ಡಿಜಿಟಲ್ ಯುಗದಲ್ಲಿ ಭಾಷೆಯ ರೂಪಾಂತರ: ಸಾಮಾಜಿಕ ಮಾಧ್ಯಮಗಳ ಪ್ರಭಾವ

Main Article Content

ಜ್ಯೋತಿ ಎನ್. ಭಟ್‌

Abstract

ಜನರು ವಿವಿಧ ಸಮುದಾಯಗಳೊಂದಿಗೆ ಸಂವಹನ ನಡೆಸಲು ಮತ್ತು ಸಂಪರ್ಕಿಸಲು ಇಂದಿನ ಜನ ಸಮುದಾಯವು ಸಾಮಾಜಿಕ ಮಾಧ್ಯಮವನ್ನು ವೇದಿಕೆಯಾಗಿ ಬಳಸುತ್ತಿದ್ದಾರೆ. ಡಿಜಿಟಲ್ ತಂತ್ರಜ್ಞಾನ ಮತ್ತು ಸಾಮಾಜಿಕ ಮಾಧ್ಯಮಗಳ ವ್ಯಾಪಕ ಬಳಕೆ ಮಾನವ ಸಂವಹನದ ಸ್ವರೂಪವನ್ನೇ ಬದಲಾಯಿಸಿದೆ. ಭಾಷೆ ಒಂದು ಚಲನೆಯುತ ಸಾಮಾಜಿಕ ವ್ಯವಸ್ಥೆಯಾಗಿದ್ದು, ಡಿಜಿಟಲ್ ಯುಗದಲ್ಲಿ ಅದು ಹೊಸ ರೂಪಗಳು, ಶೈಲಿಗಳು ಮತ್ತು ಅರ್ಥಾತ್ಮಕ ಬದಲಾವಣೆಗಳನ್ನು ಅನುಭವಿಸುತ್ತಿದೆ. ಭಾಷೆಯ ಬೆಳವಣಿಗೆಯ ಮೇಲೆ ಸಾಮಾಜಿಕ ಮಾಧ್ಯಮವು ಅಗಾಧವಾದ ಪರಿಣಾಮವನ್ನುಂಟು ಮಾಡಿದೆ. ಸಾಮಾಜಿಕ ಮಾಧ್ಯಮವು ಪ್ರಸ್ತುತವಾಗಿ ಹೆಚ್ಚಾಗಿ ಬೆಳೆಯುತ್ತಿದ್ದು, ಭಾಷೆಯ ಸ್ವರೂಪ, ಬಳಕೆ ಮತ್ತು ವಿಕಾಸದ ಮೇಲೆ ಗಣನೀಯ ಪ್ರಭಾವವನ್ನು ಬೀರುತ್ತಿವೆ. ಫೇಸ್‌ಬುಕ್, ವಾಟ್ಸಾಪ್, ಇನ್‌ಸ್ಟಾಗ್ರಾಂ, ಟ್ವಿಟರ್ (X) ಮತ್ತು ಯೂಟ್ಯೂಬ್ ಮತ್ತಿತರ ಸಾಮಾಜಿಕ ಮಾಧ್ಯಮದ ವೇದಿಕೆಗಳು ಭಾಷೆಯ ಸಂಕ್ಷಿಪ್ತೀಕರಣ, ಹೊಸ ಪದಗಳ ಸೃಷ್ಟಿ ಹಾಗೂ ಲಿಪಿ ಬಳಕೆಯಲ್ಲಿ ಹಲವಾರು ಬದಲಾವಣೆಗಳಿಗೆ ಕಾರಣವಾಗಿವೆ ಎಂದರೆ ತಪ್ಪಾಗಲಾರದು.
ಈ ಸಂಶೋಧನಾ ಪ್ರಬಂಧವು ಸಾಮಾಜಿಕ ಮಾಧ್ಯಮದಲ್ಲಿ ಭಾಷೆಯ ಶಬ್ದಕೋಶ, ವ್ಯಾಕರಣ, ಲಿಪಿ ಹಾಗೂ ಭಾಷಾ ಗುರುತಿನ ಮೇಲೆ ಬೀರುವ ಪರಿಣಾಮಗಳನ್ನು ವಿಶ್ಲೇಷಿಸುತ್ತದೆ. ಅಧ್ಯಯನವು ಭಾಷೆಯ ರೂಪಾಂತರವು ಸೃಜನಶೀಲತೆಯನ್ನು ಹೆಚ್ಚಿಸಿದರೂ, ಶುದ್ಧತೆ ಮತ್ತು ವ್ಯಾಕರಣದ ಮೇಲಿನ ಗಮನ ಕಡಿಮೆಯಾಗುತ್ತಿರುವುದನ್ನೂ ತೋರಿಸುತ್ತದೆ. ಈ ಅಧ್ಯಯನವು ಗುಣಾತ್ಮಕ ವಿಧಾನವನ್ನು ಅನುಸರಿಸಿದ್ದು, ಸಾಮಾಜಿಕ ಮಾಧ್ಯಮದ ಉದಾಹರಣೆಗಳು ಹಾಗೂ ಇತ್ತೀಚಿನ ಭಾಷಾ ಪ್ರವೃತ್ತಿಗಳ ವಿಶ್ಲೇಷಣೆಯ ಮುಖಾಂತರ ಭಾಷೆಯ ಮೇಲೆ ಸಾಮಾಜಿಕ ಮಾಧ್ಯಮದ ಧನಾತ್ಮಕ ಹಾಗೂ ನಕಾರಾತ್ಮಕ ಪರಿಣಾಮಗಳನ್ನು ಚರ್ಚಿಸುತ್ತದೆ. ಸಾಮಾಜಿಕ ಮಾಧ್ಯಮವು ಭಾಷೆಯ ವಿಕಾಸಕ್ಕೆ ಸಹಕಾರಿಯಾಗಿರುವುದರ ಜೊತೆಗೆ, ಮಾನಕ ಭಾಷೆಯ ಬಳಕೆಗೆ ಸವಾಲುಗಳನ್ನುಂಟು ಮಾಡುತ್ತಿರುವುದನ್ನು ನಾವು ಪ್ರಸ್ತುತವಾಗಿ ಕಾಣಬಹುದಾಗಿದೆ.

Article Details

Section

Research Articles

Author Biography

ಜ್ಯೋತಿ ಎನ್. ಭಟ್‌

ಕನ್ನಡ ವಿಭಾಗ, ಜ್ಯೋತಿ ಇನ್ಸ್ಟಿಟ್ಯೂಟ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್ ಕಾಲೇಜು, ತಾತಗುಣಿ, ಬೆಂಗಳೂರು.

References

Crystal, D. (2011). Internet linguistics: A student guide. Routledge.

Fishman, J. A. (1991). Reversing language shift. Multilingual Matters.

Kachru, B. B. (1994). Englishization and contact linguistics. World Englishes, 13(2), 135–154.

ರಾಜೇಂದ್ರ, ಎಸ್. (2018). ಭಾಷೆ ಮತ್ತು ಸಮಾಜ. ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ.

ಶಿವಕುಮಾರ್, ಎಂ. (2020). ಡಿಜಿಟಲ್ ಮಾಧ್ಯಮ ಮತ್ತು ಕನ್ನಡ ಭಾಷೆ. ಕನ್ನಡ ಅಧ್ಯಯನ, 15(1), 45–58.