ಪಾಲನಹಳ್ಳಿ ಕುಮಾರರಾಮನ ಜಾತ್ರೆ (ಸ್ಥಳೀಕರು ಮತ್ತು ವಲಸಿಗರ ಸಮನ್ವಯದ ಜಾತ್ರೆ)
Abstract
ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕು ಕೋಳಾಲ ಹೋಬಳಿಗೆ ಸೇರಿದ ಕಂದಾಯ ಗ್ರಾಮ ದೊಡ್ಡಪಾಲನಹಳ್ಳಿ. ಈ ಗ್ರಾಮದಲ್ಲಿ ಮುಜರಾಯಿ ಇಲಾಖಾ ವ್ಯಾಪ್ತಿಗೆ ಒಳಪಟ್ಟಿರುವ ಕುಮಾರರಾಮ ದೇವಾಲಯವಿದೆ. ಯುಗಾದಿ ಹಬ್ಬ ಆದ ಹದಿನೈದು ದಿನಕ್ಕೆ ಕುಮಾರರಾಮನ ಜಾತ್ರೆ ಒಂದು ವಾರ ವಿವಿಧ ಆಚರಣೆಗಳ ಮೂಲಕ ವಿಜೃಂಭಣೆಯಿಂದ ನಡೆಯುತ್ತದೆ. ಕುಮಾರರಾಮ ಎಂದರೆ ತ್ರೇತಾಯುಗದ ದಶರಥ ಮತ್ತು ಕೌಸಲ್ಯ ನಂದನ ರಾಮನಲ್ಲ. ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೂ ಮೊದಲು ಕುಮ್ಮಟದುರ್ಗದಲ್ಲಿ ಆಳುತ್ತಿದ್ದ ಕಂಪಿಲರಾಯ ಮತ್ತು ಹರಿಯಾಲದೇವಿಯ ಮಗ. ಇಲ್ಲಿ ರಾಮದೇವರಾಗಿ ಭಕ್ತಾದಿಗಳಿಂದ ಪೂಜಿಸಲ್ಪಡುತ್ತಿದ್ದಾನೆ. ಕುಮಾರರಾಮ, ಮಾರಮ್ಮ, ಆಂಜನೇಯ, ಹುಲಿರಾಮಪ್ಪ ಈ ನಾಲ್ಕು ದೇವರುಗಳಿಗೆ ಸಂಬಂಧಿಸಿದಂತೆ ಸ್ಥಳೀಕರು ಮತ್ತು ವಲಸಿಗರು ಸಮನ್ವಯತೆಯಿಂದ ನಡೆಸುವ ವಿಶಿಷ್ಟ ಆಚರಣೆಯ ಜಾತ್ರೆಯಿದು.