ಕನ್ನಡ ಶಿಷ್ಟ ಪರಂಪರೆ ಮತ್ತು ಜಾನಪದ ಲೋಕ

14.10.2024

ಬೆಂಗಳೂರಿನ ಕ್ರಿಸ್ತು ಜಯಂತಿ ಕಾಲೇಜಿನ ಕನ್ನಡ ವಿಭಾಗದ ವತಿಯಿಂದ ಕರ್ನಾಟಕ ಸರ್ಕಾರದ ಕರ್ನಾಟಕ ಜಾನಪದ ಅಕಾಡೆಮಿ ಹಾಗೂ ಅಮೆರಿಕಾದ ಕನ್ನಡ ಸಾಹಿತ್ಯ ರಂಗ ಸಂಸ್ಥೆಗಳ ಸಹಯೋಗದಲ್ಲಿ ”ಕನ್ನಡ ಶಿಷ್ಟ ಪರಂಪರೆ ಮತ್ತು ಜಾನಪದ ಲೋಕ” ಕುರಿತು ಒಂದು ದಿನದ (17-01-2025) ಅಂತಾರಾಷ್ಟ್ರೀಯ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿದೆ. ವಿಚಾರಸಂಕಿರಣದಲ್ಲಿ ಪ್ರಬಂಧ ಮಂಡಿಸಲು ಮೌಲ್ಯಯುತ ಸಂಶೋಧನ ಪ್ರಬಂಧಗಳನ್ನು ಆಹ್ವಾನಿಸಲಾಗಿದೆ.

ಆಸಕ್ತಿಯುಳ್ಳ ಅಧ್ಯಾಪಕರು, ಸಂಶೋಧಕರು ಹಾಗೂ ಪಿಜಿ-ಯುಜಿ ವಿದ್ಯಾರ್ಥಿಗಳು ಈ ಕೆಳಕಂಡ ವಿಷಯಗಳನ್ನು ಕೇಂದ್ರೀಕರಿಸಿ ಪ್ರಬಂಧಗಳನ್ನು ಸಿದ್ಧಪಡಿಸಿ ಕಳುಹಿಸಬಹುದು:

  1. ಪ್ರಕೃತಿ ಮತ್ತು ಜಾನಪದ ಸಂಸ್ಕೃತಿ
  2. ಆದಿಮ ಸಂಸ್ಕೃತಿ ಮತ್ತು ಆಧುನಿಕ ಸಂಸ್ಕೃತಿ
  3. ಜಾನಪದ ಲೋಕ ಮತ್ತು ಕನ್ನಡ ಸಂಸ್ಕೃತಿ
  4. ಹಳಗನ್ನಡ ಸಾಹಿತ್ಯದಲ್ಲಿ ಜಾನಪದ ಲೋಕ
  5. ನಡುಗನ್ನಡ ಸಾಹಿತ್ಯದಲ್ಲಿ ಜಾನಪದ ಲೋಕ
  6. ವಚನಕಾರರು ಮತ್ತು ಜಾನಪದ ವಿವೇಕ
  7. ಹೊಸಗನ್ನಡ ಸಾಹಿತ್ಯದಲ್ಲಿ ಜಾನಪದ ಲೋಕ
  8. ಚರಿತ್ರೆ ಮತ್ತು ಜಾನಪದ ಲೋಕ
  9. ಶಾಸ್ತ್ರೀಯ ಪಠ್ಯಗಳು ಮತ್ತು ಜಾನಪದ ಜಗತ್ತು
  10. ಜಾನಪದ-ಶಿಷ್ಟ ಪರಂಪರೆಯಲ್ಲಿ ಶ್ರಮಿಕವರ್ಗ
  11. ಜಾನಪದ-ಶಿಷ್ಟ ಕಲೆಗಳು ಮತ್ತು ಕಲಾವಿದರು
  12. ಕನ್ನಡ ಜಾನಪದ ಮತ್ತು ಪಾಶ್ಚಾತ್ಯ ವಿದ್ವಾಂಸರು
  13. ಕನ್ನಡ ಜಾನಪದ ಮತ್ತು ದೇಸಿ ವಿದ್ವಾಂಸರು
  14. ಶಿಷ್ಟಕಾವ್ಯಗಳು ಮತ್ತು ಜಾನಪದ ಕಾವ್ಯಗಳು
  15. ಕನ್ನಡ ರಂಗಭೂಮಿ ಮತ್ತು ಜಾನಪದ
  16. ಜಾನಪದ ಕಥನಗಳ ಇಂಗ್ಲೀಷ್ ಅನುವಾದ
  17. ಕನ್ನಡದ ಕಣ್ಣಲ್ಲಿ ವಿಶ್ವ ಜಾನಪದ
  18. ವಿಶ್ವದ ಕಣ್ಣಲ್ಲಿ ಕನ್ನಡ ಜಾನಪದ
  19. ಜಾನಪದ-ಶಿಷ್ಟ ಪರಂಪರೆಯಲ್ಲಿ ಮಹಿಳೆ
  20. ಜಾನಪದ-ಶಿಷ್ಯ ಸಾಹಿತ್ಯ: ತೌಲನಿಕ ನೋಟ
  21. ಕನ್ನಡ ಸಾಹಿತ್ಯ: ಜಾನಪದ ಮತ್ತು ಶಾಸ್ತ್ರೀಯ ಮುಖಾಮುಖಿ
  22. ಶಿಷ್ಟಕಾವ್ಯಮೀಮಾಂಸೆ ಮತ್ತು ಜಾನಪದ ಕಾವ್ಯಮೀಮಾಂಸೆ
  23. ಕನ್ನಡ ಸಿನೆಮಾಗಳಲ್ಲಿ ಜಾನಪದ ಲೋಕ ದರ್ಶನ

