ಕನ್ನಡ ಮಹಿಳಾ ಕಥಾಸಾಹಿತ್ಯದಲ್ಲಿ ಸ್ತ್ರೀ ಸಂವೇದನೆಗಳ ಸ್ವರೂಪ: ಆಯ್ದ ಕಥೆಗಾರ್ತಿಯರನ್ನು ಅನುಲಕ್ಷಿಸಿ

Main Article Content

ಎಂ. ಶೆಲ್ವಿ ಬಾಲಕೃಷ್ಣನ್

Abstract

ಕನ್ನಡ ಮಹಿಳಾ ಕಥಾಸಾಹಿತ್ಯವು ಹೆಣ್ಣಿನ ಅಂತರಂಗದ ತುಮುಲ, ಅವಳ ವಿಶಿಷ್ಟ ಅನುಭವಗಳು ಮತ್ತು ಅಸ್ಮಿತೆಯ ಹುಡುಕಾಟದ ಪ್ರಬಲ ಅಭಿವ್ಯಕ್ತಿಯಾಗಿದೆ. ಪಿತೃಪ್ರಧಾನ ವ್ಯವಸ್ಥೆಯ ಚೌಕಟ್ಟಿನಲ್ಲಿ ನೊಂದು ಬೆಂದ ಹೆಣ್ಣು, ಕಾಲಕ್ರಮೇಣ ಸಾಂಪ್ರದಾಯಿಕ ಮೌಲ್ಯಗಳನ್ನು ಪ್ರಶ್ನಿಸುವ ಮತ್ತು ಪ್ರತಿರೋಧ ಒಡ್ಡುವ ಹಂತಕ್ಕೆ ಬೆಳೆದ ಪರಿಯನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ವೈದೇಹಿ, ಸಾರಾ ಅಬೂಬಕರ್, ನೇಮಿಚಂದ್ರ ಮುಂತಾದ ಕಥೆಗಾರ್ತಿಯರು ಸ್ತ್ರೀ ಸಂವೇದನೆಯ ಮೂಲಕ ಕೌಟುಂಬಿಕ ಮತ್ತು ಸಾಮಾಜಿಕ ಶೋಷಣೆಗಳನ್ನು ತೆರೆದಿಡುತ್ತಾರೆ. ಲೈಂಗಿಕತೆ, ಸಮಾನತೆ ಮತ್ತು ವ್ಯಕ್ತಿತ್ವ ರೂಪಿಸಿಕೊಳ್ಳುವ ಸ್ವಾತಂತ್ರ್ಯದ ಕುರಿತಾದ ಸ್ತ್ರೀವಾದಿ ಚಿಂತನೆಗಳು ಆಧುನಿಕ ಕಥೆಗಳಲ್ಲಿ ಹೇಗೆ ಸಾಕಾರಗೊಂಡಿವೆ ಮತ್ತು ಮಹಿಳಾ ಪ್ರಜ್ಞೆಯು ಹೇಗೆ ವಿಕಾಸಗೊಂಡಿದೆ ಎಂಬುದರ ಮೇಲೆ ಇಲ್ಲಿ ಬೆಳಕು ಚೆಲ್ಲಲಾಗಿದೆ.

Article Details

Section

Research Articles

Author Biography

ಎಂ. ಶೆಲ್ವಿ ಬಾಲಕೃಷ್ಣನ್

ಸಹಾಯಕ ಪ್ರಾಧ್ಯಾಪಕರು (ಕನ್ನಡ ವಿಭಾಗ) ಕ್ರೈಸ್ಟ್ ಅಕಾಡೆಮಿ ಇನ್‌ಸ್ಟಿಟ್ಯೂಟ್ ಫಾರ್ ಅಡ್ವಾನ್ಸ್‌ಡ್ ಸ್ಟಡೀಸ್, ಕ್ರೈಸ್ಟ್ ನಗರ್, ಎಲೆಕ್ಟ್ರಾನಿಕ್ ಸಿಟಿ, ಬೆಂಗಳೂರು.

How to Cite

ಎಂ. ಶೆಲ್ವಿ ಬಾಲಕೃಷ್ಣನ್. (2026). ಕನ್ನಡ ಮಹಿಳಾ ಕಥಾಸಾಹಿತ್ಯದಲ್ಲಿ ಸ್ತ್ರೀ ಸಂವೇದನೆಗಳ ಸ್ವರೂಪ: ಆಯ್ದ ಕಥೆಗಾರ್ತಿಯರನ್ನು ಅನುಲಕ್ಷಿಸಿ. ಅಕ್ಷರಸೂರ್ಯ (AKSHARASURYA), 13(03), 48 to 60. https://aksharasurya.com/index.php/latest/article/view/560

References

ಅಮರೇಶ ನುಗಡೋಣಿ, (2008), ಕನ್ನಡ ಸಂಶೋಧನೆಯ ವೈಧಾನಿಕತೆಗಳು, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.

ಉಷಾ ಎಂ., (2004), ಮಹಿಳಾ ಚಳುವಳಿ ಮತ್ತು ಮಹಿಳಾ ವಿಷಯಗಳು, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.

ತೇಜಸ್ವಿನಿ ನಿರಂಜನ ಮತ್ತು ಸೀಮಂತಿನಿ ನಿರಂಜನ (ಸಂ), (1994), ಸ್ತ್ರೀವಾದಿ ಸಾಹಿತ್ಯ, ಬೆಂಗಳೂರು: ಕನ್ನಡ ಸಂಘ (ಕ್ರೈಸ್ಟ್ ಕಾಲೇಜು).

ಬಾನು ಮುಷ್ತಾಕ್, (2012), ಬಡವರ ಮಗಳು ಹೆಣ್ಣಲ್ಲ, ಮೈಸೂರು: ಅಭಿರುಚಿ ಪ್ರಕಾಶನ.

ವೈದೇಹಿ, (2008), ಸರಸ್ವತಿ ಬಾಯಿ ರಾಜವಾಡೆ: ಬದುಕು-ಬರಹ, ಹೆಗ್ಗೋಡು: ಅಕ್ಷರ ಪ್ರಕಾಶನ.

ಸಾರಾ ಅಬೂಬಕ್ಕರ್, (1991), ಮುಸ್ಲಿಂ ಸಂವೇದನೆ ಮತ್ತು ನಾನು (ಲೇಖನ), ಧಾರವಾಡ: ಸಂಕ್ರಮಣ ಪತ್ರಿಕೆ (ಸಂಕ್ರಮಣ ಪ್ರಕಾಶನ).