ಕನ್ನಡ ಶಾಸನಗಳಲ್ಲಿ ರಗಳೆ
Abstract
ಐದು ರಗಳೆಗಳು ಕನ್ನಡ ಶಾಸನದಲ್ಲಿ ದೊರೆತ ಕನ್ನಡ ಭಾಷೆಯಲ್ಲಿ ರಚಿತವಾಗಿರುವ ರಗಳೆಗಳು ಇವುಗಳನ್ನು ಹೊರತುಪಡಿಸಿ ಸಂಸ್ಕೃತ ಭಾಷೆಯಲ್ಲಿ ಬರೆದಿರುವ ಏಕೈಕ ರಗಳೆಯು ಆಂಧ್ರಪ್ರದೇಶದ ಕೋರಮಿಲ್ಲ ತಾಮ್ರಶಾಸನದಲ್ಲಿ ಇರುವುದನ್ನು ಗುರುತಿಸಲಾಗಿದೆ. ಇದನ್ನು ಬರೆದ ಕವಿ ಭೀಮನಭಟ್ಟ, ಶಾಸನಕಾಲ ಕ್ರಿ.ಶ. ೧೦೨೨ ಆಗಿದ್ದು ಇದನ್ನು ಫ್ಲೀಟ್ ಮೊದಲಿಗೆ ಪ್ರಕಟಿಸಿದರು. ಈ ಶಾಸನದಲ್ಲಿರುವ ರಗಳೆಯನ್ನು ಡಾ. ಪಿ. ಬಿ. ದೇಸಾಯಿಯವರು ಲಲಿತರಗಳೆ ಎಂದು ಸೂಚಿಸಿದರು ಎಂದು ಎಂ. ಎಂ. ಕಲಬುರ್ಗಿಯವರು ಮಾರ್ಗ-೨ ರಲ್ಲಿ ಹೇಳಿದ್ದಾರೆ. ಈ ಆರು ರಗಳೆಗಳನ್ನು ಬಿಟ್ಟರೆ ಶಾಸನಗಳಲ್ಲಿ ರಗಳೆಗಳು ಬಳಕೆಯಾಗಿರುವುದು ಕಂಡುಬಂದಿಲ್ಲ.