ವಚನ ಸಾಹಿತ್ಯದ ಸಾಮಾಜಿಕ ಆಯಾಮಗಳು
Keywords:
ಸಾಮಾಜಿಕ ಸಮಾನತೆ, ಕಾಯಕ, ದಾಸೋಹ, ವ್ಯಕ್ತಿಯ ವ್ಯಕ್ತಿತ್ವ ನಿರ್ಮಾಣAbstract
ವಚನ ಸಾಹಿತ್ಯ ರಚನೆ ಭಾರತೀಯ ಸಾಮಾಜಿಕ, ಧಾರ್ಮಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಜೀವನಗಳಲ್ಲಿ ಬದಲಾವಣೆಗಳನ್ನು ತರುವ ಚಳುವಳಿಯಾಗಿ ಮಾರ್ಪಟ್ಟಿತ್ತು. ವಚನ ಸೃಷ್ಟಿ ಒಂದು ಅನನ್ಯ ಪ್ರಯೊಗ. ಸಮಾಜದ ಎಲ್ಲ ವರ್ಗಗಳ, ವರ್ಣಗಳ ಶರಣ ಸಮುದಾಯ ಬಸವಣ್ಣನವರ ಮುಂದಾಳತ್ವದಲ್ಲಿ ಕೈಗೊಂಡ ವ್ಯಕ್ತಿ ಕಲ್ಯಾಣ ಮಾತ್ತು ಸಮಾಜ ಕಲ್ಯಾಣ ಚಳುವಳಿಯನ್ನು ಹುಟ್ಟುಹಾಕಿದ್ದು ಈ ವಚನಗಳೇ. ವಚನಕಾರರು ವಚನಗಳ ಮೂಲಕ ಕಾಯಕ, ದಾಸೋಹ, ಸಮಾನತೆ ಮುಂತಾದ ತತ್ವಗಳನ್ನು ವಿಶ್ವಕ್ಕೆ ನೀಡಿದರು. ವ್ಯಕ್ತಿ ಕಲ್ಯಾಣ ಮತ್ತು ಸಮಾಜ ಕಲ್ಯಾಣಕ್ಕಾಗಿ ಅವರು ಕೈಕೊಂಡ ಜನಪರ ಆಂದೋಲನ ನಮ್ಮ ನಾಡಿನ ವಿಶಿಷ್ಟ ಸಾಧನೆ.