ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಉದಯಿಸಿದ ರಾಜಕೀಯ ಪಕ್ಷಗಳು
Main Article Content
Abstract
ಭಾರತದ ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿ ಉದಯಿಸಿದ ಪ್ರಮುಖ ರಾಜಕೀಯ ಪಕ್ಷಗಳ ಹಿನ್ನೆಲೆ, ಉದ್ದೇಶಗಳು ಮತ್ತು ಅವುಗಳ ಪಾತ್ರವನ್ನು ವಿವರಿಸುವುದರೊಂದಿಗೆ ಬ್ರಿಟಿಷರ ಆಡಳಿತದ ವಿರುದ್ಧ ಭಾರತೀಯರಲ್ಲಿ ರಾಜಕೀಯ ಜಾಗೃತಿಯನ್ನು ಮೂಡಿಸುತ್ತ, ಸಂಘಟಿತ ಹೋರಾಟದ ಮಹತ್ವವನ್ನು ತಿಳಿಸುವ ನಿಟ್ಟಿನಲ್ಲಿ ಅನೇಕ ರಾಜಕೀಯ ಪಕ್ಷಗಳು ಹುಟ್ಟಿಕೊಂಡವು. 1885ರಲ್ಲಿ ಉದಯವಾದ ಅಖಿಲ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ವಾತಂತ್ರ್ಯ ಹೋರಾಟದ ಪ್ರಮುಖ ವೇದಿಕೆಯಾಗಿತ್ತು. ಅದು ದೇಶದಾದ್ಯಂತ ಜನರಲ್ಲಿ ರಾಷ್ಟ್ರೀಯ ಏಕತೆಯನ್ನು ಬೆಳೆಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿತು. ನಂತರ ತೀವ್ರವಾದ ರಾಜಕೀಯ ಅಭಿವ್ಯಕ್ತಿಗೆ ಕಾರಣವಾದ 1906ರಲ್ಲಿ ಉದಯವಾದ ಮುಸ್ಲಿಂಲೀಗ್, ಕ್ರಾಂತಿಕಾರಿ ಸಂಘಟನೆಗಳು, ಕಮ್ಯುನಿಷ್ಟ ಪಕ್ಷ, ಹಿಂದೂ ಮಹಾಸಭೆ, ಸ್ವರಾಜ್ಯ ಪಕ್ಷ ಮುಂತಾದ ಪಕ್ಷಗಳು ವಿಭಿನ್ನ ತತ್ವಾಧಾರಗಳೊಂದಿಗೆ ಚಳುವಳಿಯಲ್ಲಿ ಪ್ರವೇಶಿಸಿದವು. ಈ ರಾಜಕೀಯ ಪಕ್ಷಗಳು ಸತ್ಯಾಗ್ರಹ, ಅಸಹಕಾರ ಚಳುವಳಿ, ನಾಗರೀಕ ಅವಿಧೇಯತೆ, ಕ್ರಾಂತಿಕಾರಿ ಚಟುವಟಿಕೆಗಳು ಮತ್ತು ಜನಜಾಗೃತಿ ಕಾರ್ಯಕ್ರಮಗಳ ಮೂಲಕ ಸ್ವಾತಂತ್ರ್ಯ ಹೋರಾಟವನ್ನು ಬಲಪಡಿಸಿದವು. ವಿಭಿನ್ನ ಧೋರಣೆಗಳಿದ್ದರೂ ಇವುಗಳ ಸಮೂಹ ಪ್ರಯತ್ನದ ಫಲವೇ 1947 ಆಗಸ್ಟ್ 15 ರಂದು ಭಾರತ ಸ್ವಾತಂತ್ರ್ಯ ದೊರಕಲು ಕಾರಣವಾಯಿತು ಎಂದು ತಿಳಿಸುವ ಪ್ರಯತ್ನ ಈ ಲೇಖನದ ಮೂಲಕ ಮಾಡಲಾಗಿದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಗಂಗಾಧರ ಪಿ.ಎಸ್., ಭಾರತದ ರಾಷ್ಟ್ರೀಯ ಚಳುವಳಿ ಮತ್ತು ಸಂವಿಧಾನಾತ್ಮಕ ಬೆಳವಣಿಗೆ.
ಉಮಾದೇವಿ., ಭಾರತದ ರಾಷ್ಟ್ರೀಯ ಚಳುವಳಿ ಮತ್ತು ಸಂವಿಧಾನಾತ್ಮಕ ಬೆಳವಣಿಗೆ.
ರಾಜಶೇಖರ. ಎಚ್.ಎಮ್., ಭಾರತದ ಸಂವಿಧಾನ ಮತ್ತು ಸರಕಾರ.
ಎಲ್.ಎಚ್. ಕಲ್ಮಠ, ಜೆ.ಬಿ. ಶೀಲವಂತರ., ಭಾರತದ ಸಂವಿಧಾನ ಮತ್ತು ರಾಜಕೀಯ.
ಲೋಹಿತಾಶ್ವ ಎಚ್.ಸಿ., ರಾಜ್ಯಶಾಸ್ತ್ರ.
ಸುರೇಶಕುಮಾರ ಎಮ್.ಎನ್., ಪೂರ್ಣಿಮಾ ಜಿ.ಆರ್., ರಾಜಕೀಯ ಚಿಂತಕರು ವಿದ್ಯಮಾನಗಳು ಮತ್ತು ವಿಧಾನಗಳು.