ವಸಾಹತುಶಾಹಿ: ಕನ್ನಡ ನಾಟಕ ಸಾಹಿತ್ಯ ವೈವಿಧ್ಯತೆ

Main Article Content

ರೇಣುಕಪ್ರಸಾದ್ ಬಿ.ಆರ್.

Abstract

ಪ್ರಸ್ತುತ ಲೇಖನವು ವಸಾಹತುಶಾಹಿ (Colonialism) ಪ್ರಭಾವದಿಂದ ಆಧುನಿಕ ಕನ್ನಡ ನಾಟಕ ಸಾಹಿತ್ಯದಲ್ಲಿ ಆದ ವೈವಿಧ್ಯಮಯ ಬದಲಾವಣೆಗಳನ್ನು ವಿಶ್ಲೇಷಿಸುತ್ತದೆ. ನಾಟಕ ಸಾಹಿತ್ಯದ ಮೇಲೆ ಜನಪದ ರಂಗಭೂಮಿ, ಪಾಶ್ಚಾತ್ಯ ಶಿಕ್ಷಣ ಮತ್ತು ನವೋದಯದ ಅನುವಾದ-ರೂಪಾಂತರಗಳು ಪ್ರಭಾವ ಬೀರಿದವು. ಟಿ. ಪಿ. ಕೈಲಾಸಂ ಅವರ 'ಟೊಳ್ಳು ಗಟ್ಟಿ' ಯಿಂದ ಸಾಮಾಜಿಕ ನಾಟಕಗಳಿಗೆ ಮಹತ್ವ ದೊರೆಯಿತು, ಮತ್ತು ಹವ್ಯಾಸಿ ರಂಗಭೂಮಿ ಬೆಳೆಯಿತು. 


ಬಿ. ಎಂ. ಶ್ರೀ ಅವರು ಗ್ರೀಕ್ ಮಾದರಿಯ ದುರಂತ ನಾಟಕಗಳನ್ನು ಪರಿಚಯಿಸಿ, ರಾವಣ, ದುರ್ಯೋಧನರಂತಹ ಪೌರಾಣಿಕ ಪಾತ್ರಗಳನ್ನು ದುರಂತ ನಾಯಕರನ್ನಾಗಿಸಿದರು. ಕುವೆಂಪು, ಮಾಸ್ತಿ, ಅ. ನ. ಕೃ., ಮತ್ತು ಶ್ರೀರಂಗರ ನಾಟಕಗಳು ಪುರಾಣ ಮತ್ತು ಶರಣರ ಕಥೆಗಳ ಮೂಲಕ ಹೊಸ ಸಾಮಾಜಿಕ ಸಂವೇದನೆಗಳನ್ನು, ವಿಶೇಷವಾಗಿ ಗಂಡು-ಹೆಣ್ಣಿನ ಸಂಬಂಧ ಮತ್ತು ರಾಜಕೀಯವನ್ನು ವಿಮರ್ಶಿಸಿದವು. ಗಿರೀಶ್ ಕಾರ್ನಾಡರ 'ಯಯಾತಿ' ನಾಟಕವು ಅಸ್ತಿತ್ವವಾದದ (Existentialism) ವಿಚಾರಗಳನ್ನು ಅಳವಡಿಸಿ, ಮಾನವನ ಅಪೂರ್ಣತೆ ಮತ್ತು ಭೂತಕಾಲದ ಪ್ರಭಾವವನ್ನು ನಿರೂಪಿಸಿತು. ಹೀಗೆ ಹೊಸಗನ್ನಡ ನಾಟಕ ಸಾಹಿತ್ಯವು ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಮತ್ತು ಅಸಂಗತ ಪ್ರಕಾರಗಳಲ್ಲಿ ವೈವಿಧ್ಯಮಯವಾಗಿ ಬೆಳೆಯಿತು. 

Article Details

Section

Research Articles

Author Biography

ರೇಣುಕಪ್ರಸಾದ್ ಬಿ.ಆರ್.

ಸಹ ಪ್ರಾಧ್ಯಾಪಕರು, ಕನ್ನಡ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ತುಮಕೂರು. 

How to Cite

ರೇಣುಕಪ್ರಸಾದ್ ಬಿ.ಆರ್. (2025). ವಸಾಹತುಶಾಹಿ: ಕನ್ನಡ ನಾಟಕ ಸಾಹಿತ್ಯ ವೈವಿಧ್ಯತೆ. ಅಕ್ಷರಸೂರ್ಯ (AKSHARASURYA), 11(04), 96 to 100. https://aksharasurya.com/index.php/latest/article/view/1920

References

ಹೊಸಗನ್ನಡ ಸಾಹಿತ್ಯ ಚರಿತ್ರೆ- ಎಲ್. ಎಸ್. ಶೇಷಗಿರಿರಾವ್.

ಆಧುನಿಕ ಕನ್ನಡ ನಾಟಕ- ಕೆ. ಮರುಳಸಿದ್ದಪ್ಪ.

ಹೊಸ ಸಂವೇದನೆಯ ನಾಟಕಗಳು –(ಸಂ. ) ಹ. ಮಾ. ನಾಯಕ & ಸಿಂಧುವಳ್ಳಿ ಅನಂತಮೂರ್ತಿ.