ಡಾ. ಬಿ.ಆರ್. ಅಂಬೇಡ್ಕರ್ ತತ್ವಗಳು ಮತ್ತು ಸಾಮಾಜಿಕ ಪರಿವರ್ತನಾ ಚಳುವಳಿಗಳು
ಪೀಪಲ್ಸ್ ರಿಸರ್ಚ್ ಅಸೋಸಿಯೇಷನ್ (ಪಿ.ಆರ್.ಎ.) ಹಾಗೂ ಕನ್ನಡ ಅಧ್ಯಯನ ಕೇಂದ್ರ, ಬೆಂಗಳೂರು ವಿಶ್ವವಿದ್ಯಾಲಯ, ಜ್ಞಾನಭಾರತಿ ಕ್ಯಾಂಪಸ್, ಬೆಂಗಳೂರು. ಇವರ ಸಹಯೋಗದಲ್ಲಿ "ಡಾ. ಬಿ.ಆರ್. ಅಂಬೇಡ್ಕರ್ ತತ್ವಗಳು ಮತ್ತು ಸಾಮಾಜಿಕ ಪರಿವರ್ತನಾ ಚಳುವಳಿಗಳು” ಕುರಿತು ಒಂದು ದಿನದ (22-04-2025) ರಾಷ್ಟ್ರ ಮಟ್ಟದ ಆನ್ ಲೈನ್ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿದೆ.
ವಿಚಾರಸಂಕಿರಣದಲ್ಲಿ ಪ್ರಬಂಧ ಮಂಡಿಸಲು ಮೌಲ್ಯಯುತ ಸಂಶೋಧನ ಪ್ರಬಂಧಗಳನ್ನು ಆಹ್ವಾನಿಸಲಾಗಿದೆ.
ಆಸಕ್ತಿಯುಳ್ಳ ವಿದ್ಯಾರ್ಥಿಗಳು, ಸಂಶೋಧನಾರ್ಥಿಗಳು, ಅಧ್ಯಾಪಕರು, ಸಾರ್ವಜನಿಕರು ಅಥವಾ ವಿಷಯ ತಜ್ಞರು ಈ ಕೆಳಕಂಡ ವಿಷಯಗಳನ್ನು ಕೇಂದ್ರೀಕರಿಸಿ ಪ್ರಬಂಧಗಳನ್ನು ಸಿದ್ಧಪಡಿಸಿ ಕಳುಹಿಸಬಹುದು:
- ಡಾ. ಬಿ.ಆರ್. ಅಂಬೇಡ್ಕರ್ ಅವರ ರಾಜಕೀಯ ತತ್ವಗಳು
- ಡಾ. ಬಿ.ಆರ್. ಅಂಬೇಡ್ಕರ್ ಅವರ ಬದುಕಿನಿಂದ ಕಲಿಯಬೇಕಾದ ಸಂದೇಶ
- ಡಾ. ಬಿ.ಆರ್. ಅಂಬೇಡ್ಕರ್ ಅವರ ಆರ್ಥಿಕ ತತ್ವಗಳು
- ಡಾ. ಬಿ.ಆರ್. ಅಂಬೇಡ್ಕರ್ ಅವರ ಸಾಮಾಜಿಕ ತತ್ವಗಳು
- ಸಂವಿಧಾನ ಶಿಲ್ಪಿಯಾಗಿ ಡಾ. ಬಿ.ಆರ್. ಅಂಬೇಡ್ಕರ್
- ಸಮಾಜ ಪರಿವರ್ತಕರಾಗಿ ಡಾ. ಬಿ.ಆರ್. ಅಂಬೇಡ್ಕರ್
- ಡಾ. ಬಿ.ಆರ್. ಅಂಬೇಡ್ಕರ್ ದೃಷ್ಟಿಯಲ್ಲಿ ಕಾನೂನು ಮತ್ತು ಸಾಮಾಜಿಕ ಬದಲಾವಣೆ
- ದಲಿತ ಸಮುದಾಯದ ಇಂದಿನ ಸವಾಲುಗಳು
- ಕಾರ್ಮಿಕರ ಕಾನೂನುಗಳ ಪಿತಾಮಹರಾಗಿ ಡಾ. ಬಿ.ಆರ್. ಅಂಬೇಡ್ಕರ್
- ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಮಹಿಳಾ ಸಬಲೀಕರಣ
- ಬೌದ್ಧ ಧಮ್ಮದ ಪುನರ್ ಸ್ಥಾಪಕ ಡಾ. ಬಿ.ಆರ್. ಅಂಬೇಡ್ಕರ್
- ಜಾತಿವಿನಾಶ ಮತ್ತು ಡಾ. ಬಿ.ಆರ್. ಅಂಬೇಡ್ಕರ್
- ಡಾ. ಬಿ.ಆರ್. ಅಂಬೇಡ್ಕರ್ ಅವರ ಗುರುವಾಗಿ ಬುದ್ಧ
- ಜಗದ ಮೊದಲ ಸಾಮಾಜಿಕ ಪರಿವರ್ತನೆಯ ಹರಿಕಾರ ಬುದ್ಧ
