ಮಕ್ಕಳ ಕಥಾ ಸಾಹಿತ್ಯಕ್ಕೆ ಎಚ್ಚೆಸ್ವಿ ಅವರ ಕೊಡುಗೆ
Keywords:
ಎಚ್ಚೆಸ್ವಿ, ಮಕ್ಕಳ ಕಥೆಗಳು, ಅಗ್ನಿಮುಖಿ, ಅಮಾನುಷರು, ಕದಿರನ ಕೋಟೆAbstract
ಮಕ್ಕಳ ಕಥೆಗಳಲ್ಲಿ ನಾವು ಗಮನಿಸಬಹುದಾದಂತಹ ಪ್ರಮುಖವಾದ ಅಂಶಗಳು ಕುತೂಹಲ, ಆಶ್ಚರ್ಯ, ವಿಸ್ಮಯ, ವಿನೋದ, ಬೆರಗು, ಭಯ, ಉತ್ಸಾಹ, ಮನೋರಂಜನೆ, ಛಲ, ಹಟ, ಆವೇಶ, ಚಾಕಚಕ್ಯತೆ ಇತ್ಯಾದಿಗಳಾಗಿವೆ. ಮಕ್ಕಳ ಕಥಾ ಸಾಹಿತ್ಯದಲ್ಲಿ ದೇವುಡು ಅವರ ʼಕನ್ನಡಿಯ ಕಥೆʼ, ಪಂಜೆ ಅವರ `ಒಡ್ಡನ ಆಟ’ ಪಂಡಿತ ಕವಲಿ ಅವರ `ಪುಟ್ಟಣ್ಣನ ಪಂಚತಂತ್ರ’, ಗೌರೀಶರ `ನಾಡನೆಲೆಗಾರ’, ದಾಮೋದರ ಬಾಳಿಗರ `ಇಲಿಮನೆ ಗಲಿಬಲಿ’, ಹೊಯ್ಸಳರ `ಆನೆ-ಇರುವೆ’, ಭಾರತೀಸುತರ `ಬೆಳೆಯಿತು ಮೂಗು ನೋಡಣ್ಣ’, ಶಂಕರಭಟ್ಟರ `ಪ್ರಾಣಿಗಳ ಪ್ರವಾಸ’, ಮೇವುಂಡಿ ಮಲ್ಲಾರಿ ಅವರ `ಕಳೆದ ಕಡಲೆ’, ಜಿ.ಪಿ.ರಾಜರತ್ನಂ ಅವರ `ಗೋಳೂರಿನ ಗಾಯಕರು’, ವಿಶ್ವಾಮಿತ್ರ ಅವರ `ತುಂಟ ಬೋರಣ್ಣ’, ಕುವೆಂಪು ಅವರ `ನರಿಗಳಿಗೇಕೆ ಕೋಡಿಲ್ಲ?’, ಪಾಂಡುರಂಗರಾಯರ ಸಕ್ಕರೆಬೆಟ್ಟ, ಸಿಸು ಸಂಗಮೇಶ `ಅವರ ನರಿಯ ಫಜೀತಿ’, ಜಯವಂತ ಕಾಡದೇವರ `ಮಾತಾಡುವ ಗಿಳಿ’, ಎ. ವಿ. ನಾವಡ ಅವರ ʼರಾಜಹಂಸʼ, ʼಮಧುಚಂದ್ರʼ, ʼಪೇಟೆಗೆ ಬಂದ ಪುಟ್ಟಿʼ ಇವು ಪ್ರಮುಖವಾದ ಕೃತಿಗಳಾಗಿವೆ. ಇತ್ತೀಚೆಗೆ ಸಮಕಾಲೀನ ಸಂದರ್ಭದ ಮಹತ್ವದ ಕವಿ ಮತ್ತು ಪ್ರಯೋಗಶೀಲ ನಾಟಕಕಾರ ಎಂದು ಗುರುತಿಸಲ್ಪಟ್ಟಿರುವ ಎಚ್. ಎಸ್.ವೆಂಕಟೇಶಮೂರ್ತಿ ಅವರು ಅನೇಕ ವರ್ಷಗಳಿಂದ ಮಕ್ಕಳಿಗಾಗಿ ಕವಿತೆ, ನಾಟಕ, ಕಥೆಗಳನ್ನು ರಚಿಸುತ್ತ, ಪ್ರಕಾಶಿಸುತ್ತ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದಾರೆ. ಇವರ ಅಮಾನುಷರು, ಕದಿರನಕೋಟೆ, ಅಗ್ನಿಮುಖಿ, ಚಿನ್ನಾರಿಮುತ್ತ, ತಾಪಿ ಕೃತಿಗಳು ಮಕ್ಕಳಿಗಾಗಿಯೇ ರಚಿತವಾದುವಾಗಿವೆ.
ಈ ಲೇಖನದಲ್ಲಿ ಎಚ್ಚೆಸ್ವಿ ಅವರ ಅಗ್ನಿಮುಖಿ, ಕದಿರನಕೋಟೆ, ಅಮಾನುಷರು ಕಥೆಗಳಲ್ಲಿ ಬಿಂಬಿತವಾಗಿರುವ ಕಥಾವಸ್ತುವನ್ನು ವಿವೇಚನೆಗೆ ಒಳಪಡಿಸಲಾಗಿದೆ.
References
ವೆಂಕಟೇಶಮೂರ್ತಿ ಎಚ್. ಎಸ್. (2013). ಸಮಗ್ರ ಮಕ್ಕಳ ಸಾಹಿತ್ಯ. ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ. ಮೈಸೂರು.
Downloads
Published
How to Cite
Issue
Section
License
Copyright (c) 2024 AKSHARASURYA
This work is licensed under a Creative Commons Attribution 4.0 International License.