ಸುನಂದಾ ಕಡಮೆ ಅವರ ಕಥೆಗಳಲ್ಲಿ ಮಹಿಳೆ ಮತ್ತು ವೈಚಾರಿಕ ಪ್ರಜ್ಞೆ
Keywords:
ಕಥಾ ಸಾಹಿತ್ಯ, ಗಾಂಧಿ ಚಿತ್ರದ ನೋಟು, ಕುಟುಂಬ, ಆಧುನಿಕತೆ, ಮನುಷ್ಯ ಪ್ರೀತಿAbstract
ಸುನಂದಾ ಪ್ರಕಾಶ ಕಡಮೆ ಅವರ ಪುಟ್ಟ ಪಾದದ ಗುರುತು, ಗಾಂಧಿ ಚಿತ್ರದ ನೋಟು, ಕಂಬಗಳ ಮರೆಯಲ್ಲಿ ಹಾಗೂ ತುದಿ ಮಡಚಿಟ್ಟ ಪುಟ-ಕಥಾ ಸಂಕಲನಗಳ ಕಥೆಗಳಲ್ಲಿ ಕಂಡುಬರುವ ಸಂಪ್ರದಾಯ, ಆಚರಣೆ, ವೈಚಾರಿಕತೆ ಇವುಗಳನ್ನು ಈ ಲೇಖನದಲ್ಲಿ ವಿವರಣಾತ್ಮಕವಾಗಿ ವಿಶ್ಲೇಷಿಸಲಾಗಿದೆ. ಸುನಂದಾ ಪ್ರಕಾಶ ಕಡಮೆ ಅವರ ಬಹುತೇಕ ಕತೆಗಳ ಧಾತು ಕುಟುಂಬ ಮತ್ತು ಸಮಾಜದೊಳಗೆ ಗಿರಕಿ ಹೊಡೆಯುತ್ತದೆ. ಕುಟುಂಬದೊಳಗೆ ಹುಟ್ಟುವ ಕಥೆ ಸಾಮಾಜಿಕ ಆಯಾಮ ಪಡೆದುಕೊಳ್ಳುತ್ತಾ ಸಮಕಾಲೀನ ಸಮಾಜ, ಮಾನವೀಯ ಸಂಬಂಧಗಳನ್ನು ಕುರಿತು ಚಿಂತಿಸುತ್ತದೆ. ಹಾಗಾಗಿ ಕಥನ ಲೋಕದ ವಿಸ್ತಾರವನ್ನು ತೆರೆದಿಡುವ ಸುನಂದಾ ಪ್ರಕಾಶ ಕಡಮೆ ಅವರ ಕತೆಗಳಲ್ಲಿ ಬಲವಾದ ಆತ್ಮವಿಶ್ವಾಸ ಮತ್ತು ಪ್ರಬುದ್ಧಗೊಂಡ ಕಥನ ಕೌಶಲ್ಯ ಕಾಣುತ್ತದೆ.
ಸಂಸಾರ ನಿತ್ಯದ ವಿವರಗಳೇ ಸುನಂದಾ ಅವರ ಬಹುಪಾಲು ಕತೆಗಳ ಇಟ್ಟಿಗೆ, ಮಣ್ಣು, ಗಾರೆ ಇತ್ಯಾದಿ ಎಂದು ವಿವೇಕಶಾನಭಾಗ ಅವರು ಸುನಂದಾ ಕಥೆಗಳನ್ನು ಕುರಿತು ಅತ್ಯಂತ ಮೌಲಿಕವಾದ ಮಾತುಗಳನ್ನಾಡಿದ್ದಾರೆ. ಅಂದರೆ ಇವರ ಹೆಚ್ಚಿನ ಕಥೆಗಳಲ್ಲಿ ಬರುವ ಸಂಬಂಧಗಳ ನಡುವಿನ ತಿಕ್ಕಾಟಗಳ ಸೂಕ್ಷ್ಮತೆ, ಲೌಕಿಕ ಸೆಳೆತಗಳು, ಕುಟುಂಬ ಮತ್ತು ಸಮಾಜ-ಇವುಗಳ ನಡುವೆ ಅಂತಸ್ಥವಾಗಿರುವ ಸಂಬಂಧಗಳು ಮತ್ತು ಜವಾಬ್ದಾರಿಗಳು, ಆದರ್ಶ ಮತ್ತು ವಾಸ್ತವ, ವೈಚಾರಿಕತೆ ಆಧುನಿಕತೆಯ ವ್ಯಾಮೋಹ, ಮನುಷ್ಯಪ್ರೀತಿ, ತಾಕಲಾಟ, ಬದುಕಿನ ಬಗೆಗಿನ ಕಕ್ಕೂಲಾತಿ – ಇವೇ ಮೊದಲಾದ ಅಂಶಗಳು ಇವರ ಕಥೆಗಳಲ್ಲಿ ಕಾಣಸಿಗುತ್ತವೆ.
References
ಸುನಂದಾ ಕಡಮೆ. (2019). ಗಾಂಧಿ ಚಿತ್ರದ ನೋಟು. ಅಹರ್ನಿಶಿ ಪ್ರಕಾಶನ. ಶಿವಮೊಗ್ಗ.
ಸುನಂದಾ ಕಡಮೆ. (2016). ತುದಿ ಮಡಚಿಟ್ಟ ಪುಟ. ಅಹರ್ನಿಶಿ ಪ್ರಕಾಶನ. ಶಿವಮೊಗ್ಗ.
ಸುನಂದಾ ಕಡಮೆ. (2013). ಕಂಬಗಳ ಮರೆಯಲ್ಲಿ. ಅಂಕಿತ ಪುಸ್ತಕ ಪ್ರಕಾಶನ. ಬೆಂಗಳೂರು.
ಸುನಂದಾ ಕಡಮೆ. (2005). ಪುಟ್ಟ ಪಾದದ ಗುರುತು. ಛಂದ ಪುಸ್ತಕ ಪ್ರಕಾಶನ. ಬೆಂಗಳೂರು.
Downloads
Published
How to Cite
Issue
Section
License
Copyright (c) 2024 AKSHARASURYA
This work is licensed under a Creative Commons Attribution 4.0 International License.