ಕಲ್ಲಂಬಾಳಿನ 'ಕಲಿಯುಗ ಕಾಮೇಶ್ವರ' ದೇವಾಲಯದ ಶಾಸನಗಳು

Main Article Content

ಮಲ್ಲೇಶ ಸಿ.

Abstract

ಕರ್ನಾಟಕದ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಅರಿಯಲು ಶಾಸನಗಳು ಅತ್ಯಮೂಲ್ಯ ಆಧಾರಗಳಾಗಿವೆ. ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಕಲ್ಲಂಬಾಳು ಗ್ರಾಮದ ಕಾಮೇಶ್ವರ ದೇವಾಲಯದಲ್ಲಿ ದೊರೆತಿರುವ ಶಾಸನಗಳು ಈ ಊರಿನ ಐತಿಹಾಸಿಕ ಮತ್ತು ಧಾರ್ಮಿಕ ಮಹತ್ವವನ್ನು ಅನಾವರಣಗೊಳಿಸುತ್ತವೆ. 12ನೇ ಶತಮಾನದ ಹೊಯ್ಸಳ ದೊರೆ 2ನೇ ವೀರಬಲ್ಲಾಳನ ಕಾಲದ ಶಾಸನಗಳು, ದಾನ ದತ್ತಿಗಳ ವಿವರ, ಶೈವ ಧರ್ಮದ ಕಾಳಮುಖ ಪಂಥದ ಪ್ರಭಾವ, ಮತ್ತು ದೇವಾಲಯದಲ್ಲಿ ನಡೆಯುತ್ತಿದ್ದ ರಂಗಭೋಗ-ಅಂಗಭೋಗಗಳ ಬಗ್ಗೆ ಬೆಳಕು ಚೆಲ್ಲುತ್ತವೆ. ಅಲ್ಲದೆ, ಸ್ಥಳೀಯ ವ್ಯಾಪಾರ, ಆಡಳಿತ ವ್ಯವಸ್ಥೆ, ದಂಡನಾಯಕರುಗಳ ಪಾತ್ರ ಹಾಗೂ ಅಂದಿನ ಭಾಷಿಕ ಸ್ವರೂಪದ ವಿಶಿಷ್ಟತೆಗಳನ್ನು ಈ ಶಾಸನಗಳು ದಾಖಲಿಸಿವೆ. ಒಟ್ಟಾರೆಯಾಗಿ, ಪ್ರಾಚೀನ ಕಲ್ಲಂಬಾಳು ಗ್ರಾಮದ ಸಮಗ್ರ ಇತಿಹಾಸವನ್ನು ಮರುಸೃಷ್ಟಿಸುವಲ್ಲಿ ಈ ಶಾಸನಗಳು ಮೂಕ ಸಾಕ್ಷಿಯಾಗಿ ಪ್ರಮುಖ ಪಾತ್ರ ವಹಿಸುತ್ತವೆ.

Article Details

Section

Research Articles

Author Biography

ಮಲ್ಲೇಶ ಸಿ.

ಸಂಶೋಧನಾ ವಿದ್ಯಾರ್ಥಿ, ಕನ್ನಡ ವಿಭಾಗ, ಮಹಾರಾಜ ಕಾಲೇಜು, ಮೈಸೂರು.

How to Cite

ಮಲ್ಲೇಶ ಸಿ. (2023). ಕಲ್ಲಂಬಾಳಿನ ’ಕಲಿಯುಗ ಕಾಮೇಶ್ವರ’ ದೇವಾಲಯದ ಶಾಸನಗಳು. ಅಕ್ಷರಸೂರ್ಯ (AKSHARASURYA), 2(04), 49 to 53. https://aksharasurya.com/index.php/latest/article/view/110

References

ಎಫಿಗ್ರಾಫಿಯ ಕರ್ನಾಟಕ ಸಂಪುಟ-3, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸ ಗಂಗೋತ್ರಿ, ಮೈಸೂರು.

ಶಾಸನಗಳ ಸಾಂಸ್ಕೃತಿಕ ಅಧ್ಯಯನ, ಡಾ. ಎಂ ಚಿದಾನಂದ ಮೂರ್ತಿ, ಸಪ್ನಬುಕ್‌ ಹೌಸ್, ಬೆಂಗಳೂರು.

ಶಾಸನ ಮತ್ತು ಗದ್ಯ, ಹು.ಕಾ. ಜಯದೇವ್, ಸಪ್ನ ಬುಕ್‌ಹೌಸ್, ಬೆಂಗಳೂರು.

ಹೆಗ್ಗಡದೇವನಕೋಟೆ ತಾಲೂಕು ಗ್ಯಾಸಿಟಿಯರ್, ನೀ. ಗಿರೀಗೌಡ, ಕರ್ನಾಟಕ ಗ್ಯಾಸೆಟಿಯರ್ ಇಲಾಖೆ, ಬೆಂಗಳೂರು.

Most read articles by the same author(s)