ಹನ್ನೆರಡನೇಶತಮಾನದ ವಚನಕಾರರ ವಚನಗಳಲ್ಲಿ ಮಾತಿನ ಮಹತ್ವ
Main Article Content
Abstract
ಹನ್ನೆರಡನೇ ಶತಮಾನದ ವಚನ ಸಾಹಿತ್ಯವು ಕನ್ನಡದ ಅಭಿವ್ಯಕ್ತಿ ಪರಂಪರೆಯಲ್ಲಿ ಕ್ರಾಂತಿಕಾರಕ ಬದಲಾವಣೆಯನ್ನು ತಂದಿತು. ಶರಣರು ಜನಸಾಮಾನ್ಯರ ಆಡುಮಾತನ್ನೇ ಮಾಧ್ಯಮವನ್ನಾಗಿಸಿಕೊಂಡು ಗಹನವಾದ ಜೀವನ ಮೌಲ್ಯಗಳನ್ನು ಮತ್ತು ತಾತ್ವಿಕ ವಿಚಾರಗಳನ್ನು ಸರಳವಾಗಿ ತಿಳಿಸಿದರು. ಮಾತೆಂಬುದು ಕೇವಲ ಸಂವಹನ ಸಾಧನವಲ್ಲ, ಅದು ವ್ಯಕ್ತಿತ್ವವನ್ನು ರೂಪಿಸುವ, ಸಾಮರಸ್ಯವನ್ನು ಬೆಳೆಸುವ ಹಾಗೂ ದೈವತ್ವಕ್ಕೆ ಏರಿಸುವ ಶಕ್ತಿಯಾಗಿದೆ. ನುಡಿದರೆ ಮುತ್ತಿನ ಹಾರದಂತಿರಬೇಕು ಎಂಬಂತಹ ವಚನಗಳು ಶುದ್ಧ ನುಡಿಯ ಮಹತ್ವವನ್ನು ಸಾರುತ್ತವೆ. ಆಡಂಬರದ ಭಕ್ತಿಗಿಂತ, ಕಾಯಕ, ದಾಸೋಹ ಮತ್ತು ಶುದ್ಧ ಅಂತರಂಗದ ನುಡಿಗಳಿಗೆ ಶರಣರು ಆದ್ಯತೆ ನೀಡಿದರು. ಮನುಷ್ಯನ ಅಹಂಕಾರವನ್ನು ಅಳಿಸಿ, ಸಮಾನತೆ ಮತ್ತು ವಿಶ್ವಶಾಂತಿಯನ್ನು ಸ್ಥಾಪಿಸುವಲ್ಲಿ ವಚನಕಾರರ ವೈಚಾರಿಕ ಪ್ರಜ್ಞೆ ಮತ್ತು ಅವರು ಬಳಸಿದ ಜನಪರ ಭಾಷೆ ಇಂದಿಗೂ ಪ್ರಸ್ತುತವಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ಬಸವಣ್ಣನವರ ವಚನಗಳು, ಡಾ. ಎಲ್. ಬಸವರಾಜು (ಸಂ), ಗೀತಾ.
ವಚನ ಕಮ್ಮಟ, ಡಾ. ಕೆ. ಮರುಳಸಿದ್ದಪ್ಪ & ಕೀರಂ ನಾಗರಾಜು (ಸಂ), ಸ್ವಪ್ನ ಬುಕ್ ಹೌಸ್, ಬೆಂಗಳೂರು.
ಆಯ್ದ ವಚನಗಳು, ರಾಧಾಕೃಷ್ಣ ಕೆ. ವಿ. (ಸಂ), ಅಂಬಾ ಪ್ರಕಾಶನ, ಬೆಂಗಳೂರು.