- ಡಾ. ಬಿ.ಆರ್. ಅಂಬೇಡ್ಕರ್ ಅವರ ದೃಷ್ಟಿಯಲ್ಲಿ ಭಾರತದ ಕೃಷಿ ಮತ್ತು ಭೂಮಿ
- ಡಾ. ಬಿ.ಆರ್. ಅಂಬೇಡ್ಕರ್ ದೃಷ್ಟಿಯಲ್ಲಿ ರಾಷ್ಟ್ರೀಯತೆ ಮತ್ತು ರಾಷ್ಟ್ರದ ಏಕತೆ
- ಜ್ಞಾನದ ಸಂಕೇತವಾಗಿ ಡಾ. ಬಿ.ಆರ್. ಅಂಬೇಡ್ಕರ್
- ಧಾರ್ಮಿಕ ಮತ್ತು ಸಾಂಸ್ಕೃತಿಕ ನ್ಯಾಯ ಕುರಿತಂತೆ ಡಾ. ಬಿ.ಆರ್. ಅಂಬೇಡ್ಕರ್
- ಭಾರತದ ಮುಖ್ಯವಾಹಿನಿ ಪತ್ರಿಕೋದ್ಯಮ ಮತ್ತು ಒಳಗೊಳ್ಳುವಿಕೆ
- ಸಾಮಾಜಿಕ ಜಾಲತಾಣದಲ್ಲಿ ಅಂಬೇಡ್ಕರ್
- ಸಮಾಜ ಪರಿವರ್ತನೆ ಮತ್ತು ಅಶೋಕನ ಧಮ್ಮ ಕ್ರಾಂತಿ
- ಬೌದ್ಧ ಧಮ್ಮ ಮತ್ತು ಮಹಿಳೆ
- ವಚನ ಚಳವಳಿ ಮತ್ತು ಸಮಾಜ ಪರಿವರ್ತನೆ
- ವಚನ ಚಳವಳಿ ಮತ್ತು ಮಹಿಳಾ ಸಮಾನತೆ
- ಜೋತಿಬಾ ಫುಲೆ ಮತ್ತು ಸಾಮಾಜಿಕ ಕ್ರಾಂತಿ ಮತ್ತು ವಿಮೋಚನೆ
- ಸಾವಿತ್ರಿ ಬಾ ಫುಲೆಯವರ ಅಕ್ಷರ ಕ್ರಾಂತಿ ಮತ್ತು ವಿಮೋಚನೆ
- ಮಹಾರಾಷ್ಟ್ರದಲ್ಲಿ ದಲಿತ ಚಳವಳಿ
- ಕರ್ನಾಟಕದಲ್ಲಿ ದಲಿತ ಚಳವಳಿ
- ಕನ್ನಡ ಸಾಹಿತ್ಯದಲ್ಲಿ ಅಂಬೇಡ್ಕರ್
- ಜನಪದ ಲಾವಣಿ ಮತ್ತು ಹಾಡುಗಳಲ್ಲಿ ಅಂಬೇಡ್ಕರ್
- ಭಾರತದ ಪ್ರಜಾಪ್ರಭುತ್ವದ ಪಿತಾಮಹರಾಗಿ ಡಾ. ಬಿ.ಆರ್. ಅಂಬೇಡ್ಕರ್
- ಸಮಾನತೆಯ ಸಾಧನವಾಗಿ ಮೀಸಲಾತಿ ಮತ್ತು ಡಾ. ಬಿ.ಆರ್. ಅಂಬೇಡ್ಕರ್
- ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಸಾಮಾಜಿಕ ನ್ಯಾಯ
- ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಶಿಕ್ಷಣ ಮತ್ತು ಸಾಮಾಜಿಕ ಸುಧಾರಣೆಗಳು
- ಡಾ. ಬಿ.ಆರ್. ಅಂಬೇಡ್ಕರ್ ಮತ್ತು ರಾಜಕೀಯ ನ್ಯಾಯ
- ಶಿಕ್ಷಣ ಕುರಿತಂತೆ ಡಾ. ಬಿ.ಆರ್. ಅಂಬೇಡ್ಕರ್ ವಿಚಾರಗಳು
- ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಲಿಂಗ ಸಮಾನತೆ
- ಡಾ. ಬಿ.ಆರ್. ಅಂಬೇಡ್ಕರ್ ಚಳವಳಿ ಮತ್ತು ಮಾನವ ಘನತೆ
- ಜನಮಾಧ್ಯಮವಾಗಿ ಸಾಮಾಜಿಕ ಜಾಲತಾಣ
ಈ ಮೇಲಿನ ವಿಷಯಗಳಷ್ಟೇ ಅಲ್ಲದೆ, ವಿಚಾರ ಸಂಕಿರಣದ ಆಶಯಕ್ಕೆ ಸೂಕ್ತವಾದ ಸಂಶೋಧನಾ ಪ್ರಬಂಧವನ್ನು ಕಳುಹಿಸಬಹುದು.
