ನುಡಿಗಳ ಅಳಿವು: ಬೇರೆ ದಿಕ್ಕಿನ ನೋಟ
Keywords:
ಕೆ.ವಿ. ನಾರಾಯಣ, ಭಾಷಾಶಾಸ್ತ್ರ, ಬಹುಶಿಸ್ತೀಯ ಅಧ್ಯಯನ, ನುಡಿ, ತೊಂಡುಮೇವುAbstract
‘ನುಡಿಗಳ ಅಳಿವು: ಬೇರೆ ದಿಕ್ಕಿನ ನೋಟ’ ಕೃತಿಯನ್ನು ಓದಿಕೊಳ್ಳುವಾಗ ಇರಬೇಕಾದ ಎಚ್ಚರವೆಂದರೆ ಈ ಕೃತಿ ಅಳಿವಿನ ಅಂಚಿನಲ್ಲಿರುವ ನುಡಿಗಳ ಬಗೆಗೆ ಇದುವರೆಗೆ ಕಟ್ಟಿಕೊಂಡಿರುವ ತಿಳಿವಿನಲ್ಲಿರುವ ಸಮಸ್ಯೆಯನ್ನು ಹೇಗೆ ಗುರುತಿಸಿದೆ ಎಂಬುದನ್ನು ಗಮನಿಸಬೇಕು. ನಂತರ ಆ ಸಮಸ್ಯೆಗಳಿಗೆ ಮುಂದಿನ ದಿನಗಳಲ್ಲಿ ಹೇಗೆ ಬದಲಿ ದಾರಿಗಳನ್ನು ಕಂಡುಕೊಳ್ಳಬೇಕಿದೆ ಎಂಬುದರತ್ತ ಗಮನಹರಿಸಬೇಕಿದೆ. ಇಲ್ಲವಾದಲ್ಲಿ ಇದನ್ನು ಯಥಾಸ್ಥಿತಿವಾದಿಗಳು, ಪ್ರಭುತ್ವಗಳು, ಬಂಡವಾಳಶಾಹಿ ವ್ಯವಸ್ಥೆ, ಸಾಮಾಜಿಕ ಡಾರ್ವಿನ್ ವಾದಿಗಳು, ಮತ್ತು ಸದ್ಯ ಭಾಷಿಕ ಸಾಮ್ರಾಜ್ಯಶಾಹಿಗಳು ಅವರಿಗೆ ಬೇಕಾದಂತೆ ಓದಿಕೊಳ್ಳುವ ಸಾಧ್ಯತೆಯೂ ಇದೆ. ಅವರಿಗೆ ಅನುಕೂಲ ಮಾಡಿಕೊಡುವ ವಾದದಂತೆ ಕಾಣಬಹುದು. ಅಂತಹ ಉದ್ದೇಶ ಈ ಕೃತಿಯದಲ್ಲ. ಅದು ಅಳಿವಿನ ಅಂಚಿನಲ್ಲಿರುವ ನುಡಿಗಳ ಬಗೆಗೆ ಆಳವಾದ ಆಸಕ್ತಿಯನ್ನು ಹೊಂದಿದೆ. ಅಂತಹ ಆಸಕ್ತಿಯನ್ನು ಸರಿಯಾದ ತಿಳಿವಿನ ಬೆಳಕಿನಲ್ಲಿ ಇಟ್ಟು ಜನನುಡಿಗಳನ್ನು ಕಾಪಿಟ್ಟುಕೊಳ್ಳಲು ಜನಕೇಂದ್ರಿತ ಮತ್ತು ಕ್ರಿಯಾಸಾಧ್ಯತೆ ಇರುವ ನೈಜ ಚಿಂತನೆ ಮತ್ತು ಯೋಜನೆಗಳನ್ನು ಮುಂದಿನ ದಿನಗಳಲ್ಲಿ ರೂಪಿಸಬೇಕಾದ ಅಗತ್ಯವಿದೆ ಎಂಬುದನ್ನು ಸೂಚಿಸುವುದಾಗಿದೆ. ಹಾಗಾಗಿ ಈ ಕೃತಿ ವಾಗ್ವಾದಕ್ಕೆ ನೀಡಿರುವ ಆಹ್ವಾನವನ್ನು ಗಂಭೀರವಾಗಿ ಪರಿಗಣಿಸಿ ಆ ದಿಸೆಯಲ್ಲಿ ನಾವೆಲ್ಲರೂ ಸಾಗಬೇಕಿದೆ. ಹೊಸ ಮತ್ತು ಹೊರದಾರಿಗಳನ್ನು ಕಂಡುಕೊಳ್ಳಬೇಕಿದೆ.
Downloads
Published
How to Cite
Issue
Section
License
Copyright (c) 2025 AKSHARASURYA
This work is licensed under a Creative Commons Attribution 4.0 International License.