ಚಂದ್ರಕಾಂತ ಕುಸನೂರರ ಕಥೆಗಳಲ್ಲಿ ಸಾಮಾಜಿಕ ಮೌಲ್ಯಗಳ ಪರಿಶೋಧ

Authors

  • ರಾಜೇಂದ್ರಕುಮಾರ್ ಕೆ ಮುದ್ನಾಳ್ ಪದವೀಧರ ಪ್ರಾಥಮಿಕ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಠಾಣಗುಂದಿ, ಯಾದಗಿರಿ.

Keywords:

ಸಾಮಾಜಿಕ ಮೌಲ್ಯ, ಸಣ್ಣ ಕಥೆಗಳು, ಅಸಹಜ, ತುಕ್ಕಪ್ಪ ಮಾಸ್ತರ, ಅಂಗೈ ಅಗಲ ಆಕಾಶ, ಎಲ್ಲಿಗೆ

Abstract

ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಕಥೆಗಳಿಗೆ ತನ್ನದೇ ಆದ ವಾಸ್ತವಿಕ ಚಿತ್ರಣಗಳಿವೆ. ಈ ಚಿತ್ರಣಗಳು ಸಾಂಸ್ಕೃತಿಕ ಲೋಕದ ತಲ್ಲಣಗಳನ್ನು ವಿವರಿಸುತ್ತವೆ. ಸಮುದಾಯದಲ್ಲಿರುವ ಸಾಮಾಜಿಕ ಮೌಲ್ಯ ಅಪಮೌಲ್ಯಗಳ ಕುರಿತು ಚರ್ಚೆ ನಡೆಸುತ್ತವೆ. ಬೇಕು ಬೇಡುಗಳ ಇತ್ಯರ್ಥವನ್ನು ಸಿದ್ಧಪಡಿಸುತ್ತವೆ. ಒಂದು ಆಯಾಮಕ್ಕಿಂತ ವಿಭಿನ್ನ ಆಯಾಮಗಳ ಚಿತ್ರಣವೇ ಕಥೆಗಳ ಮೊದಲ ಆದ್ಯತೆ. ಅದು ಕಥೆಗಳ ಮೌಲ್ಯವು ಹೌದು, ಜವಾಬ್ದಾರಿಯು ಹೌದು. ಒಬ್ಬ ಕಥೆಗಾರ ಚಿತ್ರಿಸುವ ಪಾತ್ರಗಳು ಸಮಾಜಕ್ಕೆ ಸಾಣೆ ಹಿಡಿಯುತ್ತವೆ. ಚಂದ್ರಕಾಂತ ಕುಸನೂರರ ಕಥೆಗಳು ವೈಯಕ್ತಿಕ ನೆಲೆಯಲ್ಲಿ ಚರ್ಚಿಸಿದರೂ ಕೂಡ ಅದು ಸಮಷ್ಟಿ ಪ್ರಜ್ಞೆಯನ್ನು ಒಳಗೊಂಡಿರುತ್ತದೆ ಎಂಬುದನ್ನು ಪಾತ್ರಗಳ ಮೂಲಕ ಗ್ರಹಿಸುವ ಸಾಧ್ಯತೆಗಳಿವೆ. ಈ ಸಂಶೋಧನಾ ಲೇಖನವು ಕುಸನೂರರ ‘ಅಸಹಜ’ ಮತ್ತು ‘ಎಲ್ಲಿಗೆ’ ಕಥೆಗಳಲ್ಲಿನ ಸಾಮಾಜಿಕ ಮೌಲ್ಯಗಳನ್ನು ಪರಿಶೋಧಿಸುವುದು. ಇಲ್ಲಿನ ಪಾತ್ರಗಳು ಹೇಗೆ ಸಮಾಜಕ್ಕೆ ಸ್ಪಂದಿಸುತ್ತವೆಯೋ ಅಥವಾ ಇಲ್ಲವೋ ಎಂಬುದನ್ನು ಗ್ರಹಿಸಬೇಕು.ಕತೆಗಾರರು ಸೃಷ್ಟಿಸುವ ಪಾತ್ರಗಳ ಮನೋಭೂಮಿಕೆಯನ್ನು ಅರಿಯಬೇಕಿದೆ. ಕಥೆಯ ಆರಂಭ ಹಾಗೂ ಅಂತ್ಯ ಕತೆಗಾರರು ನಿರ್ಣಯಿಸುತ್ತಾರೋ ಅಥವಾ ಓದುಗರಿಗೆ ಬಿಡುತ್ತಾರೋ ಅಥವಾ ಪಾತ್ರಗಳಿಗೆ ಬಿಡುತ್ತಾರೋ ಎಂಬ ಕುತೂಹಲ ಇವರ ಕಥೆಗಳಲ್ಲಿ ಕಂಡುಕೊಳ್ಳಬಹುದು.

