ಕಲ್ಯಾಣ ಕರ್ನಾಟಕದ ಕಾದಂಬರಿ ಸಾಹಿತ್ಯ
Abstract
ಭಾರತೀಯ ಸಾಹಿತ್ಯ ಪರಂಪರೆಯಲ್ಲಿ ಕನ್ನಡ ಸಾಹಿತ್ಯ ತನ್ನದೇ ಆದಂತಹ ವಿಶಿಷ್ಟ ಸ್ಥಾನವನ್ನು ಹೊಂದಿದೆ. ಕಾಲಕಾಲಕ್ಕೆ ವೈವಿಧ್ಯಮಯ ಪ್ರಕಾರದಲ್ಲಿ ಕನ್ನಡ ಸಾಹಿತ್ಯ ಭೋರ್ಗರೆದಿದೆ. ಅದರಲ್ಲೂ ಹೊಸಗನ್ನಡ ಸಾಹಿತ್ಯದ ಸಂದರ್ಭದಲ್ಲಿ ಕನ್ನಡ ತನ್ನದೇ ಆದಂತಹ ಅಸ್ಮಿತೆಯನ್ನು ಹೊರಹೊಮ್ಮಿದೆ. ಇಡೀ ಭಾರತೀಯ ಸಾಹಿತ್ಯ ಕನ್ನಡ ಸಾಹಿತ್ಯದೆಡೆಗೆ ಬೆರಗಾಗಿ ನೋಡುವಂತೆ ಕನ್ನಡ, ಭಾಷೆ ಸಾಹಿತ್ಯ ಉದ್ಭವಿಸಿದೆ. ಆಂಗ್ಲ ಸಾಹಿತ್ಯದ ಪ್ರಭಾವದಿಂದ ಕನ್ನಡ ಸಾಹಿತ್ಯ ಇಟ್ಟ ಹೆಜ್ಜೆ ತೊಟ್ಟ ರೂಪ ಅನನ್ಯ. ಆಂಗ್ಲ ಸಾಹಿತ್ಯದ ಪ್ರಭಾವದಿಂದಾಗಿ ಕನ್ನಡ ಕಥನ ಸಾಹಿತ್ಯ ಹೊಸತನದ ಹೊದಿಕೆಯಲ್ಲಿ ತನ್ನ ಮೂಲ ಪೊರೆಯನ್ನು ಕಳಚಿಕೊಂಡು ಹೊಸ ಅವತಾರದಲ್ಲಿ ಹೊರಹೊಮ್ಮಿತು. ದೀರ್ಘ ಕಥಾ ಹಂದರವುಳ್ಳ ಕಾದಂಬರಿ ಪ್ರಕಾರ ಓದುಗರನ್ನು ಪರಕಾಯಪ್ರವೇಶ ಮಾಡಿಸುವಷ್ಟರ ಮಟ್ಟಿಗೆ ಆಕರ್ಷಕವಾದುದು. ಈ ಕಥನ ಶೈಲಿಯ ‘ಕಾದಂಬರಿ’ ಪ್ರಕಾರವನ್ನು ಕರಿಯನ್ನು ಕನ್ನಡಿಯಲ್ಲಿ ಹಿಡಿಸಿದಂತೆ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಸಂಕ್ಷಿಪ್ತವಾಗಿ ಇಲ್ಲಿ ಅವಲೋಕಿಸಲಾಗಿದೆ.