ಜನಪದವೂ... ನಾವೂ... ಪ್ರಸ್ತುತ ಸಂದರ್ಭವೂ...
Main Article Content
Abstract
ತಲೆಮಾರಿನಿಂದ ತಲೆಮಾರಿಗೆ ಮೌಖಿಕವಾಗಿ ಹರಿದು ಬಂದ ಜೀವನ ಕ್ರಮವೇ ಜನಪದವಾಗಿದ್ದು, ಇದು ಕೇವಲ ಸಾಹಿತ್ಯವಲ್ಲದೆ ಬದುಕಿನ ಸಮಗ್ರ ದರ್ಶನವಾಗಿದೆ. ಅನಕ್ಷರಸ್ಥರಾಗಿದ್ದರೂ ಕೃಷಿ, ಕಲೆ ಮತ್ತು ಪ್ರಕೃತಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದ ಜನಪದರು, ಸತ್ಯ, ಸಹಬಾಳ್ವೆ ಮತ್ತು ಸಮಷ್ಟಿ ಪ್ರಜ್ಞೆಯ ಮೂಲಕ ಸುಸ್ಥಿರ ಸಮಾಜವನ್ನು ಕಟ್ಟಿದ್ದರು. ಆದರೆ ಪ್ರಸ್ತುತ ಸಂದರ್ಭದಲ್ಲಿ ಆಧುನಿಕ ಶಿಕ್ಷಣ ಮತ್ತು ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದಾಗಿ ಈ ಮೂಲ ಮೌಲ್ಯಗಳು ಕಣ್ಮರೆಯಾಗುತ್ತಿವೆ. ಸರಳವಾಗಿದ್ದ ನಿಸರ್ಗದ ಆರಾಧನೆಯು ಕಾಂಕ್ರೀಟ್ ಕಟ್ಟಡಗಳ ಆಡಂಬರ ಮತ್ತು ವೈದಿಕ ಆಚರಣೆಗಳಿಗೆ ಜಾಗ ಮಾಡಿಕೊಟ್ಟಿದೆ. ಸ್ವಾರ್ಥ, ತೋರಿಕೆ ಮತ್ತು ವಾಣಿಜ್ಯೀಕರಣಗೊಂಡ ಇಂದಿನ ಬದುಕಿನಲ್ಲಿ, ಜನಪದರ ನೈತಿಕ ನೆಲೆಗಟ್ಟುಗಳು ಮತ್ತು ಸಾಮೂಹಿಕ ಬದುಕಿನ ಮಹತ್ವವನ್ನು ಕಳೆದುಕೊಳ್ಳುತ್ತಿರುವ ವೈರುಧ್ಯವನ್ನು ಇಲ್ಲಿ ವಿಶ್ಲೇಷಿಸಲಾಗಿದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
References
ಕಾಳೇಗೌಡ ನಾಗವಾರ, (1999), ಜಾನಪದ ಸಾಹಿತ್ಯ, ಬೆಂಗಳೂರು: ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ.
ತಪಸ್ವಿಕುಮಾರ ನಂ., (1982), ಜನಪದ ಸಂಸ್ಕೃತಿ, ಮೈಸೂರು: ಕರ್ನಾಟಕ ಜಾನಪದ ಪರಿಷತ್.
ಶಂಕರ ನಾರಾಯಣ ತೀ.ನಂ., (2001), ಜಾನಪದ ಕೈಪಿಡಿ, ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರ.
ನಾಯಕ ಹಾ.ಮಾ., (2015), ಜಾನಪದ ಸ್ವರೂಪ, ಶಿವಮೊಗ್ಗ: ಗೀತಾಂಜಲಿ ಪುಸ್ತಕ ಪ್ರಕಾಶನ.
ಪರಮಶಿವಯ್ಯ ಜೀ.ಶಂ., (2015), ಜನಪದ ಸಾಹಿತ್ಯ ಸಮೀಕ್ಷೆ, ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು.
ಆನಂದ ಬಾರಿಕರ, (ದಿನಾಂಕವಿಲ್ಲ), ಜನಪದ ಸಾಹಿತ್ಯ ಮತ್ತು ಆಧುನಿಕತೆ: ಒಂದು ಅವಲೋಕನ, ಧಾರವಾಡ: ಕರ್ನಾಟಕ ಮಹಾವಿದ್ಯಾಲಯ.
ಅಂಬಳಿಕೆ ಹಿರಿಯಣ್ಣ ಮತ್ತು ಡಾ. ಶಾಲಿನಿ ರಘುನಾಥ (ಸಂ), (2010), ಜನಪದ ಕಲೆ: ಅವಲೋಕನ, ಬೆಂಗಳೂರು: ಕರ್ನಾಟಕ ಜನಪದ ಅಕಾಡೆಮಿ.