ಕತೆಗಾರರು ‘ಮೌಲ್ಯ’ ಎಂಬ ಪದವನ್ನು ಯಾವ ನಿಟ್ಟಿನಲ್ಲಿ ಪ್ರತಿಪಾದಿಸಲು ಹೊರಟಿದ್ದಾರೆ ಎಂಬುದನ್ನು ಗಮನಿಸಬೇಕಾಗಿದೆ. ಕಥೆಗಳಲ್ಲಿನ ಪಾತ್ರಗಳು ಏಕಮುಖಿಯಾಗಿವೆಯೋ, ಬಹುಮುಖಿಯಾಗಿ ಇವೆಯೋ, ಯಾರಿಂದಲು ಪ್ರೇರಣೆ ಪಡೆದಿವೆಯೋ, ಸ್ವ ಚಿಂತನೆಗೆ ಒಳಗಾಗಿದಿಯೋ ಎಂಬುದನ್ನು ವಿವರಿಸುವುದು ಲೇಖನದ ಮೂಲ ಉದ್ದೇಶ.

References

ಚಂದ್ರಕಾಂತ ಕುಸನೂರ. (2008). ಅಂಗೈ ಅಗಲ ಆಕಾಶ. ದಾಮಿನಿ ಸಾಹಿತ್ಯ. ಬೆಂಗಳೂರು.

ಚಂದ್ರಕಾಂತ ಕುಸನೂರ. (2009). ತುಕ್ಕಪ್ಪ ಮಾಸ್ತರ ಮತ್ತು ಇತರ ಕಥೆಗಳು. ಮನೋಹರ ಗ್ರಂಥ ಮಾಲಾ. ಧಾರಾವಾಡ.

ನಾಗಭೂಷಣ ಸ್ವಾಮಿ ಓ. ಎಲ್. (2011). ವಿಮರ್ಶೆಯ ಪರಿಭಾಷೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ. ಬೆಂಗಳೂರು.

ಆಮೂರ ಜಿ. ಎಸ್. (2012). ಕನ್ನಡ ಕಥನ ಸಾಹಿತ್ಯ: ಸಣ್ಣ ಕಥೆ. ಪ್ರಿಯದರ್ಶಿನಿ ಪ್ರಕಾಶನ. ಬೆಂಗಳೂರು.

Downloads

Published

30.11.2024

How to Cite

ರಾಜೇಂದ್ರಕುಮಾರ್ ಕೆ ಮುದ್ನಾಳ್. (2024). ಚಂದ್ರಕಾಂತ ಕುಸನೂರರ ಕಥೆಗಳಲ್ಲಿ ಸಾಮಾಜಿಕ ಮೌಲ್ಯಗಳ ಪರಿಶೋಧ. AKSHARASURYA, 5(03 Special Issue), 01 to 05. Retrieved from https://aksharasurya.com/index.php/latest/article/view/540

Issue

Section

ಸಂಶೋಧನಾ ಲೇಖನಗಳು. | RESEARCH ARTICLE.