ಪೂರ್ಣ ಪ್ರಬಂಧವನ್ನು 2000 ಪದಗಳ ಮಿತಿಯಲ್ಲಿ ನುಡಿ ತಂತ್ರಾಂಶದಲ್ಲಿ (ನುಡಿ 01ಇ, ಗಾತ್ರ 13, ಸಾಲಿನ ಅಂತರ 1.5) ತಪ್ಪಿಲ್ಲದೆ ಟೈಪಿಸಿ, ತಿದ್ದುಪಡಿ ಮಾಡಿ ವರ್ಡ್‌ಫೈಲ್‌ನಲ್ಲಿ ಕಳುಹಿಸುವುದು.
ಪೂರ್ಣ ಪ್ರಬಂಧವು ಸಾರಲೇಖ (250 ಪದಗಳ ಮಿತಿ), ಐದು ಮುಖ್ಯಪದಗಳು ಮತ್ತು ಪರಾಮರ್ಶನ ಗ್ರಂಥಗಳನ್ನು ಒಳಗೊಂಡಿರಬೇಕು.
ಸರಿಯಾಗಿ ತಿದ್ದುಪಡಿಯಾಗದ ಪ್ರಬಂಧಗಳನ್ನು ಸ್ವೀಕರಿಸುವುದಿಲ್ಲ.
ವಿಚಾರ ಸಂಕಿರಣದಲ್ಲಿ ಮಂಡಿತವಾಗುವ ಪ್ರಬಂಧಗಳನ್ನು ISSN ನಮೂದಿತ ಪುಸ್ತಕದಲ್ಲಿ ಪ್ರಕಟಿಸಲಾಗುವುದು.
ವಿಚಾರ ಸಂಕಿರಣದ ದಿನ (22-04-2025) ಪ್ರಮಾಣಪತ್ರದೊಂದಿಗೆ ಪುಸ್ತಕವನ್ನು ನೀಡಲಾಗುವುದು.
ಪೂರ್ಣ ಪ್ರಬಂಧವನ್ನು ಸಲ್ಲಿಸುವ ಕೊನೆಯ ದಿನಾಂಕ : 31 ಮಾರ್ಚ್ 2025
ಪ್ರಬಂಧವನ್ನು ಕಳುಹಿಸಬೇಕಾದ ಇ-ಮೇಲ್ ವಿಳಾಸ : ambedkarconferences2025@gmail.com
ಹೆಚ್ಚಿನ ವಿವರಗಳಿಗಾಗಿ ವಿಚಾರಸಂಕಿರಣದ ಕೈಪಿಡಿ ಗಮನಿಸಿರಿ ಹಾಗೂ ಈ ಮುಂದಿನ ವಾಟ್ಸಾಪ್ ಗ್ರೂಪಿಗೆ ಆಗಮಿಸಿರಿ:
ಕನ್ನಡ: https://chat.whatsapp.com/KTBfw2v0Fvp9xfs5vhKtwE
ಇಂಗ್ಲಿಷ್: https://chat.whatsapp.com/DjGZPWY6MO30Ik7WWWfzMn