ದಕ್ಷಿಣಾಪಥೇಶ್ವರ ಇಮ್ಮಡಿ ಪುಲಿಕೇಶಿ ಮತ್ತು ಅರಬ್ಬರು

Main Article Content

ಶಿವಾನಂದ ರಂ. ನಾಗಣ್ಣವರ

Abstract

ಬಾದಾಮಿಯನ್ನು ರಾಜಧಾನಿಯಾಗಿಸಿಕೊಂಡು ಸುಮಾರು 2 ಶತಮಾನಗಳವರೆಗೆ ವೈಭವದಿಂದ ರಾಜ್ಯಭಾರ ಮಾಡಿದ ಕನ್ನಡದ ಪ್ರಸಿದ್ಧ ಸಾಮ್ರಾಜ್ಯ ಚಾಲುಕ್ಯರ ಸಾಮ್ರಾಜ್ಯ. ರಣರಾಗ-ಜಯಸಿಂಹರಿಂದ ಉದಯವಾದ ಈ ಸಾಮ್ರಾಜ್ಯವು ಇಮ್ಮಡಿಯ ಪುಲಿಕೇಶಿಯ ಕಾಲಾವಧಿಯಲ್ಲಿ ಭಾರತದಾಚೆ ತನ್ನ ಪ್ರಭುತ್ವವನ್ನು ಸಾಧಿಸಿತ್ತು. ಇಮ್ಮಡಿ ಪುಲಿಕೇಶಿ ಸಾಮ್ರಾಜ್ಯದ ಅತ್ಯಂತ ಬಲಿಷ್ಠ ಹಾಗೂ ಪ್ರಭಾವಶಾಲಿ ರಾಜನಾಗಿದ್ದನು ಈತನ ಆಡಳಿತಾತ್ಮಕ ಕಾರ್ಯಗಳಿಂದ ಭಾರತದ ರಾಜಕೀಯ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಮಹತ್ವದ ಸ್ಥಾನವನ್ನು ಪಡೆದಿತ್ತು. ಈ ಅವಧಿಯಲ್ಲಿ ಭಾರತದತ್ತ ದಾಳಿಗೆ ಹವಣಿಸುತ್ತಿದ್ದ ಅರಬ್ಬರನ್ನು ಹಿಮ್ಮೆಟ್ಟಿಸಿದ, ಅರಬ್ಬ ನಾಡಿನಲ್ಲಿಯೂ ಭಾರತೀಯ ವ್ಯಾಪಾರಿಗಳ ರಕ್ಷಣೆ ಮಾಡಿದ ನಾಯಕ. ಅಲ್ಲದೇ ಭಾರತ ಮತ್ತು ಅರಬ್ಬ ವಾಣಿಜ್ಯ ವ್ಯವಸ್ಥೆಗೆ ಭದ್ರವಾದ ಅಡಿಪಾಯವನ್ನು ಹಾಕಿ ಸ್ನೇಹತ್ವವನ್ನು ಸ್ಥಾಪಿಸಿದ ದೊರೆ. ಅರಬ್ಬ ನಾಯಕ ಇಮ್ಮಡಿ ಖುಸ್ರುವಿನೊಂದಿಗೆ ರಾಯಭಾರತ್ವದ ಸಂಬಂಧವನ್ನು ಬೆಳೆಸುವುದರ ಮೂಲಕ ಆರ್ಥಿಕ ಸಮೃದ್ಧತೆಯನ್ನು ಸಾಧಿಸಿದ ನಾಯಕನೆಂಬ ಕೀರ್ತಿಗೆ ಭಾಜನನಾಗಿದ್ದಾನೆ.

Article Details

Section

Research Articles

Author Biography

ಶಿವಾನಂದ ರಂ. ನಾಗಣ್ಣವರ

ಸಹ ಪ್ರಾಧ್ಯಾಪಕರು, ಇತಿಹಾಸ ವಿಭಾಗ, ವಿ.ಎಂ.ಕೆ.ಎಸ್.ಆರ್.ವಸ್ತ್ರದ ಕಲಾ, ವಿಜ್ಞಾನ ಹಾಗೂ ವಿ.ಎಸ್.ಬೆಳ್ಳಿಹಾಳ ವಾಣಿಜ್ಯ ಮಹಾವಿದ್ಯಾಲಯ, ಹುನಗುಂದ.

