಧಾರ್ಮಿಕ, ತಾತ್ವಿಕ ಹಾಗೂ ನೀತಿಪರ ಕೃತಿಗಳನ್ನು ರಚಿಸಿದರು. ಷಟ್ಪದಿ, ತ್ರಿಪದಿ, ವಚನ, ಸಾಂಗತ್ಯ ಮತ್ತು ದಾಸ ಸಾಹಿತ್ಯ ಕೃಷಿ ಬೆಳವಣಿಗೆ ಕಂಡಿತ್ತು. ಮಹಿಪತಿದಾಸರು, ಯತಿರಾಯ, ರುಕ್ಮಾಂಗದ ಪಂಡಿತ, ಜಕ್ಕಪ್ಪಯ್ಯ, ಷಡಕ್ಷರದೇವ, ಭೀಮಕವಿ ಮುಂತಾದವರು ಗಮನಾರ್ಹರು. ಇವರ ಕೃತಿಗಳಲ್ಲಿ ಶಿವಭಕ್ತಿ, ನೈತಿಕತೆ, ಸಮಾಜಚಿಂತನೆ ಹಾಗೂ ಜೀವನಮೌಲ್ಯಗಳ ಪ್ರತಿಪಾದನೆ ಕಂಡುಬರುತ್ತದೆ. ಈ ಕಾಲದ ಸಾಹಿತ್ಯ ಸರಳ ಭಾಷೆಯಲ್ಲಿ ಜನಸಾಮಾನ್ಯರಿಗೆ ತಲುಪುವ ಗುಣ ಹೊಂದಿತ್ತು.

Article Details

Section

Research Articles

Author Biography

ಮುಸ್ತಾಕ ಅಹ್ಮದ

ಮುಖ್ಯಸ್ಥರು, ಇತಿಹಾಸ ವಿಭಾಗ ಸಿಕ್ಯಾಬ್, ಎ.ಆರ್.ಎಸ್. ಇನಾಮದಾರ ಮಹಿಳಾ ಮಹಾವಿದ್ಯಾಲಯ, ವಿಜಯಪುರ.

How to Cite

ಮುಸ್ತಾಕ ಅಹ್ಮದ. (2026). ಬಿಜಾಪುರ ಆದಿಲ್‌ಶಾಹಿಗಳ ಕಾಲದ ಕನ್ನಡ ಸಾಹಿತ್ಯ. ಅಕ್ಷರಸೂರ್ಯ (AKSHARASURYA), 11(06), 93 to 100. https://aksharasurya.com/index.php/latest/article/view/1957

References

ಬಿ. ಎಂ. ಪಾಟೀಲ, ಶಾಹಿಕಾಲದ ಪಂಚಸಾಧಕರು, ಸರಳ ಸಾಹಿತ್ಯ ಪ್ರಕಾಶನ-1997

ವಿಜಯಪುರ ಜಿಲ್ಲಾ ದರ್ಶನ- 64ನೇ ಅ.ಭಾ.ಕ.ಸಾ ಸಮ್ಮೇಳನ ಮುಧೋಳ-1995

ನುಡಿ ಗುಮ್ಮಟ, ಅ. ಭಾ. ಕ. ಸಾ ಸಮ್ಮೇಳನ ವಿಜಾಪುರ-2013

ಎಚ್. ಎಂ. ಕಡಕೋಳ, ಬಿಜಾಪುರ ಜಿಲ್ಲಾ ಸಾಂಸ್ಕೃತಿಕ ಪರಂಪರೆ 2010

ಕೆ. ಕೆ. ಕುಲಕರ್ಣಿ, ಆದಿಲ್‌ಶಾಹಿ ಆಸ್ಥಾನ ಸಾಹಿತ್ಯ ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ ಹಂಪಿ 1998