ಗೊರೂರರ ‘ವೈಯ್ಯಾರಿ’ ಕಥಾಸಂಕಲನದಲ್ಲಿನ ಮಹಿಳಾ ಪಾತ್ರಗಳು
Keywords:
ಗೊರೂರು, ಕಥೆ, ಲಲಿತೆ, ಪುಟ್ಟಮಲ್ಲಿಗೆ, ಪುರುಷ, ಸಮಾಜ, ವಿಧವಾ ವಿವಾಹAbstract
ಆಧುನಿಕ ಕನ್ನಡ ಸಾಹಿತ್ಯದ ನವೋದಯ ಕಾಲಘಟ್ಟದಲ್ಲಿ ಕಥಾಪ್ರಕಾರದಲ್ಲಿ ಸಾಧನೆ ಮಾಡಿದ ಹಿರಿಯ ಕಥೆಗಾರರ ಪೈಕಿ ಗೊರೂರು ರಾಮಸ್ವಾಮಿ ಅಯ್ಯಂಗಾರ್‌ರವರು ಒಬ್ಬರು. ಇವರ 140ಕ್ಕೂ ಹೆಚ್ಚಿನ ಕಥೆಗಳು ಆರು ಕಥಾ ಸಂಕಲನಗಳಲ್ಲಿ ಹರಡಿಕೊಂಡಿವೆ. ಇವರ ‘ವೈಯ್ಯಾರಿ’ ಕಥಾ ಸಂಕಲನದಲ್ಲಿನ ‘ಭೂತಯ್ಯನ ಮಗ ಅಯ್ಯು’, ‘ಗಂಡುಬೀರಿ ಹೊಸಬಿ’, ‘ಪುಟ್ಟ ಮಲ್ಲಿಗೆ’, ‘ಈಡಿಗರ ಹೆಣ್ಣು’, ‘ಲಕ್ಕಿಯ ಗಂಡಂದಿರು’ ಎಂಬ ಕಥೆಗಳ ವ್ಯಾಪ್ತಿಯಲ್ಲಿ ಬರುವ ಮಹಿಳಾ ಪಾತ್ರಗಳನ್ನು ವಿವೇಚನೆ ಮಾಡುವುದು ಪ್ರಸ್ತುತ ಲೇಖನದ ಉದ್ದೇಶ. ಕೌಟುಂಬಿಕ ಜೀವನದಲ್ಲಿ ತಾಯಿಯಾಗಿ, ಸೊಸೆಯಾಗಿ, ಮಗಳಾಗಿ ಎಲ್ಲಾ ಅವಸ್ಥೆಗಳಲ್ಲಿ ತನ್ನ ಅಸ್ಮಿತೆಯ ಮುದ್ರೆಯನ್ನು ಒತ್ತುವ ಮಹಿಳೆ ಸಮಾಜದಲ್ಲಿ ತನ್ನ ಸ್ವಾತಂತ್ರ್ಯವನ್ನು ಕಳೆದುಕೊಂಡು ಸಾಮಾಜಿಕ ವ್ಯವಸ್ಥೆಯೊಳಗೆ ಪುರುಷನಿಗೆ ದಾಸಳಾಗಿ ಅಸಹಾಯಕತೆಯಲ್ಲಿ ಇರುವುದು ಹೊಸದೇನಲ್ಲ. ಹಾಗೆಯೇ ಪುರುಷ ಪ್ರಧಾನ ವ್ಯವಸ್ಥೆ ಪರಂಪರೆ, ಸಂಪ್ರದಾಯದ ಹೆಸರಿನಲ್ಲಿ ಹೆಣ್ಣನ್ನು ಬಂಧಿಸಿದ್ದರೂ ಸಾಮಾಜಿಕ ಕಟ್ಟುಪಾಡುಗಳಿಗೆ ಸಿಕ್ಕಿಬಿದ್ದು ನಲುಗದೆ ಬಂಡಾಯ ಮನೋಧರ್ಮವನ್ನೊಂದಿರುವುದು ವಿಶಿಷ್ಟವಾಗಿದೆ. ಈ ಮೇಲಿನ ಕಥೆಗಳಲ್ಲಿ ಇಂತಹ ಎರಡೂ ಬಗೆಯ ಪಾತ್ರಗಳನ್ನು ಲೇಖನದ ಮೂಲಕ ವಿವೇಚಿಸುವ ಪ್ರಯತ್ನ ಮಾಡಲಾಗಿದೆ.
References
ಕಮಲಾ ನರಸಿಂಹ (ಸಂ). (2005). ಹೇಮಾವತಿಯ ಚೇತನ. ಸುಮುಖ ಪ್ರಕಾಶನ. ಬೆಂಗಳೂರು.
ಗೊರೂರು ರಾಮಸ್ವಾಮಿ ಅಯ್ಯಂಗಾರ್. (1967). ವೈಯ್ಯಾರಿ. ಐ.ಬಿ.ಎಚ್. ಪ್ರಕಾಶನ. ಬೆಂಗಳೂರು.
ನಾಯಕ ಹಾ. ಮಾ. (ಸಂ). (1973). ಗೊರೂರು ಗೌರವ ಗ್ರಂಥ. ಗೊರೂರು ಗೆಳೆಯರ ಬಳಗ. ಮೈಸೂರು.
ಶೇಷಗಿರಿರಾವ್ ಎಲ್. ಎಸ್. (2010). ಸಮಗ್ರ ವಿಮರ್ಶಾ ಸಾಹಿತ್ಯ: ಸಂಪುಟ-7. ಕನ್ನಡ ಮತ್ತು ಸಂಸ್ಕೃತಿ ಇಲಾಖೆ. ಬೆಂಗಳೂರು.
ವೆಂಕಟಯ್ಯ ಸಿ. ಜಿ. (20080). ಗೊರೂರು ರಾಮಸ್ವಾಮಿ ಅಯ್ಯಂಗಾರ್. ಕರ್ನಾಟಕ ಜಾನಪದ ಪರಿಷತ್ತು. ಬೆಂಗಳೂರು.
Downloads
Published
How to Cite
Issue
Section
License
Copyright (c) 2024 AKSHARASURYA
This work is licensed under a Creative Commons Attribution 4.0 International License.