ಶಿವರಾಮ ಕಾರಂತರ ಪರಿಸರ ಪಜ್ಞೆ

Main Article Content

ಶಿವರಾಜು ಎನ್‌.

Abstract

ಪರಿಸರವು ಮನುಷ್ಯನ ಬದುಕಿನ ಅವಿಭಾಜ್ಯ ಅಂಗವಾಗಿದ್ದು, ಮಾನವನ ದುರಾಸೆ ಮತ್ತು ಆಧುನೀಕರಣದ ಭರದಲ್ಲಿ ಪ್ರಕೃತಿಯ ಮೇಲೆ ತೀವ್ರವಾದ ಶೋಷಣೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಕೋಟ ಶಿವರಾಮ ಕಾರಂತರ ಕಾದಂಬರಿಗಳಲ್ಲಿ ವ್ಯಕ್ತವಾಗುವ ಪರಿಸರ ಪ್ರಜ್ಞೆ ಅತ್ಯಂತ ಪ್ರಸ್ತುತವಾಗಿದೆ. ಕರಾವಳಿ ಮತ್ತು ಪಶ್ಚಿಮ ಘಟ್ಟಗಳ ಸುಂದರ ಪರಿಸರದಲ್ಲಿ ಬೆಳೆದ ಕಾರಂತರು, ತಮ್ಮ 'ಬೆಟ್ಟದ ಜೀವ', 'ಮರಳಿ ಮಣ್ಣಿಗೆ', 'ಕುಡಿಯರ ಕೂಸು' ಹಾಗೂ 'ಕನ್ನಡಿಯಲ್ಲಿ ಕಂಡಾತ' ಮುಂತಾದ ಕೃತಿಗಳಲ್ಲಿ ಪ್ರಕೃತಿ ಮತ್ತು ಮನುಷ್ಯನ ನಡುವಿನ ಸಂಕೀರ್ಣ ಸಂಬಂಧಗಳನ್ನು ಅದ್ಭುತವಾಗಿ ಚಿತ್ರಿಸಿದ್ದಾರೆ. ಅಭಿವೃದ್ಧಿಯ ಹೆಸರಿನಲ್ಲಿ ಅರಣ್ಯ ನಾಶ, ಜಲವಿದ್ಯುತ್ ಯೋಜನೆಗಳಿಂದ ಆಗುವ ಅನಾಹುತಗಳು ಮತ್ತು ಪ್ರಕೃತಿ ವಿಕೋಪಗಳ ಮುಂದೆ ಮನುಷ್ಯನ ಅಸಹಾಯಕತೆಯನ್ನು ಅವರು ಎಚ್ಚರಿಸಿದ್ದಾರೆ. ಪ್ರಕೃತಿಯನ್ನು ಪೂಜಿಸುವುದರ ಜೊತೆಗೆ, ವಾಸ್ತವಿಕ ನೆಲೆಯಲ್ಲಿ ಅದನ್ನು ಸಂರಕ್ಷಿಸುವ ಅಗತ್ಯವನ್ನು ಅವರ ಸಾಹಿತ್ಯ ಸಾರಿ ಹೇಳುತ್ತದೆ.

Article Details

Section

Research Articles

Author Biography

ಶಿವರಾಜು ಎನ್‌.

ಸಂಶೋಧನಾರ್ಥಿ, ಕುವೆಂಪು ಕನ್ನಡ ಅಧ್ಯಯನ ಕೇಂದ್ರ, ಕುಪ್ಪಳಿ, ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಸ್ತರಣಾ ಕೇಂದ್ರ, ತೀರ್ಥಹಳ್ಳಿ ತಾ., ಶಿವಮೊಗ್ಗ ಜಿಲ್ಲೆ.

References

ನಾಗೇಶ ಹೆಗಡೆ, ಇರುವುದೊಂದೇ ಭೂಮಿ, ಭೂಮಿ ಬುಕ್ಸ್, ಬೆಂಗಳೂರು, 1998.

ಮಾಲಿನಿ ಮಲ್ಯ, ಶಿವರಾಮ ಕಾರಂತ, ನವ ಕರ್ನಾಟಕ ಪ್ರಕಾಶನ, 2017.

ಸುಮಿತ್ರ ಎಲ್. ಸಿ., ಕಾಡು ಕಡಲು, ಶಿವರಾಮ ಕಾರಂತ ಅಧ್ಯಯನ ಕೇಂದ್ರ, ಪುತ್ತೂರು, 2007.

ಸುರೇಶ ಬಿ., ಪುಟ್ಟಕ್ಕನ ಹೈವೇ, ಮಣಿಪಾಲ ಪ್ರೆಸ್, ಮಣಿಪಾಲ, 2022.

ಶಿವರಾಮ ಕಾರಂತ, ಬೆಟ್ಟದ ಜೀವ, ಸಪ್ನ ಬುಕ್ ಹೌಸ್, ಬೆಂಗಳೂರು, 2021.