ಕನ್ನಡ ಕಾವ್ಯಕ್ಕೆ ಬಂಜಗೆರೆ ಜಯಪ್ರಕಾಶರವರ ಕೊಡುಗೆ
Keywords:
ನೋವು, ಬಡತನ, ಹಸಿವು, ಶೋಷಣೆ, ಮೋಸ, ವಂಚನೆAbstract
ಬಂಜಗೆರೆ ಜಯಪ್ರಕಾಶರವರು ಕರ್ನಾಟಕದ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರೇ ಹೇಳಿದಾಗೆ ಬಿ.ಎ. ತರಗತಿಯಿಂದಲೇ ಕಾವ್ಯ ಕ್ವೇತ್ರದಲ್ಲಿ ಕಾವ್ಯಾಸಕ್ತಿ ಬೆಳೆಸಿಕೊಂಡವರು. ತಾವು ಕವಿತೆ ಬರೆಯುತ್ತ ಇನ್ನೊಬ್ಬರನ್ನು ಬರೆಯುವುದಕ್ಕೆ ಪ್ರೇರಣೆ ನೀಡಿದ ಕವಿ. ಕನ್ನಡ ಸಾಹಿತ್ಯದ ಸಾರಸ್ವತ ಲೋಕದಲ್ಲಿ ಅನೇಕ ಕವಿಗಳು ಆಯಾ ಕಾಲಘಟ್ಟದಲ್ಲಿ ಕಾವ್ಯಗಳ ಮೂಲಕ ಹೆಸರುವಾಸಿಯಾಗಿದ್ದರೆ. ಎಪ್ಪತ್ತರ ದಶಕದ ಕಾಲಘಟ್ಟದ ವಸ್ತುವಿನ ನಿರ್ಮಾಣದಲ್ಲಿ ಸ್ವತಂತ್ರವಾದ ಚಿಂತನೆಗಳು ವಾಸ್ತವ ನೆಲೆಯಲ್ಲಿ ಜೀವಧ್ವನಿಯಾಗಿ ಮಿಡಿದಿರುವುದು ಕಾಣುತ್ತೇವೆ. ಈ ಮಿಡಿಯುವಿಕೆಯಲ್ಲಿ ಸಾಮಾಜಿಕ ನ್ಯಾಯದ ಭಾವನೆಗಳನ್ನು ಹೊರಹಾಕಲು ಪರಿಪಕ್ವತೆಯ ಕಾಲವೆಂದು ಗಮನಿಸುವ ಅಗತ್ಯತೆಯಿದೆ. ಒಬ್ಬ ಕವಿ ಅಥವಾ ಲೇಖಕ ತನ್ನ ಬದುಕಿನ ಮೈಲುಗಲ್ಲುಗಳನ್ನು ದಾಟಬೇಕಾದರೆ ಆತನಿಗೆ ತಾನು ತಲುಪಬೇಕಾದ ಮಾರ್ಗದ ಕಡೆ ಪ್ರಯಾಣಿಸುವ ಕಾರ್ಯದಲ್ಲಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿರುತ್ತಾನೆ. ಈ ಹಿನ್ನೆಲೆಯಲ್ಲಿ ಬಂಜಗೆರೆ ಜಯಪ್ರಕಾಶರವರು ದಲಿತ-ಬಂಡಾಯ ಸಾಹಿತ್ಯ ಘಟ್ಟದ, ಅದಕ್ಕೆ ಸ್ಪಂದಿಸುವ ನೆಲೆಯಲ್ಲಿ ತಮ್ಮದೆಯಾದ ವಿಚಾರಗಳ ಮೂಲಕ ಬೆಳಕು ಚೆಲ್ಲಿದ್ದಾರೆ. ಸೂಕ್ಷ್ಮ ಸಂವೇದನೆ ಮತ್ತು ರೂಪಕ ಸಂಕೇತಗಳ ಮೂಲಕ ಮಾತನಾಡಬಲ್ಲ ವೈಚಾರಿಕ ಕವಿಗಳ ಸಾಲಿನಲ್ಲಿ, ಬಂಜಗೆರೆ ಜಯಪ್ರಕಾಶರು ಪ್ರಮುಖರಾಗಿ ಕಾಣುತ್ತಾರೆ. ಇವರ ಕಾವ್ಯಗಳು ದಲಿತ ಅಥವಾ ಜನಸಾಮಾನ್ಯರ ನೋವು, ಬಡತನ, ಹಸಿವು, ಶೋಷಣೆ, ಕ್ಷಾಮ, ಬರಗಾಲ, ಮೋಸ, ವಂಚನೆ, ಪರ್ಯಾಯ ವಿಚಾರಗಳು ಜನಸಾಮಾನ್ಯರಿಗೆ ಹತ್ತಿರವಾಗುವ ಧ್ವನಿಯ ಮೂಲಕ ಎಳೆ ಎಳೆಯಾಗಿ ಬಿಚ್ಚಿಡುವ ಸಂದರ್ಭ, ಬಳಸುವ ಶೈಲಿ, ನಿರೂಪಣ ಕ್ರಮ, ವಸ್ತು ಆಯ್ಕೆಯ ವಿಧಾನ, ತಂತ್ರಗಾರಿಕೆ ವಿಶಿಷ್ಟತೆಯಿಂದ ಕೂಡಿದ್ದಾಗಿದೆ. ಅಂತೆಯೇ ಸಂಕೀರ್ಣತೆಯ ಅನೇಕ ಸಂಗತಿಗಳನ್ನು ಸಹೃದಯರಿಗೆ ನೀಡುವ ಕುಶಲತೆ ಎದ್ದು ಕಾಣುತ್ತದೆ.
References
ನಾಗೇಂದ್ರಪ್ಪ ಎಸ್. ಮೈಲಾರಿ (2018). ಬಂಜಗೆರೆ ಜಯಪ್ರಕಾಶರವರ ಕಾವ್ಯ ವಿಮರ್ಶೆ. ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ. ಕಲಬುರಗಿ.
ಚಂಪ (ಸಂ). (ಸೆಪ್ಟೆಂಬರ್ ಅಕ್ಟೊಂಬರ್ 2006) ಸಂಕ್ರಮಣ. ಸಂಕ್ರಮಣ ಪ್ರಕಾಶನ. ಬೆಂಗಳೂರು.
ಶೇಷಗಿರಿರಾವ್ ಎಲ್. ಎಸ್. (1999). ಹೊಸಗನ್ನಡ ಸಾಹಿತ್ಯ ಚರಿತ್ರೆ. ಅಂಕಿತಾ ಪ್ರಕಾಶನ. ಬೆಂಗಳೂರು.
Downloads
Published
How to Cite
Issue
Section
License
Copyright (c) 2024 AKSHARASURYA
This work is licensed under a Creative Commons Attribution 4.0 International License.