ಡಿಜಿಟಲ್ ಜಗತ್ತಿನಲ್ಲಿ ಕನ್ನಡ: ಕನ್ನಡ ಭಾಷಾ ಕಲಿಕೆಯ ಮೇಲೆ ತಂತ್ರಜ್ಞಾನದ ಪ್ರಭಾವ

Main Article Content

ಶ್ರೀಮಹಾಂತೇಶ ವಿ. ಅಂಗಡಿ

Abstract

ಜ್ಞಾನ ಮತ್ತು ಭಾವನೆಗಳ ಸಮ್ಮಿಲನವಾದ ಭಾಷೆಯು ತಂತ್ರಜ್ಞಾನದ ಸ್ಪರ್ಶದಿಂದ ಹೊಸ ಆಯಾಮವನ್ನು ಪಡೆದುಕೊಂಡಿದೆ. ಆಧುನಿಕ ಡಿಜಿಟಲ್ ಯುಗದಲ್ಲಿ ಮೊಬೈಲ್ ಅಪ್ಲಿಕೇಶನ್‌ಗಳು, ಕೃತಕ ಬುದ್ಧಿಮತ್ತೆ (AI) ಮತ್ತು ವರ್ಚುವಲ್ ತರಗತಿಗಳು ಕನ್ನಡ ಕಲಿಕೆಯನ್ನು ಸರಳ ಹಾಗೂ ಪರಿಣಾಮಕಾರಿಯಾಗಿಸಿವೆ. ಡ್ಯುಯೊಲಿಂಗೋದಂತಹ ಗ್ಯಾಮಿಫಿಕೇಶನ್ ಮಾದರಿಗಳು, ‘ಟೆಕ್ಸ್ಟ್ ಟು ಸ್ಪೀಚ್’ ತಂತ್ರಜ್ಞಾನಗಳು ಮತ್ತು ಸಾಮಾಜಿಕ ಜಾಲತಾಣಗಳು ಭಾಷಾ ಪ್ರಸರಣದಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ. ಯಂತ್ರ ಕಲಿಕೆ (Machine Learning) ಮತ್ತು ಧ್ವನಿ ಸಹಾಯಕ ತಂತ್ರಜ್ಞಾನಗಳಲ್ಲಿ ಕನ್ನಡದ ಅಳವಡಿಕೆ ಅತ್ಯಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಸರ್ಕಾರ ಮತ್ತು ತಂತ್ರಜ್ಞರ ಸಂಘಟಿತ ಪ್ರಯತ್ನದ ಅಗತ್ಯವಿದೆ. ಜಾಗತಿಕ ಮಟ್ಟದಲ್ಲಿ ಕನ್ನಡದ ಅಸ್ತಿತ್ವ ಮತ್ತು ಬೆಳವಣಿಗೆಗೆ ತಂತ್ರಜ್ಞಾನದ ಸದ್ಬಳಕೆ ಅನಿವಾರ್ಯ ಎಂಬುದನ್ನು ಇಲ್ಲಿ ಪ್ರತಿಪಾದಿಸಲಾಗಿದೆ.

Article Details

Section

Research Articles

Author Biography

ಶ್ರೀಮಹಾಂತೇಶ ವಿ. ಅಂಗಡಿ

ಟೆಲಿಕಾಂ ಇಂಜಿನೀಯರ್, ಬೆಂಗಳೂರು ಹಾಗೂ ಕನ್ನಡ ಸ್ನಾತಕೋತ್ತರ ವಿದ್ಯಾರ್ಥಿ, ಕನ್ನಡ ವಿ.ವಿ ಹಂಪಿ.

How to Cite

ಶ್ರೀಮಹಾಂತೇಶ ವಿ. ಅಂಗಡಿ. (2026). ಡಿಜಿಟಲ್ ಜಗತ್ತಿನಲ್ಲಿ ಕನ್ನಡ: ಕನ್ನಡ ಭಾಷಾ ಕಲಿಕೆಯ ಮೇಲೆ ತಂತ್ರಜ್ಞಾನದ ಪ್ರಭಾವ. ಅಕ್ಷರಸೂರ್ಯ (AKSHARASURYA), 13(03), 74 to 85. https://aksharasurya.com/index.php/latest/article/view/563

References

ಅನಂತರಾಮು ಟಿ.ಆರ್. (ಸಂ), (2015), ವಿಜ್ಞಾನ-ತಂತ್ರಜ್ಞಾನ (ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆ - ಸಂಪುಟ 14), ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು.

https://www.ejnana.com

ಶ್ರೀನಿಧಿ ಟಿ.ಜಿ., (2017), ಕನ್ನಡ ತಂತ್ರಜ್ಞಾನ: ನೆನ್ನೆ-ಇಂದು-ನಾಳೆ, ಬೆಂಗಳೂರು: ಕಣಜ (ಕನ್ನಡ ಮತ್ತು ಸಂಸ್ಕೃತಿ ಇಲಾಖೆ).

ಶ್ರೀನಿಧಿ ಟಿ.ಜಿ., (2014), ಕಂಪ್ಯೂಟರ್ ಮತ್ತು ಕನ್ನಡ, ಬೆಂಗಳೂರು: ಮಿತ್ರಮಾಧ್ಯಮ.