ಮೈಸೂರು ಸಂಸ್ಥಾನದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್.

Authors

  • KUPPANAHALLI M. BYRAPPA

Abstract

ಬಾಬಾಸಾಹೇಬರು ಭಾರತ ದೇಶಕ್ಕೆ ಯಾವ ಧಕ್ಕೆಯೂ ಉಂಟಾಗದಂತೆ ಈ ನೆಲದಲ್ಲಿ ಸೀಮಾತೀತ ಬೌದ್ಧಯಾನವನ್ನು ಕೈಗೊಂಡರು. ಅವರಿಗೆ ಬೌದ್ಧಚಳವಳಿ ನಿಮಿತ್ತವಾಗಿ ಇದ್ದ ದೂರದೃಷ್ಟಿ ಮತ್ತು ಕರ್ನಾಟಕ ಭೂಮಿಯಲ್ಲಿ ಅವರು ನಡೆಸಿದ ಬೌದ್ಧಯಾನವು ಅಪೂರ್ವವಾದ ಸಾಂಸ್ಕೃತಿಕ ದಾಖಲೆಯಾಗಿದೆ.ಇಂದು ಬಹುಪಾಲು ದಮನಿತ ಜನತೆ ಬೌದ್ಧಧರ್ಮಕ್ಕೆ ನಡೆಯಬೇಕೋ ಬೇಡವೋ ಎಂಬ ತೊಳಲಾಟದಲ್ಲಿ ಇರುವಾಗ ಅಂದೇ ಅಂಬೇಡ್ಕರರು ನಡೆಸಿರುವ ಬೌದ್ಧಪ್ರಜ್ಞಾಯಾನವು ನಿಜಕ್ಕೂ ಚೇತೋಹಾರಿಯಾದುದು. ಈ ನೆಲದಲ್ಲಿ ಬಾಬಾಸಾಹೇಬರು ಕ್ರಾಂತಿಕಾರಕ ಬೌದ್ಧಯಾನವನ್ನು ಕೈಗೊಂಡಿದ್ದು ಪ್ರಜಾಪ್ರಭುತ್ವದ ಆಶಯಕ್ಕೆ ಪೂರಕವಾದುದೇ ಆಗಿದೆ. ಈ ದಿಸೆಯಲ್ಲಿ ತಮ್ಮ ಬೌದ್ಧಯಾನವು ತಡವಾಯಿತೆಂಬ ಬೇಸರವಿದ್ದಾಗ್ಯೂ ತಮ್ಮ ಒಡನಾಡಿ ಬೌದ್ಧರಾದ ಶೋಷಿತ ಜನರು ಬೌದ್ಧಧರ್ಮವನ್ನು ಭಾರತದಲ್ಲಿ ಸಂಸ್ಥಾಪನೆ ಮಾಡುತ್ತಾರೆಂದು ಭರವಸೆಯೂ ಅವರಿಗಿತ್ತು. “…struggling throughout my life to abolish this evil practice of division based on caste and mutual hatred. In reality, I feel guilty of starting late the work of revival of Buddhism in India. But even then, I hope and believe that my people who, sacrificing their own comforts, have been faithfully following me. I hope and I trust they will continue to struggle sincerely to propagate the Buddha Dhamma in India.” ಹೀಗಾಗಿ ಶೋಷಿತರು ಭೀಮಬೆಳಕಿನಲ್ಲಿ ಸಾಗುವುದೆಂದರೆ, ‘ಭಾರತ ಸಂವಿಧಾನ’ವನ್ನು ನಿತ್ಯವೂ ಬೆಳಗುತ್ತ ಜಾತೀಯತೆ ಹಾಗೂ ಮತೀಯತೆಯನ್ನು ಮೀರಿದ ಮಾನವೀಯತೆಯನ್ನು ಜೀವಿಸುವುದೇ ಆಗಿದೆ. ಅಂಥ ಮಹತ್ಕಾರ್ಯಕ್ಕಾಗಿ ದೃಢವಿಶ್ವಾಸದಿಂದ ಮುನ್ನಡೆಯುವ ಬಗ್ಗೆ ಅಂಬೇಡ್ಕರ್ ಅವರೇ ಒಮ್ಮೆ ತಮ್ಮ ಜನ್ಮದಿನದಂದು ಪತ್ರಿಕೆಯೊಂದಕ್ಕೆ ನೀಡಿದ ಸಂದೇಶದಲ್ಲಿ, “...ಒಳ್ಳೆಯದೇ ಬರಲಿ, ಕೆಟ್ಟದ್ದೇ ಬರಲಿ, ಮಳೆಯೇ ಬರಲಿ, ಬಿಸಿಲೇ ಇರಲಿ, ಮಾನಾಪಮಾನಗಳು ಎದುರಾಗಲಿ, ಎದೆಗುಂದದೆ ಮುನ್ನಡೆದು, ಸಂಪೂರ್ಣ ಮಾನವತ್ವವನ್ನು ಪಡೆಯುವವರೆಗೆ ತಾವು ವಿರಮಿಸುವುದಿಲ್ಲ ಎನ್ನುವವರು ಪುಣ್ಯವಂತರು”ಎಂದಿರುವುದು ಇಂದಿಗೂ ಮನನೀಯವಾಗಿದೆ. ‘ಅರಿವೇ ಅಂಬೇಡ್ಕರ, ಗುರುವೇ ಅಂಬೇಡ್ಕರ’.

Downloads

Published

05.04.2023

How to Cite

KUPPANAHALLI M. BYRAPPA. (2023). ಮೈಸೂರು ಸಂಸ್ಥಾನದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್. AKSHARASURYA, 2(04), 01–07. Retrieved from https://aksharasurya.com/index.php/latest/article/view/95

Issue

Section

Article