ಕರ್ನಾಟಕ ಇತಿಹಾಸ ಮತ್ತು ಕನ್ನಡ ಸಾಹಿತ್ಯ: ಸಾಂಸ್ಕೃತಿಕ ದೃಷ್ಟಿಕೋನ

Main Article Content

ಕೆ.ಪಿ. ಈರಣ್ಣ

Abstract

ಇತಿಹಾಸ ಮತ್ತು ಕನ್ನಡ ಸಾಹಿತ್ಯದ ನಡುವಿನ ಆಳವಾದ ಸಂಬಂಧವನ್ನು ಸಾಂಸ್ಕೃತಿಕ ದೃಷ್ಟಿಯಿಂದ ವಿಶ್ಲೇಷಿಸುತ್ತದೆ. ಇತಿಹಾಸವು ರಾಜಕೀಯ, ಸಾಮಾಜಿಕ, ಧಾರ್ಮಿಕ ಮತ್ತು ಆರ್ಥಿಕ ಬೆಳವಣಿಗೆಗಳನ್ನು ದಾಖಲಿಸುವುದಾದರೆ, ಸಾಹಿತ್ಯವು ಅವುಗಳ ಮಾನವೀಯ ಅನುಭವಗಳು, ಭಾವನೆಗಳು ಮತ್ತು ಮೌಲ್ಯಗಳನ್ನು ಅಭಿವ್ಯಕ್ತಗೊಳಿಸುತ್ತದೆ. ಕನ್ನಡ ಸಾಹಿತ್ಯವು ವಿಭಿನ್ನ ಯುಗಗಳಲ್ಲಿ (ಪ್ರಾಚೀನ, ಮಧ್ಯಕಾಲೀನ ಹಾಗೂ ಆಧುನಿಕ) ಆಗಿನ ಸಂಸ್ಕೃತಿ, ಜನಜೀವನ, ನಂಬಿಕೆಗಳು ಮತ್ತು ಪರಂಪರೆಗಳನ್ನು ಪ್ರತಿಬಿಂಬಿಸಿದೆ. ಪಂಪ, ರನ್ನ, ಬಸವಣ್ಣ, ಹರಿಹರರಿಂದ ಮೊದಲ್ಗೊಂಡು ನವೋದಯ, ನವ್ಯ, ದಲಿತ ಸಾಹಿತ್ಯದವರೆಗೂ ಕನ್ನಡ ಸಾಹಿತ್ಯವು ಇತಿಹಾಸದ ಸಾಮಾಜಿಕ ಚಲನೆಗಳಿಗೆ ಸ್ಪಂದಿಸಿರುವುದು ಕಂಡುಬರುತ್ತದೆ. ವಚನ ಸಾಹಿತ್ಯ ಮತ್ತು ಜನಪದ ಸಾಹಿತ್ಯ ಸಮಾನತೆ, ಸಹಕಾರ, ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿದರೆ, ಆಧುನಿಕ ಸಾಹಿತ್ಯವು ವಸಾಹತುಶಾಹಿ ಅನುಭವ, ಸ್ವಾತಂತ್ರ್ಯ ಹೋರಾಟ, ಸಾಮಾಜಿಕ ಅಸಮಾನತೆಗಳ ಚಿತ್ರಣ ನೀಡುತ್ತದೆ.

Article Details

Section

Research Articles

Author Biography

ಕೆ.ಪಿ. ಈರಣ್ಣ

ವಿಶ್ರಾಂತ ಪ್ರಾಧ್ಯಾಪಕರು, ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ವಿಭಾಗ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

How to Cite

ಕೆ.ಪಿ. ಈರಣ್ಣ. (2026). ಕರ್ನಾಟಕ ಇತಿಹಾಸ ಮತ್ತು ಕನ್ನಡ ಸಾಹಿತ್ಯ: ಸಾಂಸ್ಕೃತಿಕ ದೃಷ್ಟಿಕೋನ. ಅಕ್ಷರಸೂರ್ಯ (AKSHARASURYA), 11(06), 01 to 14. https://aksharasurya.com/index.php/latest/article/view/1947

