ಚುಟುಕುಗಳ ಇತಿಹಾಸ
Main Article Content
Abstract
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ 'ಚುಟುಕು' ಸಾಹಿತ್ಯಕ್ಕೆ ಸುದೀರ್ಘವಾದ ಮತ್ತು ಸಮೃದ್ಧವಾದ ಹಿನ್ನೆಲೆಯಿದೆ. ಈ ಲೇಖನವು ಚುಟುಕು ಕೇವಲ ಆಧುನಿಕ ಪ್ರಕಾರವಲ್ಲ, ಬದಲಾಗಿ ಅದರ ಬೇರುಗಳು 7ನೇ ಶತಮಾನದ ಬಾದಾಮಿ ಶಾಸನದ ತ್ರಿಪದಿಗಳಲ್ಲಿ, ಶರಣರ ವಚನಗಳಲ್ಲಿ ಹಾಗೂ ದಾಸರ ಉಗಾಭೋಗಗಳಲ್ಲಿ ಅಡಗಿದೆ ಎಂಬುದನ್ನು ಸಪ್ರಮಾಣವಾಗಿ ವಿವರಿಸುತ್ತದೆ. ಬದುಕಿನ ಮಹತ್ವದ ವಿಚಾರಗಳನ್ನು ಅತಿ ಕಡಿಮೆ ಸಾಲುಗಳಲ್ಲಿ ಚೂಪಾಗಿ ಹರಿಸುವ ಈ ಕಲೆಯ ಮೇಲೆ ಜನಪದ ಸಾಹಿತ್ಯದ ಪ್ರಭಾವ ಮತ್ತು ಪಾಶ್ಚಾತ್ಯ 'ಲಿಮರಿಕ್' (Limerick) ಮಾದರಿಯ ಅನುಕರಣೆಗಳ ಕುರಿತು ಇಲ್ಲಿ ಚರ್ಚಿಸಲಾಗಿದೆ. ಜಿ.ಪಿ. ರಾಜರತ್ನಂ ಅವರ 'ನೂರು ಪುಟಾಣಿ' ಮತ್ತು ಚುಟುಕುಗಳ ಬ್ರಹ್ಮ ಎಂದೇ ಖ್ಯಾತರಾದ ದಿನಕರ ದೇಸಾಯಿಯವರ ಕೊಡುಗೆಯನ್ನು ಉಲ್ಲೇಖಿಸುತ್ತಾ, ಚುಟುಕು ಸಾಹಿತ್ಯವು ಹೇಗೆ ಹಳೆಯ ಸಂಪ್ರದಾಯದೊಂದಿಗೆ ಹೊಸ ಶೈಲಿಯನ್ನು ಬೆರೆಸಿಕೊಂಡು ಸಮಕಾಲೀನ ಸಮಾಜದ ವಿಡಂಬನೆ ಮತ್ತು ಮೌಲ್ಯಗಳ ಪ್ರತಿಪಾದನೆಯಲ್ಲಿ ಯಶಸ್ವಿಯಾಗಿದೆ ಎಂಬುದನ್ನು ಈ ಪ್ರಬಂಧವು ವಿಶ್ಲೇಷಿಸುತ್ತದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ಕೇಶವ ಕುಲಕರ್ಣಿ, "ಹನಿಗವನಗಳ ಹೆಜ್ಜೆ ಹಿಡಿದು" (ಲೇಖನ), ಅನಿವಾಸಿ - ಯು.ಕೆ ಕನ್ನಡಿಗರ ತಂಗುದಾಣ.
ಡಾ. ಎಸ್. ಅನಸೂಯ ಕೆಂಪನಹಳ್ಳಿ, ಕನ್ನಡ ಸಿರಿಯ ನಾಲೆಗಳು.
ದಿನಕರ ದೇಸಾಯಿಯವರ ಆಯ್ದ ಕವಿತೆಗಳು, ಸಂ: ವಿಷ್ಣುನಾಯ್ಕ, ಪುಟ: 212.
"ಚುಟುಕು ಸಾಹಿತ್ಯದ ಮೂಲ ಜನಪದ" (ಲೇಖನ), ಪ್ರಜಾವಾಣಿ, ದಿನಾಂಕ: 21/03/2011.
ಎಚ್. ಡುಂಡಿರಾಜ್, ಹನಿಗವನ: ಏನು? ಏಕೆ? ಹೇಗೆ?, ಪುಟ: 21.
ಶತಮಾನದ ಕನ್ನಡ ಸಾಹಿತ್ಯ, ಪುಟ: 373.
ಗಿರಿಜಾ ಮಾಲಿ ಪಾಟೀಲ, "ಶ್ರಾವಣಜೀವ: ಭಾವಗಳ ಸಮ್ಮಿಲನ" (ಲೇಖನ), ದಿನಾಂಕ: 01/03/2021.