How to Cite

ಶಿವಾನಂದ ರಂ. ನಾಗಣ್ಣವರ. (2026). ದಕ್ಷಿಣಾಪಥೇಶ್ವರ ಇಮ್ಮಡಿ ಪುಲಿಕೇಶಿ ಮತ್ತು ಅರಬ್ಬರು. ಅಕ್ಷರಸೂರ್ಯ (AKSHARASURYA), 11(06), 26 to 34. https://aksharasurya.com/index.php/latest/article/view/1949

References

ಬುಳ್ಳಾ ನಿಂಗೇಶ : ಇಮ್ಮಡಿ ಪುಲಿಕೇಶಿ ಐತಿಹಾಸಿಕ ನಾಟಕ, ಸ್ವಾಗತ ಸಮಿತಿ, ಅಖಿಲ ಭಾರತ 68ನೇ ಸಾಹಿತ್ಯ ಸಮ್ಮೇಳನ, ಬಾಗಲಕೋಟ, 2000

ಶ್ರೀನಿವಾಸರಾವ್ ಎಸ್.ವಿ. : ಇಮ್ಮಡಿ ಪುಲಿಕೇಶಿ, ರಾಷ್ಟ್ರೋತ್ಥಾನ ಸಾಹಿತ್ಯ ಕೆಂಪೆಗೌಡ ನಗರ, ಬೆಂಗಳೂರು, 2020

ಷೇಕ್‌ಅಲಿ.ಬಿ.&ಸುಂದರ ಅ. (ಸಂ): ಕರ್ನಾಟಕ ಚರಿತ್ರೆ ಸಂ-1, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, 2018.

ಷ.ಶೆಟ್ಟರ : ಹಳಗನ್ನಡ (ಲಿಪಿ, ಲಿಪಿಕಾರ, ಲಿಪಿ ವ್ಯವಸಾಯ), ಅಭಿನವ ಪ್ರಕಾಶನ, ಬೆಂಗಳೂರು

ಪ್ರಕಾಶ ಹೇಮಾವತಿ : ಇಮ್ಮಡಿ ಪುಲಿಕೇಶಿ (ಐತಿಹಾಸಿಕ ಕಾದಂಬರಿ), ದಿವ್ಯಾ ಪ್ರಕಾಶನ ನಾಗಪ್ಪಬೀದಿ, ಶೇಷಾದ್ರಿಪುರ, ಬೆಂಗಳೂರು, 2021 .

ಪಂಚಮುಖಿ. ರಾ.ಸ್ವಾ : ಕರ್ನಾಟಕ ಇತಿಹಾಸ ಸಂಪುಟ.1, ಕರ್ನಾಟಕ ಇತಿಹಾಸ ಸಂಶೋಧನಾ ಮಂಡಲ, ಧಾರವಾಡ. 2007-08

ಕೌಂಡಿನ್ಯ : ಚಾಲುಕ್ಯ ಪರಮೇಶ್ವರ (ಅಖಂಡ ಕರ್ನಾಟಕ ಸಾಧಕನ ಸಾಹಸ ಚರಿತ್ರೆ ಕಾದಂಬರಿ), ಚರಿತ್ರೆ ಪಬ್ಲಿಕೇಷನ್ಸ್, ಸೋಮೇಶ್ವರ, ಚಿಕ್ಕಬಳ್ಳಾಪುರ, 2023.

ದೇವರಕೊಂಡಾರೆಡ್ಡಿ (ಸಂ) : ಕನ್ನಡ ವಿಶ್ವವಿದ್ಯಾಲಯ ಶಾಸನ ಸಂ.9, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, 2006

ಎಫಿಗ್ರಾಫಿಕಾ ಇಂಡಿಕಾ ಸಂಪುಟಗಳು:ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ, ಮೈಸೂರು.

ಮುರುಗೆಪ್ಪ ಎ. (ಸಂ) : ಬಾದಾಮಿ ಚಾಲುಕ್ಯರು, ಲೇಖನ ಸಂಪುಟ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, 2009