ಬಸವಣ್ಣನ ವಚನಗಳಲ್ಲಿ ಸಮ ಸಮಾಜದ ಪ್ರಸ್ತುತತೆ

Authors

  • ಮಾಧವ ಎಂ. ಕೆ. ಮುಖ್ಯಸ್ಥರು, ಕನ್ನಡ ವಿಭಾಗ, ವಿಶ್ವ ವಿದ್ಯಾನಿಲಯ ಕಾಲೇಜು, ಮಂಗಳೂರು.

Keywords:

೧೨ನೇ ಶತಮಾನ, ಬಸವಣ್ಣ, ಕಾಯಕವೇ ಕೈಲಾಸ, ವಚನ ಯುಗ, ಸಮ ಸಮಾಜ

Abstract

ಕನ್ನಡ ಸಾಹಿತ್ಯದಲ್ಲಿ ೧೨ನೇ ಶತಮಾನವನ್ನು ವಚನಗಳ ಯುಗವೆಂದು ಕರೆಯಲಾಗುತ್ತದೆ. ಬಸವಣ್ಣ ವಚನ ಸಾಹಿತ್ಯಕ್ಕೆ ಹೊಸ ಭಾಷ್ಯ ಬರೆದವನು. ತನ್ನ ವಚನಗಳ ಮೂಲಕ ‘ಕಾಯಕವೇ ಕೈಲಾಸ’ ವೆಂದು ಸಾರಿ, ಜನರಲ್ಲಿ ದುಡಿದು ತಿಂದು ಬದುಕುವ ಮಹತ್ವವನ್ನು ತಿಳಿಸಿದರು. ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸ್ತ್ರೀಯರಿಗೆ ಭಾಗವಹಿಸುವ ಸಮಾನ ಅವಕಾಶ ನೀಡುವ ಮೂಲಕ ಮಹಿಳಾ ಸ್ವಾತಂತ್ರ್ಯಕ್ಕೊಂದು ಅರ್ಥವನ್ನು ಕಲ್ಪಿಸಿದರು. ಕಲುಷಿತಗೊಂಡಿದ್ದ ಸಾಮಾಜಿಕ ಮತ್ತು ಧಾರ್ಮಿಕ ವ್ಯವಸ್ಥೆಯನ್ನು ದಿಕ್ಕರಿಸಿ, ಘನ ಬದಲಾವಣೆಯನ್ನು ಆರಿಸಿ ಹೊರಟ ದಾರ್ಶನಿಕ ಬಸವಣ್ಣ. ಸಾಮಾಜಿಕ ಬದಲಾವಣೆಗೆ ಹೊಸ ಭಾಷ್ಯ ಬರೆಯುವ ಮೂಲಕ ಉತ್ತಮ ಸಮಾಜ ವ್ಯವಸ್ಥೆಗೆ ನಿಜವಾದ ಅರ್ಥ ಕಲ್ಪಿಸಿ ಕೊಟ್ಟವರು. ಸಮಾಜದ ಕೀಳುಮಟ್ಟದ ಶೋಷಣೆಯಿಂದಾಗಿಯೇ ಸಮಾಜದಲ್ಲಿ ದುಡಿಯುವ ಮತ್ತು ಕೂತು ಉಣ್ಣುವ ವರ್ಗಗಳು ನಿರ್ಮಾಣವಾಗುವುದಕ್ಕೆ ಕಾರಣವಾಗಿರಬೇಕು, ಸಮಾಜದಲ್ಲಿ ಮೇಲ್ವರ್ಗವೆಂದು ಕರೆಸಿಕೊಂಡ ಜನರು ಸಮಾಜದ ಇತರರನ್ನು ಕೀಳಾಗಿ ಕಾಣುತ್ತಿದ್ದ ಸಂದರ್ಭಗಳು ಬಸವಣ್ಣನ ಮನಸ್ಸನ್ನು ಬಹಳವಾಗಿ ಕಾಡಿದ್ದರ ಪರಿಣಾಮದಿಂದಲೇ ಅವರ ಮನಸ್ಸಿನ ವಿಚಾರಗಳೆಲ್ಲ ವಚನಗಳಾಗಿ ಮಾರ್ಪಟ್ಟವಾಗಿರಬೇಕು. ಅಂದಿನಿಂದಲೇ ಬಸವಣ್ಣನವರು ಸಾಮಾಜಿಕ ಬದಲಾವಣೆಗೆ ಕ್ರಾಂತಿಕಾರಿ ಹೆಜ್ಜೆ ಇಟ್ಟರೆಂದು ಕಾಣಿಸುತ್ತದೆ. ಬಸವಣ್ಣ ವಚನಗಳ ಮೂಲಕ ಸಾಮಾಜಿಕ ವ್ಯವಸ್ಥೆಯ ಅಂಕುಡೊಂಕುಗಳನ್ನು ತಿದ್ದಿ, ಸಮ ಸಮಾಜ ವ್ಯವಸ್ಥೆಯನ್ನು ಸರಿಪಡಿಸುವ ಕಾಯಕಕ್ಕೆ ಮುಂದಾದರು. ಒಂದಷ್ಟು ಸಮಾಜ ವ್ಯವಸ್ಥೆಯನ್ನು ಬದಲಿಸಲು ಪಟ್ಟ ಪ್ರಯತ್ನ ಇಂದಿಗೂ ಮುಂದಿಗೂ ಮಾದರಿಯಾಗುವಂತಿದೆ. ಸಮಾಜದ ಬಗೆಗೆ ಬಸವಣ್ಣನಿಗಿದ್ದ ಕಾಳಜಿಯಿಂದಾಗಿಯೇ ಮತ್ತಷ್ಟು ಅವರ ಹಾದಿಯಲ್ಲಿ ಮುಂದುವರಿದರು.

References

ಸತೀಶ್ ಕೆ. ಪಾಟೀಲ. (2023). ಸಾಮಾಜಿಕ ಸಮಾನತೆಯ ಹರಿಕಾರ ಶ್ರೀ ಬಸವಣ್ಣನವರು. ಲೋಕ ದರ್ಶನ.

ಶಿವರಾಜಪ್ಪ ಎಸ್. (2010). ಸಮಗ್ರ ಸಾಹಿತ್ಯ-2: ಶರಣ ದರ್ಶನ. ವಿಜಯಲಕ್ಷ್ಮೀ ಪ್ರಕಾಶನ. ಮೈಸೂರು.

ಶ್ರೀನಿವಾಸಮೂರ್ತಿ ಎಂ. ಆರ್. (2023). ವಚನ ಧರ್ಮಸಾರ. ಕನ್ನಡ ಸಾಹಿತ್ಯ ಪರಿಷತ್ತು. ಬೆಂಗಳೂರು.

Downloads

Published

08.06.2024

How to Cite

ಮಾಧವ ಎಂ. ಕೆ. (2024). ಬಸವಣ್ಣನ ವಚನಗಳಲ್ಲಿ ಸಮ ಸಮಾಜದ ಪ್ರಸ್ತುತತೆ . AKSHARASURYA, 4(02), 27 to 32. Retrieved from https://aksharasurya.com/index.php/latest/article/view/427

Issue

Section

ಸಂಶೋಧನಾ ಲೇಖನಗಳು. | RESEARCH ARTICLE.