ಹೊಯ್ಸಳ ರಾಜಮನೆತನದ ತವರು – ಮೂಡಿಗೆರೆಯ ಸೊಸೆಯೂರು
Abstract
ಗತವೈಭವ ಹಾಗೂ ಪರಂಪರೆಯ ಹಿನ್ನೆಲೆಯಲ್ಲಿ ಮೂಡಿಗೆರೆಯು ಹೊಯ್ಸಳ ರಾಜವಂಶದೊಂದಿಗೆ ತಳುಕು ಹಾಕಿಕೊಂಡಿದೆ. ಐತಿಹಾಸಿಕವಾಗಿ ಇಲ್ಲಿನ ಸೊಸೆಯೂರು ಈ ನಿಟ್ಟಿನಿಂದ ಮಹತ್ವಪೂರ್ಣವಾಗಿದೆ. ಸೊಸೆಯೂರಿಗೆ ಅಂಗಡಿ, ಶಶಕಪುರ ಎಂಬ ಹೆಸರುಗಳೂ ಇರುವುದನ್ನು ಇತಿಹಾಸವು ಈಗಾಗಲೇ ದಾಖಲಿಸಿಕೊಂಡಿದೆ. ಒಂದೇ ಊರಿಗೆ ಮೂರು ಸ್ಥಳನಾಮಗಳು ಅಂಟಿಕೊಂಡಿರುವುದು ಕೂಡ ಚರಿತ್ರಾರ್ಹ ಸಂಗತಿಯೇ ಆಗಿದೆ. ಹನ್ನೊಂದು - ಹನ್ನೆರಡನೆಯ ಶತಮಾನದ ಶಾಸನಗಳಲ್ಲಿ ಇದು ಸೊಸವೂರು ಎಂದು ಕರೆಯಲ್ಪಟ್ಟಿದೆ. ಇದಕ್ಕೊಂದು ನಿದರ್ಶನ ಎಂಬಂತೆ ಸಮೀಪದ ಕಣಚೂರು ಎಂಬ ಗ್ರಾಮದಲ್ಲಿ ದಂತಕಥೆ ಕೂಡ ಜನರ ಬಾಯಲ್ಲಿ ಪ್ರಚಲಿತವಾಗಿ ಮುಂದುವರೆದುಕೊಂಡು ಬಂದಿದೆ. ಅದರಂತೆ ಈ ಗ್ರಾಮದಲ್ಲಿನ ಸೊಸೆಯೊಬ್ಬಳು ಪತಿಯ ಮನೆಯವರ ಹಿಂಸೆಯನ್ನು ತಾಳಲಾರದೆ ಸಮೀಪದ ಹೊಳೆಗೆ ತನ್ನ ಹಸುಗೂಸಿನೊಂದಿಗೆ ಹಾರಿ ಪ್ರಾಣಾಹುತಿಯನ್ನು ಮಾಡಿಕೊಳ್ಳುತ್ತಾಳೆ. ಆದ್ದರಿಂದ ಇಲ್ಲಿಗೆ ಸೊಸೆಯೂರು ಎಂಬ ಹೆಸರು ಬಂತೆಂಬುದು. ಇದನ್ನು ಸಾಕ್ಷೀಕರಿಸಲು ಎಂಬಂತೆ ಸಾತ್ವಿಕ ಮುಖಭಾವದ ಹೆಣ್ಣುಮಗಳೊಬ್ಬಳು ಮಗುವನ್ನು ಕೈಗೆತ್ತಿಕೊಂಡು ನಿಂತಿರುವ ಕಲ್ಲಿನ ಶಾಸನಾಕೃತಿಯು ಇಲ್ಲಿನ ಹೊಳೆಯ ಬದಿ ಕಂಡುಬರುತ್ತದೆ.
References
ಪಿ . ಆರ್. ಮುಜಿಮ್ದಾರ್, ಆರ್. ಕೆ. ಭಾರಧ್ವಾಜ್, ಆರ್. ಸಿ. ಚೌಧರಿ, ೧೯೯೮, ಕರ್ನಾಟಕ ಪ್ರೌಢ ಇತಿಹಾಸ, ಲಕ್ಷ್ಮಿ ಪ್ರೀಟಿಂಗ್ ಅಂಡ್ ಪಬ್ಲಿಷಿಂಗ್ ಹೌಸ್, ಮೈಸೂರು.
ಬಸವರಾಜ ಎನ್. ಅಕ್ಕಿ, ೨೦೦೪, ಕರ್ನಾಟಕದ ಇತಿಹಾಸ ಮತ್ತು ಸಂಸ್ಕೃತಿ, ಸೋಮೇಶ್ವರ ಪ್ರಕಾಶನ, ಧಾರವಾಡ.