ವಿಶ್ವಕರ್ಮ ಸಂಸ್ಕೃತಿಯ ಕುರಿತು ಶಂಬಾ ಜೋಶಿಯವರ ವಿಚಾರಗಳು
Abstract
ಶಂಬಾರವರು ವಿಶ್ವಕರ್ಮರ ತತ್ವ ಸಿದ್ಧಾಂತವನ್ನು ವಿವರಿಸಿತ್ತ ವಿಮೃತ್ಯುವಿನಿಂದ ಜೀವ ಚೈತನ್ಯ ಸೃಷ್ಠಿಯಾಗಿದೆ ಎಂಬುದು ಆಪಃ ರಸ ಪಂಥೀಯರಾದ ವಿಶ್ವಕರ್ಮರ ಮೂಲಭೂತ ಸಿದ್ದಾಂತ ಎಂದು ಪ್ರತಿಪಾದಿಸುತ್ತಾರೆ. ವಿಶ್ವಕರ್ಮರು ಪ್ರತಿಯೊಂದು ಅಂತ್ಯವೂ ಆರಂಭಕ್ಕೆ ನಾಂದಿಯಾಗುತ್ತದೆ ಎಂಬ ತತ್ವದಲ್ಲಿ ನಂಬಿಕೆಯಿಟ್ಟಿದ್ದಾರೆ ಎಂದು ಶಂಬಾ ಪ್ರತಿಪಾದಿಸುತ್ತಾರೆ. ಹೀಗೆ ಸಾಂಸ್ಕೃತಿಕ ಚಿಂತಕರಾದ ಶಂಬಾ ಜೋಶಿಯವರು ವಿಶ್ವಕರ್ಮ ಸಂಸ್ಕೃತಿಯನ್ನು ವೇದಗಳ ಹಿನ್ನೆಲೆಯಲ್ಲಿ, ಜಾಗತಿಕ ಆದಿದೈವತ ಕಥೆಗಳ ಹಿನ್ನೆಲೆಯಲ್ಲಿ, ಜಾನಪದ ಆಕರಗಳ ಹಿನ್ನೆಲೆಯಲ್ಲಿ, ಚರಿತ್ರಿಕವಾಗಿ, ತೌಲನಿಕವಾಗಿ, ಸಾಮಾಜಿಕವಾಗಿ ಹಲವು ದೃಷ್ಟಿಕೋನಗಳಿಂದ ಅಧ್ಯಯನಸಿದ್ದಾರೆ.