ಈ ಮೇಲಿನ ವಿಷಯಗಳಷ್ಟೇ ಅಲ್ಲದೆ, ವಿಚಾರ ಸಂಕಿರಣದ ಆಶಯಕ್ಕೆ ಸೂಕ್ತವಾದ ಸಂಶೋಧನಾ ಪ್ರಬಂಧವನ್ನು ಕಳುಹಿಸಬಹುದು.

ಮೊದಲಿಗೆ, ಸಾರಲೇಖವನ್ನು 250 ಪದಗಳ ಮಿತಿಯಲ್ಲಿ ಕಳುಹಿಸುವುದು.

ಸಾರಲೇಖ ಆಯ್ಕೆಯಾದ ನಂತರ ಪೂರ್ಣ ಪ್ರಬಂಧವನ್ನು 3000 ಪದಗಳ ಮಿತಿಯಲ್ಲಿ ನುಡಿ ತಂತ್ರಾಂಶದಲ್ಲಿ (ನುಡಿ 01ಇ, ಗಾತ್ರ 13, ಸಾಲಿನ ಅಂತರ 1.5) ತಪ್ಪಿಲ್ಲದೆ ಟೈಪಿಸಿ, ತಿದ್ದುಪಡಿ ಮಾಡಿ ವರ್ಡ್‌ಫೈಲ್‌ನಲ್ಲಿ ಕಳುಹಿಸುವುದು.

ಸರಿಯಾಗಿ ತಿದ್ದುಪಡಿಯಾಗದ ಪ್ರಬಂಧಗಳನ್ನು ಸ್ವೀಕರಿಸುವುದಿಲ್ಲ.

ವಿಚಾರ ಸಂಕಿರಣದಲ್ಲಿ ಮಂಡಿತವಾಗುವ ಪ್ರಬಂಧಗಳನ್ನು ISBN ನಮೂದಿತ ಪುಸ್ತಕದಲ್ಲಿ ಪ್ರಕಟಿಸಲಾಗುವುದು.

ವಿಚಾರ ಸಂಕಿರಣದ ದಿನ (17-01-2025) ಪ್ರಮಾಣಪತ್ರದೊಂದಿಗೆ ಪುಸ್ತಕವನ್ನು ನೀಡಲಾಗುವುದು.

ಸಾರಲೇಖವನ್ನು ಕಳುಹಿಸುವ ಕೊನೆಯ ದಿನಾಂಕ : 20 ಅಕ್ಟೋಬರ್ 2024

ಪೂರ್ಣ ಪ್ರಬಂಧವನ್ನು ಸಲ್ಲಿಸುವ ಕೊನೆಯ ದಿನಾಂಕ : 10 ನವೆಂಬರ್ 2024

ಪ್ರಬಂಧವನ್ನು ಕಳುಹಿಸಬೇಕಾದ ಇ-ಮೇಲ್ ವಿಳಾಸ : kjksp@kristujayanti.com

ಹೆಚ್ಚಿನ ವಿವರಗಳಿಗಾಗಿ ವಿಚಾರಸಂಕಿರಣದ ಕೈಪಿಡಿ ಗಮನಿಸಿರಿ ಹಾಗೂ ಈ ಮುಂದಿನ ವಾಟ್ಸಾಪ್ ಗ್ರೂಪಿಗೆ ಆಗಮಿಸಿರಿ:
https://chat.whatsapp.com/ESGHto5M8gLEM6NymDzN5X


ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.
https://aksharasurya.com/index.php/latest/libraryFiles/downloadPublic/1