ಇಂದಿನ ಮಹಿಳಾ ಕಾವ್ಯಗಳಲ್ಲಿ ಹೊಸತನದ ತುಡಿತಗಳು

Main Article Content

ಸುಮಾ ವ. ಸಾವಂತ

Abstract

ಇಂದಿನ ಮಹಿಳಾ ಕಾವ್ಯವು ಕೇವಲ ಭಾವನಾತ್ಮಕ ಅಭಿವ್ಯಕ್ತಿಯಾಗದೆ, ಹೆಣ್ಣಿನ ಅಸ್ತಿತ್ವ ಮತ್ತು ಸ್ವಂತಿಕೆಯ ಹುಡುಕಾಟದ ದನಿಯಾಗಿ ಮಾರ್ಪಟ್ಟಿದೆ. ಪುರುಷ ಪ್ರಧಾನ ಸಮಾಜದಲ್ಲಿನ ಶೋಷಣೆ, ಭೋಗದ ವಸ್ತುವಾಗಿ ಸ್ತ್ರೀಯನ್ನು ನೋಡುವ ದೃಷ್ಟಿಕೋನ ಮತ್ತು ಪಿತೃಪ್ರಧಾನ ಮೌಲ್ಯಗಳ ವಿರುದ್ಧ ಆಧುನಿಕ ಕವಯಿತ್ರಿಯರು ಹರಿತವಾದ ಪ್ರತಿಭಟನೆಯನ್ನು ದಾಖಲಿಸುತ್ತಿದ್ದಾರೆ. ಭ್ರೂಣಹತ್ಯೆ, ಕೌಟುಂಬಿಕ ದೌರ್ಜನ್ಯ ಮತ್ತು ಲಿಂಗ ತಾರತಮ್ಯದಂತಹ ಜ್ವಲಂತ ಸಮಸ್ಯೆಗಳನ್ನು ಈ ಲೇಖನವು ಸಮಕಾಲೀನ ಕವಿತೆಗಳ ಹಿನ್ನೆಲೆಯಲ್ಲಿ ವಿಶ್ಲೇಷಿಸುತ್ತದೆ. ಸ್ತ್ರೀವಾದಿ ಚಿಂತನೆಗಳು ಇಲ್ಲಿ ಪುರುಷ ವಿರೋಧಿಯಾಗಿರದೆ, ಸಮಾನತೆ ಮತ್ತು ಸಹಗಮನದ ಆಶಯವನ್ನು ಹೊಂದಿವೆ. ಶಿಕ್ಷಣ ಮತ್ತು ಜಾಗತೀಕರಣದ ಪ್ರಭಾವದಿಂದಾಗಿ ಮಹಿಳೆಯು ತನ್ನ ಮೌನವನ್ನು ಮುರಿದು, ಅಕ್ಷರಗಳ ಮೂಲಕ ಅಂಧಕಾರದಿಂದ ಬೆಳಕಿನೆಡೆಗೆ ಸಾಗುವ ಹಾಗೂ ತನ್ನದೇ ಆದ ಹೊಸ ಪರಂಪರೆಯನ್ನು ಸೃಷ್ಟಿಸುವ ತುಡಿತಗಳನ್ನು ಈ ಪ್ರಸ್ತುತ ಲೇಖನವು ಚರ್ಚಿಸುತ್ತದೆ.

Article Details

Section

Research Articles

Author Biography

ಸುಮಾ ವ. ಸಾವಂತ

ಕನ್ನಡ ಉಪನ್ಯಾಸಕರು, ಸ. ಪ್ರ. ದ. ಕಾಲೇಜು, ಅಳ್ನಾವರ.

How to Cite

ಸುಮಾ ವ. ಸಾವಂತ. (2026). ಇಂದಿನ ಮಹಿಳಾ ಕಾವ್ಯಗಳಲ್ಲಿ ಹೊಸತನದ ತುಡಿತಗಳು. ಅಕ್ಷರಸೂರ್ಯ (AKSHARASURYA), 13(06), 103 to 112. https://aksharasurya.com/index.php/latest/article/view/632

References

ಮಾಧವಿ ಭಂಡಾರಿ, (2001), ಹರಿದ ಸ್ಕರ್ಟಿನ ಹುಡುಗಿ, ಅಂಕೋಲಾ: ಶ್ರೀ ರಾಘವೇಂದ್ರ ಪ್ರಕಾಶನ.

ವಿನಯಾ ಒಕ್ಕುಂದ, (2006), ನೂರುಗೋರಿಯ ದೀಪ, ಬಳ್ಳಾರಿ: ಲೋಹಿಯಾ ಪ್ರಕಾಶನ.

ಕವಿತಾ ರೈ, (2010), ನೀರತೇಜಿಯನೇರಿ, ಬೆಂಗಳೂರು: ಸೃಷ್ಟಿ ಪಬ್ಲಿಕೇಷನ್ಸ್.

ಸುಧಾ ಚಿದಾನಂದಗೌಡ, (2013), ಬಯಲ ಧ್ಯಾನ, ಬಳ್ಳಾರಿ: ಸುಯೋಧನ ಪ್ರಕಾಶನ.

ಶ್ರೀದೇವಿ ಕೆರೆಮನೆ, (2020), ಮೈ ಮುಚ್ಚಲೊಂದು ತುಂಡು ಬಟ್ಟೆ, ಹಾವೇರಿ: ಪಲ್ಲವ ಪ್ರಕಾಶನ.

ಸವಿತಾ ಬನ್ನಾಡಿ, (2017), ನೀರಿಗೆ, ಬೆಂಗಳೂರು: ಕವಿ ಪ್ರಕಾಶನ.

ಎಚ್. ಎಸ್. ಅನುಪಮಾ, (2015), ಸಹಗಮನ, ಅಂಕೋಲಾ: ಶ್ರೀ ರಾಘವೇಂದ್ರ ಪ್ರಕಾಶನ.

ಸುಮಾ ಸಾವಂತ, (2024), ಮಿಡಿದ ಮಾತು, ಕಲಬುರ್ಗಿ: ವಡ್ಡನಕೇರಿ ಪ್ರಕಾಶನ.