References

ಷ. ಶೆಟ್ಟರ್; ಹಳಗನ್ನಡ ಲಿಪಿ, ಲಿಪಿಕಾರ, ಲಿಪಿ ವ್ಯವಸಾಯ, ಅಭಿನವ, ವಿಜಯನಗರ, ಬೆಂಗಳೂರು 2020

ಈರಣ್ಣ ಕೆ.ಪಿ.; ಬಾದಾಮಿ ಚಾಲುಕ್ಯರ ಸಾಂಸ್ಕೃತಿಕ ಪರಂಪರೆ, ಮನು ಸಾಹಿತ್ಯ ಪ್ರಕಾಶನ, ಧಾರವಾಡ 2000

ಹಾಗರಗಿ ಮಹಾದೇವಿ; ಕಲ್ಯಾಣ ಚಾಲುಕ್ಯರ ಕಾಲದ ಮಹಿಳೆಯರ ಸ್ಥಾನಮಾನ, ಓಂಕಾರ ಪ್ರಕಾಶನ, ಧಾರವಾಡ, 2011

ಕುಮಾರಸ್ವಾಮಿ ಕೆ ಎಸ್; ಬೃಹತ್ ಕರ್ನಾಟಕದ ಶಿಲ್ಪಾಚಾರ್ಯರ ಚರಿತೆ, ಕಣ್ವ ಪ್ರಕಾಶನ, ಬೆಂಗಳೂರು 2013

ಸರಸ್ವತಿ ಎನ್; ವಿಜಯನಗರ ಕಾಲದ ಮಹಿಳೆಯರ ಕೊಡುಗೆಗಳು, ಸಿಂಚು ಮಲ್ಟಿ ಗ್ರಾಫ್, ಮೈಸೂರು, 2008

ಚಿದಾನಂದಮೂರ್ತಿ ಎಂ,; ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ, ಸ್ವಪ್ನ ಬುಕ್ ಹೌಸ್, ಬೆಂಗಳೂರು, 2002

ಸುರೇಂದ್ರರಾವ್ ಬಿ. (ಸಂ); ಕರ್ನಾಟಕ ಚರಿತ್ರೆ, ಸಂಪುಟ-2, ಪ್ರಸಾರಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ 1997

ಕೃಷ್ಣ ಕೋಲಾರ ಕುಲಕರ್ಣಿ; ವಿಜಾಪುರ ಆದಿಲ್ ಶಾಹಿ: ಸಖ್ಯಾಬ, ಆದಿಲ್ ಶಾಹಿ ಅಧ್ಯಯನ ಸಂಸ್ಥೆ, ವಿಜಯಪುರ, 2002

ಕಲ್ಯಾಣಿ ಸಂಗಪ್ಪ; ಬಾಗಲಕೋಟೆ ಜಿಲ್ಲೆಯ ದೇಸಗತಿಗಳು, ಅಪ್ರಕಟಿತ ಪಿ.ಎಚ್.ಡಿ. ಮಹಾಪ್ರಬಂಧ, ಕನ್ನಡ ವಿಶ್ವವಿದ್ಯಾಲಯ, ಹಂಪಿ, 2006,

ಷಡಕ್ಷರಯ್ಯ ಆರ್.ಎಂ. & ಭರಮಗೌಡರ ವನಜಾಕ್ಷಿ; (ಸಂ) ಕಲಕೇರಿ ಸಂಸ್ಥಾನದ ದಾಖಲೆಗಳ ಸಾಂಸ್ಕೃತಿಕ ಅಧ್ಯಯನ,

ಶೇಕದಾರ ವಿಜಯಕುಮಾರ; ವಿಜಾಪುರ ಜಿಲ್ಲೆಯ ದೇಸಗತಿಗಳು, ಅಪ್ರಕಟಿತ ಪಿ.ಎಚ್.ಡಿ. ಮಹಾಪ್ರಬಂಧ, ಕ.ವಿ.ವಿ. ಧಾರವಾಡ

ಪಾಲ್ಕೀವಾಲ ಎನ್.ಎ. (ಅನು. ಬಿ.ಎಸ್. ರುಕ್ಕಮ್ಮ) ಭಾರತದ ಅಮೂಲ್ಯ ಪರಂಪರೆ, ಭಾರತೀಯ ವಿದ್ಯಾ ಭವನ, ಮೈಸೂರು, 2010